ಕೊನೆಗೂ ಮದುವೆಯಾಗುತ್ತೇನೆ ಎಂದ ರಾಹುಲ್ ಗಾಂಧಿ, ಹುಡುಗಿ ಬಗ್ಗೆ ಹೀಗಂದ್ರು !
ನವದೆಹಲಿ, ಜನವರಿ 23: ಭಾರತ್ ಜೋಡೋ ಯಾತ್ರೆಯನ್ನು ಮುಗಿಸುವ ಹಂತದಲ್ಲಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಕೊನೆಗೂ ತಾವು ಮದುವೆಯಾಗುವುದಾಗಿ ತಿಳಿಸಿದ್ದಾರೆ. ಮುಂದುವರೆದು ಮದುವೆಯಾಗುವ ಹುಡುಗಿಯ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಜಮ್ಮು ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸರಿಯಾದ ಹುಡುಗಿ ಸಿಕ್ಕಾಗ ಮದುವೆಯಾಗುತ್ತೇನೆ ಎಂದು ಕರ್ಲಿ ಟೇಲ್ಸ್ ಯೂಟೂಬ್ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
52 ವರ್ಷ ಪ್ರಯಾದ ರಾಹುಲ್ ಗಾಂಧಿ ಅವರು ಭಾರತದ ಅತ್ಯಂತ ಮೋಸ್ಟ್ ವಾಟೆಂಡ್ ಬ್ಯಾಚುಲರ್‌ಗಳ ಪಟ್ಟಿಯಲ್ಲಿ ಇದ್ದಾರೆ. ಅವರು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ನೀಡಿದ ಸಂದರ್ಶನದಲ್ಲಿ ಮದುವೆಯ ಕುರಿತಾದ ಪ್ರಶ್ನೆಗಳಿಗೆ ನಗುತ್ತಾ ಉತ್ತರವನ್ನು ನೀಡಿದ್ದಾರೆ. ಕರ್ಲಿ ಟೇಲ್ಸ್‌ಗೆ ನೀಡಿದ ಸಂದರ್ಶನದಲ್ಲಿ ವೈನಾಡು ಸಂಸದರೂ ಆಗಿರುವ ರಾಹುಲ್ ಗಾಂಧಿ ತಮಗೆ ತಕ್ಕನಾದ ಹುಡುಗಿಯ ಹುಡುಕಾಟದಲ್ಲಿ ಇರುವುದಾಗಿಯೂ, ಸೂಕ್ತ ಹುಡುಗಿ ಸಿಕ್ಕರೆ ಮದುವೆಯಾಗುವುದಾಗಿ ತಿಳಿಸಿದ್ದಾರೆ.
ಸಂದರ್ಶನದಲ್ಲಿ ನೀವು ಶೀಘ್ರದಲ್ಲೇ ಮದುವೆಯಾಗಲು ಯೋಜಿಸುತ್ತಿದ್ದೀರಾ? ನಿಮ್ಮ ಮದುವೆಯ ಬಗ್ಗೆ ಯೋಚನೆ ಇಲ್ಲವೇ ಎಂದು ಸಂದರ್ಶಕಿ ಕೇಳಿದರು. ಅದಕ್ಕೆ ರಾಹುಲ್ ಗಾಂಧಿ ಸರಿಯಾದ ಹುಡುಗಿ ಸಿಕ್ಕಾಗ ತಾನು ಮದುವೆಯಾಗುತ್ತೇನೆ ಎಂದು ಉತ್ತರಿಸಿದರು. ಸಂದರ್ಶಕಿ ಮುಂದುವರೆದು ಹುಡುಗಾಗಿ ಪರಿಶೀಲನೆ ನಡೆಸುತ್ತಿದ್ದೀರಾ ಎಂದು ಕೇಳಿದಾಗ ಅವರು ಇಲ್ಲ ಎಂದರು.
ಬಳಿಕ ಸಂದರ್ಶಕಿ ನಿಮ್ಮನ್ನು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಕೇಳಿದಾಗ ಹೀಗೆಯೇ ಇರಬೇಕು ಎಂದೇನಿಲ್ಲ. ಬುದ್ಧಿವಂತಳಿದ್ದು, ತಮ್ಮನ್ನು ಪ್ರೀತಿಯಿಂದ ನೋಡಿಕೊಂಡರೆ ಸಾಕು ಎಂದರು. ಆಗ ಸಂದರ್ಶಕಿ ತಮಾಷೆಯಾಗಿ ಹೊರೆಗೆ ಸಾಕಷ್ಟು ಜನರು ಈ ಬಗ್ಗೆ ಕುತೂಹಲ ಹೊಂದಿದ್ದಾರೆ ಎಂದು ನಕ್ಕರು.
ಕಳೆದ ಡಿಸೆಂಬರ್‌ನಲ್ಲಿ ರಾಹುಲ್ ಗಾಂಧಿ ಅವರು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ, ಅವರ ಅಜ್ಜಿಯ ಇಂದಿರಾ ಗಾಂಧಿಯ ಗುಣಗಳನ್ನು ತಮ್ಮ ಸಂಗಾತಿ ಹೊಂದಿರಬೇಕೆಂದು ಹೇಳಿದ್ದರು. ನಾನು ಹೆಣ್ಣಿಗೆ ಆದ್ಯತೆ ನೀಡುತ್ತೇನೆ. ಆಕೆಗೆ ನನ್ನ ತಾಯಿ ಮತ್ತು ಅಜ್ಜಿಯ ಗುಣಗಳ ನಡುವಿನ ಮಿಶ್ರಣ ಇದ್ದರೆ ಒಳ್ಳೆಯದು ಎಂದು ಅವರು ಹೇಳಿದ್ದರು.

ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾಗಿದ್ದ ಯಾತ್ರೆ
ಈ ವೇಳೆ ರಾಹುಲ್ ಅವರು ಇಂದಿರಾ ಗಾಂಧಿಯನ್ನು ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ ಎಂದು ಬಣ್ಣಿಸಿದ್ದರು. 129 ದಿನಗಳಲ್ಲಿ 12 ರಾಜ್ಯಗಳ ಮೂಲಕ ಪಾದಯಾತ್ರೆ ನಡೆಸಿದ ನಂತರ ರಾಹುಲ್ ಗಾಂಧಿ ಸದ್ಯ ಜಮ್ಮುವಿನಲ್ಲಿದ್ದಾರೆ. ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಜನವರಿ 30 ರಂದು ಶ್ರೀನಗರದಲ್ಲಿ ಕೊನೆಗೊಳ್ಳಲಿದೆ.

ವಿಜಯಪುರದಿಂದ ಹೆಚ್ಚಿನ ಭದ್ರತೆ
ಜಮ್ಮು ನಗರದ ಹೊರವಲಯದಲ್ಲಿ ಇತ್ತೀಚೆಗೆ ನಡೆದ ಅವಳಿ ಸ್ಫೋಟ ನಡೆದಿತ್ತು. ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ವಿಜಯಪುರದಿಂದ ಹೆಚ್ಚಿನ ಭದ್ರತೆಯ ನಡುವೆ ಪುನರಾರಂಭವಾಯಿತು. ಈಗ ಯಾತ್ರೆಯು ಜಮ್ಮುವಿನ ಸಿದ್ರಾ ಕಡೆಗೆ ಸಾಗುತ್ತಿದೆ.

ಅಂತಿಮ ಹಂತಕ್ಕಾಗಿ ಜಮ್ಮುವಿನಲ್ಲಿ ಹರ್ಷ
ಜಮ್ಮುವಿನ ಸತ್ವಾರಿ ಚೌಕ್ ಬಳಿಯ ಗುರುದ್ವಾರ ಅಶೋಕ್ ನಗರದಲ್ಲಿ ಮಧ್ಯಾಹ್ನ 12 ಗಂಟೆಗೆ ಪಾದಯಾತ್ರೆಗೆ ವಿರಾಮ ಪಡೆದುಕೊಂಡಿದೆ. ಸಿದ್ರಾದಲ್ಲಿ ಕಾಂಗ್ರೆಸ್ ಯಾತ್ರೆ ರಾತ್ರಿ ಸ್ಥಗಿತಗೊಳ್ಳಲಿದೆ. ಒಂದು ದಿನದ ವಿರಾಮದ ನಂತರ ಭಾರತ್ ಜೋಡೋ ಯಾತ್ರೆ ಭಾನುವಾರ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಹೀರಾನಗರ ಮೋರ್ಹ್‌ನಿಂದ ಪುನರಾರಂಭಗೊಂಡು ಜಿಲ್ಲೆಯ ಚಕ್ ನಾನಕ್ ಗ್ರಾಮದಲ್ಲಿ ಕೊನೆಗೊಂಡಿತ್ತು. ಈ ನಡುವೆ ರಾಹುಲ್ ಗಾಂಧಿ ಅವರು ತಮ್ಮ ಭಾರತ್ ಜೋಡೋ ಯಾತ್ರೆಯ ಅಂತಿಮ ಹಂತಕ್ಕಾಗಿ ಜಮ್ಮುವಿಗೆ ತಲುಪಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ನನ್ನ ದೇಶದ ಬಗ್ಗೆ ಅರ್ಥಮಾಡಿಕೊಳ್ಳುತ್ತಿದ್ದೇನೆ
ನಾನು ನನ್ನ ಪೂರ್ವಜರ ಬೇರುಗಳನ್ನು ಹೊಂದಿರುವ ನನ್ನ ಮನೆಗೆ ಹಿಂದಿರುಗುವಾಗ ಜಮ್ಮು ಮತ್ತು ಕಾಶ್ಮೀರವನ್ನು ತಲುಪಲು ನನಗೆ ತುಂಬಾ ಸಂತೋಷವಾಗಿದೆ. ನಾನು ನನ್ನ ಬಗ್ಗೆ, ಪ್ರತಿಯೊಂದು ರಾಜ್ಯ, ನನ್ನ ದೇಶದ ಬಗ್ಗೆ ಕಲಿಯುತ್ತಿದ್ದೇನೆ ಮತ್ತು ಅರ್ಥಮಾಡಿಕೊಳ್ಳುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.












Click it and Unblock the Notifications