ಜನರಿಂದ ಮೇಯರ್ ಆಯ್ಕೆ : ರಾಹುಲ್ ಗಾಂಧಿ ಭರವಸೆ

Recommended Video

      Lok Sabha Elections 2019 : ಭರವಸೆ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್

      ನವದೆಹಲಿ, ಏಪ್ರಿಲ್ 02 : 'ಉತ್ತಮ ನಾಯಕರು ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಪಡಿಸಬೇಕು. ಆದ್ದರಿಂದ, ಮೇಯರ್ ಮತ್ತು ಉಪ ಮೇಯರ್‌ಗಳು ಜನರಿಂದಲೇ ಆಯ್ಕೆಯಾಗುವಂತೆ ಮಾಡುತ್ತೇವೆ' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

      ಈ ಕುರಿತು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 5 ವರ್ಷಗಳ ಅವಧಿಗೆ ಮೇಯರ್‌ಗಳನ್ನು ನೇರವಾಗಿ ಜನರಿಂದಲೇ ಆಯ್ಕೆ ಮಾಡಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

      ಕಾಂಗ್ರೆಸ್ 2019ರ ಲೋಕಸಭಾ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಆದ್ದರಿಂದ, ರಾಹುಲ್ ಗಾಂಧಿ ಅವರು ಪ್ರಮುಖ ವಿಚಾರಗಳನ್ನು ಟ್ವಿಟರ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

      Rahul Gandhi

      2014ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ 100 ಸ್ಮಾರ್ಟ್‌ ಸಿಟಿಗಳನ್ನು ಅಭಿವೃದ್ಧಿ ಮಾಡುವ ಭರವಸೆಯನ್ನು ನೀಡಿತ್ತು. ಆದರೆ, 98 ಸಿಟಿಗಳನ್ನು ಸರ್ಕಾರ ಗುರುತಿಸಿದೆ. ಪ್ರತಿ ನಗರಕ್ಕೆ 500 ಕೋಟಿ ಅನುದಾನವನ್ನು ನಿಗದಿ ಮಾಡಲಾಗಿದೆ.

      ಸ್ಮಾರ್ಟ್ ಸಿಟಿ ಯೋಜನೆಯಡಿ 2016ರ ಜನವರಿಯಲ್ಲಿ 20, 2016ರ ಮೇನಲ್ಲಿ 13, 2016ರ ಸೆಪ್ಟೆಂಬರ್‌ನಲ್ಲಿ 27, 2017ರ ಜೂನ್‌ನಲ್ಲಿ 30 ನಗರಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಘೋಷಣೆ ಮಾಡಲಾಯಿತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+