ದಲಿತರ ಮನೇಲಿ ವೆರೈಟಿ ಅಡುಗೆ ತಯಾರಿಗೆ ರಾಹುಲ್‌ ಹೆಲ್ಪ್‌!

ಕಾಂಗ್ರೆಸ್‌ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ದಲಿತರ ಮನೆಗೆ ಭೇಟಿ ನೀಡಿ ಭೋಜನ ತಯಾರಿಯಲ್ಲಿ ಜೊತೆಯಾಗಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದ ಅಜಯ್ ತುಕಾರಾಂ ಸನಡೆ ಮತ್ತು ಅಂಜನಾ ತುಕಾರಾಂ ಸನಡೆ ದಂಪತಿಯ ನಿವಾಸಕ್ಕೆ ಇತ್ತೀಚೆಗೆ ರಾಹುಲ್‌ ಭೋಜನಕ್ಕೆ ತೆರಳಿದ್ದರು. ಈ ವೇಳೆ ದಲಿತರ ಮನೆಯಲ್ಲಿ ಅವರು ಊಟ ಮಾಡಿರುವ ಬಗ್ಗೆ ಸಂವಾದದಲ್ಲಿ ಮಾತನಾಡಿ, ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

Rahul Gandhi Prepared A Dish In The Kitchen Of A Dalit Home

ಮೊದಲಿಗೆ ರಾಹುಲ್ ಗಾಂಧಿ ಕೊಲ್ಲಾಪುರದಲ್ಲಿ ದಲಿತ ಕುಟುಂಬವನ್ನು ಭೇಟಿಯಾಗಿ ಖುದ್ದು ಅವರ ಅಡುಗೆ ಮನೆಗೆ ತೆರಳಿ, ಅಡುಗೆ ಮನೆಯಲ್ಲಿ ಅಡುಗೆಯೂ ಮಾಡಿ ಸವಿದಿದ್ದಾರೆ. ಈ ವೇಳೆ ಅವರು ಜಾತಿ ತಾರತಮ್ಯ, ಅಸ್ಪೃಶ್ಯತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯೂ ನಡೆಸಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಹುಲ್‌ ಗಾಂಧಿ, ದಲಿತರ ಅಡುಗೆ ಮನೆಗಳ ಬಗ್ಗೆ ಇಂದಿಗೂ ಕೇವಲ ಕೆಲವೇ ಮಂದಿಗೆ ತಿಳಿದಿದೆ. ದಲಿತರು ಏನು ತಿನ್ನುತ್ತಾರೆ? ಅವರು ಅಡುಗೆ ಹೇಗೆ ಮಾಡುತ್ತಾರೆ? ಎನ್ನುವುದು ಅನೇಕರಿಗೆ ತಿಳಿದೇ ಇಲ್ಲ.

ನಾನು ಅಜಯ್ ತುಕಾರಾಂ ಸನಡೆ-ಅಂಜನಾ ತುಕಾರಾಂ ಸನಡೆ ಅವರೊಂದಿಗೆ ಮಧ್ಯಾಹ್ನದ ಊಟ ಸವಿದೆ. ಇವರು ನನ್ನನ್ನು ಕೊಲ್ಲಾಪುರದ ತಮ್ಮ ಅಡುಗೆಮನೆಯಲ್ಲಿ ಸಹಾಯ ಮಾಡಲು ಅನುವು ಮಾಡಿಕೊಡುವ ಮೂಲಕ ನನಗೆ ಆತಿಥ್ಯ ನೀಡಿದರು ಎಂದು ರಾಹುಲ್‌ ಹೇಳಿಕೊಂಡಿದ್ದಾರೆ.

Rahul Gandhi Prepared A Dish In The Kitchen Of A Dalit Home

ನಾವು ಈ ದಂಪತಿ ಜೊತೆಗೆ ಸೇರಿ ಸಬ್ಜಿ, ಹರಭಾರಿಯಾಚಿ ಭಾಜಿ ಮತ್ತು ಬದನೆ ಕಾಯಿಯ ದಾಲ್‌ ಖಾದ್ಯಗಳನ್ನು ಸಿದ್ಧಪಡಿಸಿದೆ. ಅದು ತುಂಬಾ ರುಚಿಕರವಾಗಿತ್ತು ಎಂದಿದ್ದಾರೆ. ಸಂವಿಧಾನವು ಜನರಿಗೆ ಹಕ್ಕುಗಳನ್ನು ನೀಡಿದೆ. ನಾವು ಆ ಸಂವಿಧಾನವನ್ನು ರಕ್ಷಿಸುತ್ತೇವೆ. ಪ್ರತಿಯೊಬ್ಬ ಭಾರತೀಯನೂ ತಮ್ಮ ಹೃದಯದಲ್ಲಿ ಸಹೋದರತ್ವದ ಮನೋಭಾವ ಇಟ್ಟುಕೊಂಡಾಗ ಸಮಾನತೆ ಸಾಧ್ಯ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಬಳಿಕ ರಾಹುಲ್‌ ಗಾಂಧಿ ಅವರು ಆ ಕುಟುಂಬದೊಂದಿಗೆ ಕುಳಿತು ರುಚಿಕರವಾದ ಖಾದ್ಯಗಳನ್ನು ಸವಿಯುತ್ತಾ ಚರ್ಚೆ ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ರಾಹುಲ್‌ ಗಾಂಧಿ ಈ ವಿಡಿಯೋ ಹಂಚಿಕೊಂಡಿದ್ದು, ಬಹುತೇಕರು ಇದಕ್ಕೆ ಮೆಚ್ಚುಗೆಯೂ ವ್ಯಕ್ತಪಡಿಸಿದ್ದಾರೆ.

ಕೆಲವರು ದಲಿತರೆಂದರೆ ಅಸ್ಪೃಶ್ಯರು ಎಂದು ಪರಿಗಣಿಸುತ್ತಾರೆ. ರಾಜಕಾರಣಿಗಳು ಕೂಡ ದಲಿತರನ್ನು ನಿರ್ಲಕ್ಷಿಸುತ್ತಾರೆ. ಆದರೆ, ರಾಹುಲ್‌ ಗಾಂಧಿ ಅವರು ದಲಿತರ ಮನೆಗೆ ತೆರಳಿ, ಅಡುಗೆಯೂ ಮಾಡಿ ಸವಿಯುವ ಮೂಲಕ ಮಾದರಿಯಾಗಿದ್ದಾರೆ ಎಂದು ಹಲವರು ಕಾಮೆಂಟ್‌ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+