ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣದುಬ್ಬರದ ಬಗ್ಗೆ ರಾಹುಲ್ ಮಾತು : ವಿಡಿಯೋ ವೈರಲ್

|
Google Oneindia Kannada News

ಗುಜರಾತ್ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ವಡೋದರಾದಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು ಇದೀಗೆ ಚರ್ಚೆಯ ವಿಷಯವಾಗಿದೆ.

ಹಣದುಬ್ಬರದ ಕುರಿತು ಮಹಿಳೆ ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಿದ ಎರಡೂವರೆ ನಿಮಿಷದ ಈ ವಿಡಿಯೋ ವೈರಲ್ ಆಗಿದ್ದು ಹಣದುಬ್ಬರ ನಿಯಂತ್ರಣದ ಬಗೆಗೆ ರಾಹುಲ್ ಗಾಂಧಿ ಆಡಿದ ಮಾತುಗಳನ್ನು ಕೆಲವರು ಬೆಂಬಲಿಸಿದ್ದರೆ, ಹಲವರು ಈ ಮಾತಿಗೆ ಅರ್ಥವೇ ಇಲ್ಲ ಎಂದು ಗೇಲಿ ಮಾಡಿದ್ದಾರೆ.

'ಆರೆಸ್ಸೆಸ್ ನಲ್ಲಿ ಚಡ್ಡಿ ಹಾಕಿಕೊಂಡ ಮಹಿಳೆಯನ್ನು ನೋಡಿದ್ದೀರಾ?''ಆರೆಸ್ಸೆಸ್ ನಲ್ಲಿ ಚಡ್ಡಿ ಹಾಕಿಕೊಂಡ ಮಹಿಳೆಯನ್ನು ನೋಡಿದ್ದೀರಾ?'

ಅಷ್ಟಕ್ಕೂ ಆ ವಿಡಿಯೋದಲ್ಲೇನಿದೆ? ಮಹಿಳೆ ಕೇಳಿದ ಪ್ರಶ್ನೆ ಏನು? ಮುಂದೆ ಓದಿ.

"ದೇಶದಲ್ಲಿರುವ ಶೇ.20 ರಷ್ಟು ಜನರು ಶ್ರೀಮಂತರು. ಉಳಿದ 80 ಪ್ರತಿಶತ ಜನರು ಬಡ ಮತ್ತು ಮಧ್ಯಮ ವರ್ಗದವರು. ಇವರಿಗೆಲ್ಲರಿಗೂ ಹಣದ ಅಗತ್ಯ ಬಹಳ ಇದೆ. ಈಗಾಗಲೇ ಹಣದುಬ್ಬರ ಹೆಚ್ಚಾಗಿದ್ದು, ಸಾಮಾನ್ಯ ಜನರಿಗೆ ದಿನಬಳಕೆಯ ವಸ್ತುಗಳ ಖರೀದಿಯೂ ಕಷ್ಟ ಅನ್ನಿಸಿದೆ. ಹೀಗಿರುವಾಗ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಹಣದುಬ್ಬರ ಕಡಿಮೆ ಮಾಡುವುದಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬಹುದು?" ಎಂದು ಮಹಿಳೆಯೊಬ್ಬರು ಪ್ರಶ್ನಿಸಿದ್ದಾರೆ.

ತಾಯಿ ಮಗ ಮಾತ್ರ ಅಧ್ಯಕ್ಷರಾಗಲು ಸಾಧ್ಯ : ಅಯ್ಯರ್ ವ್ಯಂಗ್ಯತಾಯಿ ಮಗ ಮಾತ್ರ ಅಧ್ಯಕ್ಷರಾಗಲು ಸಾಧ್ಯ : ಅಯ್ಯರ್ ವ್ಯಂಗ್ಯ

ಈ ಪ್ರಶ್ನೆಗೆ ಉತ್ತರ ನೀಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲು ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡುತ್ತೇವೆ. ಹಣದುಬ್ಬರ ನಿಯಂತ್ರಣಕ್ಕೆ ಇದು ಮೊದಲ ಹೆಜ್ಜೆ ಎಂದಿದ್ದಾರೆ. ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಸರ್ಕಾರ ಜಿಎಸ್ ಟಿ(ಸರಕು ಮತ್ತು ಸೇವಾ ತೆರಿಗೆ) ಯಡಿಯಲ್ಲಿ ತರಬೇಕು ಎಂದು ಸಹ ಇದೇ ಸಂದರ್ಭದಲ್ಲಿ ಅವರು ಹೇಳಿದರು.

"ನಾಪತ್ತೆ ಪಟ್ಟಿಯಲ್ಲಿ ರಾಹುಲ್ ಹೆಸರು. ಇದೇ ಸಂಸದರ ಸಾಧನೆ!" ಬಿಜೆಪಿ ವ್ಯಂಗ್ಯ

ಆದರೆ ರಾಹುಲ್ ಗಾಂಧಿಯರ ಈ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ಟ್ರೆಂಡಿಂಗ್ ಆಗಿದ್ದು, ಅವರ ಮಾತನ್ನು ಸಾಕಷ್ಟು ಜನ ಗೇಲಿ ಮಾಡಿದ್ದಾರೆ. ಕೆಲವರು ಅವರ ಮಾತು ಸರಿ ಎಂದು ಬೆಂಬಲಿಸಿದ್ದಾರೆ ಸಹ.

ಪ್ರಶ್ನೆಯಿಂದ ಜಾರಿಕೊಳ್ಳೋದು ಹೇಗೆ?!

ಈ ವಿಡಿಯೋ ನೋಡಿದರೆ ಏನನ್ನಿಸುತ್ತೆ ಅಂದ್ರೆ, ಉತ್ತರ ಗೊತ್ತಿಲ್ಲದ ವಿದ್ಯಾರ್ಥಿಯೊಬ್ಬ ಹೇಗೆ ಪ್ರಶ್ನೆಗಳಿಂದ ಜಾರಿಕೊಳ್ಳುತ್ತಾನೆ ಎಂಬುದು ತಿಳಿಯುತ್ತದೆ ಎಂದು ರಾಹುಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಜಿಎಸ್ ಟಿ ಕೌನ್ಸಿಲ್ ಅನ್ನುಏಕೆ ಬೆಂಬಲಿಸುತ್ತಿಲ್ಲ?

ರಾಹುಲ್ ಗಾಂಧಿಯವರಿಗೆ ಪೆಟ್ರೋಲ್ ದರ ಇಳಿಯಬೇಕು ಎಂದಾದರೆ, ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ರಾಜ್ಯಗಳೇಕೆ ಜಿಎಸ್ ಟಿ ಕೌನ್ಸಿಲ್ ಅನ್ನು ಬೆಂಬಲಿಸುತ್ತಿಲ್ಲ?

ಗಿರೀಶ್ ಬೆಲ್ಲದ್

ಇದಕ್ಕೂ ಮೊದಲು ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ಸಿಗರು, ದೇಶ ಹಾಳು ಮಾಡುವ ಬದಲು, ಈ ಮೊದಲೇ ಇಂಥ ಕ್ರಮಗಳನ್ನು ಕೈಗೊಳ್ಳಲಿಲ್ಲ?! ಎಂದು ಗಿರೀಶ್ ಬೆಲ್ಲದ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಸರಿಯಾಗಿ ಹೇಳಿದಿರಿ!

ನಿಮ್ಮ ಮಾತು ಸರಿಯಾಗಿದೆ ರಾಹುಲ್ ಗಾಂಧಿ ಎಂದು ಮೆಹ್ತಾಬ್ ಖಾನ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಗುಜರಾತ್ ನಿಂದ ಸ್ಪರ್ಧಿಸಲಿ

ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ ಗೆಲುವಿನ ಬಗ್ಗೆ ಅಷ್ಟೆಲ್ಲ ವಿಶ್ವಾಸವಿದ್ದರೆ ಗುಜರಾತಿನಿಂದ ಸ್ಪರ್ಧಿಸಲಿ ಎಂದು ಜೆ.ಆರ್.ಭಿಮರ್ಜ್ಕ ಎಂಬುವವರು ಸವಾಲೆಸೆದಿದ್ದಾರೆ.

English summary
Foundation of inflation was the increase in the petrol and diesel prices. Ruling government should include fuel prices in the Goods and Services Tax (GST) rates, responding to a question congress vice president Rahul Gandhi told. The video becames viral now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X