ರೋಟಿ, ಮಾತ್ರೆ ತಿಂದು ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ
ಉದಯಪುರ, ಸೆ 12: ಅರ್ಧ ರೋಟಿ ತಿಂದು ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎನ್ನುವುದು ಹಳೇ ಘೋಷಣೆ. ಕೂಲಿ ಕಾರ್ಮಿಕರಿಗೆ ಆಹಾರ ಭದ್ರತೆ ದೊರೆತಾಗ ದೇಶ ಅಭಿವೃದ್ದಿ ಕಾಣಲು ಸಾಧ್ಯ.
ರೊಟ್ಟಿ ತಿಂದು, ನೂರು ದಿನ ಕೆಲಸ ಮಾಡಿ, ಉಚಿತ ಮಾತ್ರೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ (ಪೂರಿ ರೋಟಿ ಖಾಯೆಂಗೆ, ಸೋ ದಿನ್ ಕಾಮ್ ಕರೇಂಗೆ, ದವಾಯಿ ಖಾಯೆಂಗೆ ಔರ್ ಕಾಂಗ್ರೆಸ್ ಲಾಯೆಂಗೇ) ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
ರಾಜಸ್ಥಾನದ ಸಲುಂಬರ್ ನಲ್ಲಿ ಭಾರೀ ಸಾರ್ವಜನಿಕ ಸಭೆಯನ್ನು (ಸೆ 11) ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ವಿಪಕ್ಷಗಳು ಮೂಲ ಸೌಕರ್ಯದ ಬಗ್ಗೆ ಧ್ವನಿ ಎತ್ತುತ್ತಿವೆ. ಆದರೆ ಅವರಿಗೆ ಕಾರ್ಮಿಕರ ಬದುಕು ಚೆನ್ನಾಗಿರ ಬೇಕೆನ್ನುವ ಉದ್ದೇಶವಿಲ್ಲ.

ಆಹಾರ ಭದ್ರತೆ ಕಾಯ್ದೆ ಕಾಂಗ್ರೆಸ್ಸಿನ ಕಲ್ಯಾಣ ಯೋಜನೆ. ದೇಶದ ಪ್ರಜೆ ಹಸಿವಿನಿಂದ ಸಾಯ ಬಾರದೆನ್ನುವುದು ನಮ್ಮ ಪಕ್ಷದ ಉದ್ದೇಶ. ಈ ಕಾಯ್ದೆ ಜಾರಿಗೆ ತರಲು ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ನಮಗೆ ಸಹಕಾರ ನೀಡಲಿಲ್ಲ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಜೈಪುರದಲ್ಲಿ ನರೇಂದ್ರ ಮೋದಿ ಭಾಷಣದ ಒಂದು ದಿನ ತರುವಾಯ ಕಾಂಗ್ರೆಸ್ ನಡೆಸಿದ ಈ ಸಭೆಯಲ್ಲಿ ರಾಹುಲ್ ಗಾಂಧಿ, ಬಡ ಕಾರ್ಮಿಕರಿಗೆ ಉಚಿತ್ ಔಷದಿಯನ್ನು ನೀಡಿ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರಕಾರ ಇತರ ಪಕ್ಷಗಳಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸಿದ್ದಾರೆ.












Click it and Unblock the Notifications