ಏಪ್ರಿಲ್ 15 ರಂದು ರಾಹುಲ್ ಗಾಂಧಿ ದರ್ಶನ ಪಕ್ಕಾ
ನವದೆಹಲಿ, ಏ. 14: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಬುಧವಾರ ದೆಹಲಿಗೆ ಮರಳಲಿದ್ದಾರೆ ಎಂಬುದು ಖಚಿತವಾಗಿದೆ. ಸಕ್ರಿಯ ರಾಜಕಾರಣದಿಂದ ರಾಹುಲ್ ಮರೆಯಾಗಿ ಸುಮಾರು 55 ದಿನ ಕಳೆದಿದ್ದು ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ರಾಹುಲ್ ಕಣ್ಮರೆಯ ಬಗ್ಗೆ ವಿವಿಧ ರೀತಿಯ ಆರೋಪ ಮಾಡಿದ್ದವು.
ಸಕ್ರಿಯ ರಾಜಕಾರಣದಿಂದ ದೂರವಾಗಿದ್ದ ರಾಹುಲ್ ಸಂಸತ್ತಿನ ಬಜೆಟ್ ಅಧಿವೇಶನ ಮತ್ತು ಮಾತ್ರವಲ್ಲದೆ ತಮ್ಮ ಪಕ್ಷಕ್ಕೆ ಮುಖ್ಯವಾಗಿದ್ದ ಹಲವು ಪ್ರಮುಖ ವಿದ್ಯಮಾನಗಳು ಮತ್ತು ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡಿದ್ದಾರೆ.[ರಾಹುಲ್ ಗಾಂಧಿ ಪತ್ತೆ ಹಚ್ಚುವಲ್ಲಿ ಸುಬ್ರಮಣ್ಯ ಸ್ವಾಮಿ ಯಶಸ್ವಿ!]
ಭೂಸ್ವಾಧೀನ ಕಾಯ್ದೆ ವಿರೋಧಿಸಿ ಏ.19ರಂದು ಹಮ್ಮಿಕೊಂಡಿರುವ ರೈತರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಬಂದೇ ಬರುತ್ತಾರೆ ಎಂದು ಕಾಂಗ್ರೆಸ್ ಈ ಹಿಂದೆಯೇ ಹೇಳಿತ್ತು. ಈ ಹಿನ್ನೆಲೆಯಲ್ಲಿ ಬುಧವಾರವೇ ರಾಹುಲ್ ದರ್ಶನವಾಗಲಿದೆ ಎನ್ನಲಾಗಿದೆ.

ರಾಹುಲ್ ಬಗ್ಗೆ ಯಾಕೆ ಪದೇಪದೇ ಪ್ರಶ್ನೆ ಮಾಡುತ್ತೀರಿ, ಅಂಬೇಡ್ಕರ್ ಜಯಂತಿಯಂಥ ಕಾರ್ಯಕ್ರಮದ ಬಗ್ಗೆ ಗಮನ ಹರಿಸಿ, ಅವರು ಆಗಮಿಸುವ ಸಮಯಕ್ಕೆ ಆಗಮಿಸುತ್ತಾರೆ ಎಂದು ಪಕ್ಷದ ಮುಖಂಡ ಎ.ಕೆ.ಆಂಟನಿ ಮಾಧ್ಯಮಗಳಿಗೆ ಕಟುವಾದ ಉತ್ತರವನ್ನೇ ನೀಡಿದ್ದರು.[ಕಾಣೆಯಾಗಿದ್ದಾರೆ: ರಾಹುಲ್ ಗಾಂಧಿ, ಅಮೇಥಿ ಸಂಸದ]
ವಿಶ್ರಾಂತಿ ಪಡೆದು ಆಗಮಿಸುತ್ತಿರುವ ರಾಹುಲ್ ಸಂಪೂರ್ಣ ಕಳೆಗುಂದಿರುವ ಪಕ್ಷಕ್ಕೆ ಯಾವ ರೀತಿಯಲ್ಲಿ ಚೇತರಿಕೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೇ ಕಾಂಗ್ರೆಸ್ ನಲ್ಲಿಯೂ ನಾಯಕತ್ವ ಬದಲಾವಣೆ ಕುರಿತಾದ ಕೂಗುಗಳು ಕೇಳಿ ಬಂದಿದ್ದವು. ಪ್ರಿಯಾಂಕಾ ವಾದ್ರಾ ಅವರಿಗೆ ನಾಯಕತ್ವ ನೀಡಬೇಕು ಎಂಬ ಒತ್ತಾಯವೂ ಬಂದಿತ್ತು.












Click it and Unblock the Notifications