• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಡ್ಡಾ ಯಾರು? ಅವರೇನು ನನ್ನ ಪ್ರೊಫೆಸರಾ?: ರಾಹುಲ್ ಗಾಂಧಿ ಪ್ರಶ್ನೆ

|

ನವದೆಹಲಿ, ಜನವರಿ 19: ತಮಗೆ ಸರಣಿ ಪ್ರಶ್ನೆಗಳನ್ನು ಎಸೆದಿರುವ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, 'ಅವರು ಯಾರು? ಅವರಿಗೆ ನಾನೇಕೆ ಉತ್ತರ ನೀಡಬೇಕು?' ಎಂದು ಪ್ರಶ್ನಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿಯೊಂದನ್ನು ನಿರ್ಮಿಸಿದೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿದ್ದ ನಡ್ಡಾ, ರಾಹುಲ್ ಗಾಂಧಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. 'ಮಿಸ್ಟರ್ ಗಾಂಧಿ ಅವರು ಈಗ ತಮ್ಮ ಮಾಸಿಕ ರಜಾದಿನದಿಂದ ವಾಪಸಾಗಿದ್ದಾರೆ. ನಾನು ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸಿದ್ದೇನೆ. ಅವರು ಅದರ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಲಿದ್ದಾರೆ ಎಂದು ಭಾವಿಸುತ್ತೇನೆ' ಎಂಬುದಾಗಿ ಹೇಳಿದ್ದರು.

ಕೃಷಿ ಕ್ಷೇತ್ರದ ನಿರ್ನಾಮಕ್ಕೆ ಕೇಂದ್ರ ಕಸರತ್ತು ನಡೆಸುತ್ತಿದೆ; ರಾಹುಲ್ ಗಾಂಧಿಕೃಷಿ ಕ್ಷೇತ್ರದ ನಿರ್ನಾಮಕ್ಕೆ ಕೇಂದ್ರ ಕಸರತ್ತು ನಡೆಸುತ್ತಿದೆ; ರಾಹುಲ್ ಗಾಂಧಿ

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, 'ಅವರು ಯಾರು? ನಾನ್ಯಾಕೆ ಅವರಿಗೆ ಉತ್ತರ ನೀಡಬೇಕು? ಅವರು ನನ್ನ ಪ್ರೊಫೆಸರ್ ಏನು? ನಾನು ಈ ದೇಶಕ್ಕೆ ಉತ್ತರ ನೀಡುತ್ತೇನೆ' ಎಂದು ಹೇಳಿದ್ದಾರೆ.

'ರಾಹುಲ್ ಗಾಂಧಿ, ಅವರ ವಂಶ ಮತ್ತು ಕಾಂಗ್ರೆಸ್, ಚೀನಾ ಕುರಿತು ಸುಳ್ಳು ಹೇಳುವುದನ್ನು ಎಂದು ನಿಲ್ಲಿಸುತ್ತದೆ? ಅರುಣಾಚಲ ಪ್ರದೇಶದ ಭಾಗ ಸೇರಿದಂತೆ ಸಾವಿರಾರು ಕಿಮೀ ಪ್ರದೇಶಗಳನ್ನು, ಬೇರಾರೂ ಅಲ್ಲ ಪಂಡಿತ್ ನೆಹರೂ ಅವರು ಚೀನಾಕ್ಕೆ ಉಡುಗೊರೆಯಾಗಿ ನೀಡಿದ್ದನ್ನು ಅವರು ನಿರಾಕರಿಸುತ್ತಾರೆಯೇ? ಕಾಂಗ್ರೆಸ್ ಮತ್ತೆ ಮತ್ತೆ ಏಕೆ ಚೀನಾಕ್ಕೆ ಶರಣಾಗಿತ್ತು?' ಎಂದು ನಡ್ಡಾ ಪ್ರಶ್ನಿಸಿದ್ದರು.

ಕೃಷಿ ಕಾಯ್ದೆಯ ನ್ಯೂನತೆ ತಿಳಿಸಲು ನಿಮ್ಮ ಸಹಕಾರ ಬೇಕು: ರಾಹುಲ್ ಗಾಂಧಿಕೃಷಿ ಕಾಯ್ದೆಯ ನ್ಯೂನತೆ ತಿಳಿಸಲು ನಿಮ್ಮ ಸಹಕಾರ ಬೇಕು: ರಾಹುಲ್ ಗಾಂಧಿ

ರಾಹುಲ್ ಗಾಂಧಿ ದ್ವಿಮುಖ ನೀತಿ ಅನುಸರಿಸುತ್ತಿದ್ದು, ರೈತರನ್ನು ಪ್ರಚೋದಿಸುವ ಮತ್ತು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಗಳಿದ್ದಾಗ ದಶಕಗಳವರೆಗೂ ರೈತರು ಬಡವರಾಗಿಯೇ ಏಕೆ ಉಳಿದಿದ್ದರು? ಅವರು ವಿರೋಧಪಕ್ಷದಲ್ಲಿ ಇದ್ದಾಗ ಮಾತ್ರವೇ ರೈತರ ಬಗ್ಗೆ ಅನುಕಂಪ ಉಂಟಾಗುತ್ತದೆಯೇ? ಎಂದು ಟೀಕಿಸಿದ್ದರು.

English summary
Congress leader Rahul Gandhi hits back at BJP president JP Nadda and asked who is he? why should i answer to him?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X