ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು
ರಾಜಸ್ಥಾನ, ಸೆ.17 : ಜನರಿಗೆ ಮೂಲಭೂತ ಸೌಕರ್ಯ ಒದಗಿಸಿ ಕೊಡಲು ಕಾಂಗ್ರೆಸ್ ಸರ್ಕಾರ ಶ್ರಮಿಸುತ್ತದೆ ಎಂದು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ರಾಜಸ್ಥಾನದ ಬರನ್ ನಲ್ಲಿ ಮಂಗಳವಾರ ಅವರು, ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.
ಬಡತನ, ಮೂಲಭೂತ ಸೌಕರ್ಯ, ಶಿಕ್ಷಣ, ಆಹಾರ ಉತ್ಪಾದನೆ ಮುಂತಾದ ವಿಚಾರಗಳ ಕುರಿತು ರಾಹುಲ್ ಗಾಂಧಿ ಮಾತನಾಡಿದರು. ದೇಶದ ಎಲ್ಲಾ ಜನರಿಗೂ ಮೂಲಸೌಕರ್ಯ ಅಗತ್ಯವಾಗಿದೆ. ಕಾಂಗ್ರೆಸ ಸರ್ಕಾರ ಎಲ್ಲಾ ಜನರಿಗೆ ಅಗತ್ಯ ಸೌಲಭ್ಯ ಒದಗಿಸಲು ಕೆಲಸ ಮಾಡುತ್ತದೆ ಎಂದು ರಾಹುಲ್ ಘೋಷಿಸಿದರು.

ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು
* ದೇಶದ ಎಲ್ಲಾ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಡಳಿತ ಮತ್ತು ವಿರೋಧ ಪಕ್ಷಗಳು ಹೇಳುತ್ತವೆ. ಆದರೆ, ಕಾಂಗ್ರೆಸ್ ಮಾತ್ರ ಬಡವರ ಅಭಿವೃದ್ದಿ ಬಗ್ಗೆ ಕಾಳಜಿ ವಹಿಸುತ್ತದೆ. ಬಿಜೆಪಿ ಕೇವಲ ಮಾತನಾಡುತ್ತದೆ.
* ಕಡು ಬಡವನೂ ದೊಡ್ಡ ಕನಸು ಕಾಣಬೇಕು. ಕೂಲಿ ಕಾರ್ಮಿಕರೂ ಕೂಡ ವಿಮಾನ ನೋಡವಂತಾಗಬೇಕು. ತನ್ನ ಮಗ ವಿಮಾನ ಹಾರಿಸಬೇಕು ಎಂದು ಕನಸು ಕಾಣಬೇಕು. ಬಡವರು ಕನಸು ಕಂಡಿದ್ದನ್ನು ಸರ್ಕಾರ ನನಸು ಮಾಡುತ್ತದೆ. ಆಗ ದೇಶ ಅಭಿವೃದ್ಧಿ ಆಗುತ್ತದೆ.
* ಬಿಜೆಪಿ ಕೇವಲ ರಾಜಕಾರಣಿಗಳು ಕನಸು ಕಾಣಬೇಕು ಎಂದು ಪ್ರತಿಪಾದಿಸುತ್ತದೆ. ಬಡಜನರ ಬಗ್ಗೆ ಬಿಜೆಪಿಗೆ ಯಾವುದೇ ಕಾಳಜಿ ಇಲ್ಲ. ಶ್ರೀಮಂತರ ಪರವಾಗಿ ಬಿಜೆಪಿ ಯಾವಾಗಲೂ ಕೆಲಸ ಮಾಡುತ್ತದೆ.
* ಕಾಂಗ್ರೆಸ್ ರೈತರಿಗೆ ಗೌರವ ಕೊಡುತ್ತದೆ. ಆದ್ದರಿಂದಲೇ ಭೂ ಸ್ವಾಧೀನ ಮಸೂಧೆ ಜಾರಿಗೆ ತಂದಿದ್ದೇವೆ. ಬಡವರಿಗಾಗಿ ಆಹಾರ ಭದ್ರತೆ ಯೋಜನೆ ಜಾರಿಗೊಳಿಸಿದ್ದೇವೆ. ಬಡವರ ಜಮೀನನ್ನು ಕಿತ್ತುಕೊಳ್ಳುವ ವಿಪಕ್ಷಗಳ ತಂತ್ರವನ್ನು ಭೂ ಸ್ವಾಧೀನ ಮಸೂದೆ ಮೂಲಕ ವಿಫಲಗೊಳಿಸಿದ್ದೇವೆ.
* ಸಾಮಾನ್ಯ ಜನರಿಗೆ ಉದ್ಯೋಗ ದೊರಕಿಸಬೇಕು ಎಂಬುದು ನಮ್ಮ ಸರ್ಕಾರ ದೊಡ್ಡ ಗುರಿ. ಆದರೆ, ಈ ಕುರಿತು ಸಂಸತ್ ನಲ್ಲಿ ಚರ್ಚಿಸಲು ಪ್ರತಿಪಕ್ಷ ಬಿಜೆಪಿ ಅವಕಾಶ ನೀಡುವುದಿಲ್ಲ. ಸಂಸತ್ ಕಲಾಪಕ್ಕೂ ಅಡ್ಡಿ ಉಂಟು ಮಾಡಿ ಜನರಿಗೆ ದ್ರೋಹ ಮಾಡುತ್ತಿದೆ.












Click it and Unblock the Notifications