ರಾಹುಲ್‌ಗೆ ಪ್ರಣಬ್ ತಿಲಕ, ಸಿದ್ದರಾಮಯ್ಯ ಅಪ್ಪುಗೆಯ ಪುಳಕ!

Posted By:
Subscribe to Oneindia Kannada
   ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ | ಮೋದಿಗೆ ಸಿದ್ದರಾಮಯ್ಯ ತಿರುಗೇಟು |Oneindia Kannada

   ನವದೆಹಲಿ, ಡಿಸೆಂಬರ್ 4: ಕಾಂಗ್ರೆಸ್ ಪಾಲಿನ 'ಡಾರ್ಲಿಂಗ್' ರಾಹುಲ್ ಗಾಂಧಿ ಎಂದು ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ಸೋಮವಾರ ಬಣ್ಣಿಸಿದ್ದಾರೆ.

   ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಬೆನ್ನಿಗೆ ಮನಮೋಹನ್ ಸಿಂಗ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಪ್ರಮುಖ ನಾಯಕರು ನಿಂತಿದ್ದಾರೆ.

   ಎಐಸಿಸಿ ಅಧ್ಯಕ್ಷೀಯ ಚುನಾವಣೆ: ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

   ಇದು ಅದ್ಭುತವಾದ ದಿನ. ಕಾಂಗ್ರೆಸ್ ನ ಪುರುಷರು- ಮಹಿಳೆಯರ ಪಾಲಿನ ಅಚ್ಚುಮೆಚ್ಚಾದ ರಾಹುಲ್ ಗಾಂಧಿ ಅವರ ದೇಶ ಹಾಗೂ ಕಾಂಗ್ರೆಸ್ ಬಗೆಗಿನ ಪ್ರೀತಿ ಕಡೆಗೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ ಎಂದು ಮನಮೋಹನ್ ಸಿಂಗ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

   ರಾಹುಲ್ ಪಟ್ಟಾಭಿಷೇಕಕ್ಕೆ ದಿನಗಣನೆ: ಯಾರು, ಏನಂದರು?

   ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರ ಹೆಸರನ್ನು ಸೂಚಿಸಬೇಕಾದ ನಾಲ್ವರ ಪೈಕಿ ಮನಮೋಹನ್ ಸಿಂಗ್ ಕೂಡ ಒಬ್ಬರು. ಮುಖ್ಯ ಸೂಚಕರಾಗಿ ಹಾಲಿ ಅಧ್ಯಕ್ಷೆಯಾದ ಸೋನಿಯಾ ಗಾಂಧಿ ಇರುತ್ತಾರೆ.

   "ಕಳೆದ ಹತ್ತೊಂಬತ್ತು ವರ್ಷದಿಂದ ಸೋನಿಯಾ ಗಾಂಧಿ ಸೇವೆ ಸಲ್ಲಿಸಿದ್ದಾರೆ. ಇದೀಗ ಪಕ್ಷದ ಪಾಲಿಗೆ ಹೊಸ ಅಧ್ಯಾಯ ಆರಂಭವಾಗಿದೆ. ಪಕ್ಷವನ್ನು ಈ ವರೆಗೆ ಸಾಗಿಬಂದಿರುವ ಮೇಲ್ಪಂಕ್ತಿಯಲ್ಲೇ ರಾಹುಲ್ ಗಾಂಧಿ ಕರೆದೊಯ್ಯುತ್ತಾರೆ" ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

   ಇನ್ನು ನಾಮಪತ್ರ ಸಲ್ಲಿಸುವ ಮುನ್ನ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಹುಲ್ ಗಾಂಧಿ ಹಣೆಗೆ ಶುಭಸೂಚಕವಾಗಿ ತಿಲಕ ಇಟ್ಟು ಆಶೀರ್ವಾದ ಮಾಡಿರುವುದು ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

   ಮನಮೋಹನ್ ಸಿಂಗ್, ಪ್ರಣವ್ ಮುಖರ್ಜಿಗೆ ಕರೆ

   ಮನಮೋಹನ್ ಸಿಂಗ್, ಪ್ರಣವ್ ಮುಖರ್ಜಿಗೆ ಕರೆ

   ಸೋಮವಾರದಂದು ತಮ್ಮ ನಾಮಪತ್ರ ಸಲ್ಲಿಸುವ ಮುನ್ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ರಾಹುಲ್ ಗಾಂಧಿ ಕರೆ ಮಾಡಿದ್ದರು. ಇನ್ನೇನು ಅಧಿಕೃತವಾಗಿ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷರಾಗಿ ಘೋಷಣೆ ಮಾಡುವುದೊಂದು ಬಾಕಿ ಇದೆ. ಪಕ್ಷದಲ್ಲಿ ಬೇರೆ ಯಾರೂ ರಾಹುಲ್ ವಿರುದ್ಧ ಸ್ಪರ್ಧೆ ಮಾಡುವುದಿದ್ದರೆ ನಾಮಪತ್ರ ಸಲ್ಲಿಸಲು ಡಿಸೆಂಬರ್ ನಾಲ್ಕು ಕೊನೆ ದಿನವಾಗಿದೆ.

   ರಾಹುಲ್ ಉತ್ತಮ ಪ್ರಧಾನಿ ಆಗಬಲ್ಲರು

   ರಾಹುಲ್ ಉತ್ತಮ ಪ್ರಧಾನಿ ಆಗಬಲ್ಲರು

   ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಶೀಲಾ ದೀಕ್ಷಿತ್ ಮತ್ತು ಮೊಹ್ಸೀನಾ ಕಿದ್ವಾಯಿ ಅವರಂಥ ಹಿರಿಯ ಮುಖಂಡರನ್ನು ರಾಹುಲ್ ಗಾಂಧಿ ಅವರು ಆಲಂಗಿಸಿದರು. ಶೀಲಾ ದೀಕ್ಷಿತ್ ಕೂಡ ಅನುಮೋದಕರಲ್ಲಿ ಒಬ್ಬರಾಗಿದ್ದಾರೆ. ಇನ್ನು ಪಂಜಾಬ್ ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆರಂಭದಲ್ಲಿ ಸೋನಿಯಾ ಗಾಂಧಿ ಅವರ ಸ್ಥಾನಕ್ಕೆ ರಾಹುಲ್ ಬರುವುದರ ಬಗ್ಗೆ ಸಣ್ಣ ಮಟ್ಟಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈಗ, ರಾಹುಲ್ ಉತ್ತಮ ಪ್ರಧಾನ ಮಂತ್ರಿ ಆಗಬಲ್ಲರು ಎಂದಿದ್ದಾರೆ.

   ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ

   ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ

   ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ಏರುವ ಬಗ್ಗೆ ಗುಜರಾತ್ ನಲ್ಲಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದರು. "ಕೆಲ ದಿನಗಳ ಹಿಂದೆ ನಾನು ಮೂರು ಚುನಾವಣೆಗಳ ಫಲಿತಾಂಶ ಹೀಗೆ ಬರುತ್ತದೆ ಎಂದು ಹೇಳಿದ್ದೆ. ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆ, ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದಿದ್ದೆ. ಇನ್ನೊಂದು ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನದ ಚುನಾವಣೆ. ಅಲ್ಲಿ ಒಂದೇ ಕುಟುಂಬದವರೇ ಗೆಲ್ಲುತ್ತಾರೆ" ಎಂದಿದ್ದರು.

   ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ತಿರುಗೇಟು

   ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ತಿರುಗೇಟು

   ಇನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿಗೆ ತಿರುಗೇಟು ನೀಡಿದ್ದಾರೆ. ಯಾರಾದರೂ ಚುನಾವಣೆಗೆ ಸ್ಪರ್ಧಿಸ ಬಯಸಿದರೆ ಧಾರಾಳವಾಗಿ ಸ್ಪರ್ಧೆ ಮಾಡಬಹುದು. ಇದು ಪ್ರಜಾಸತ್ತಾತ್ಮಕವಾಗಿಯೇ ನಡೆಯುತ್ತದೆ. ಕಾಂಗ್ರೆಸ್ ನ ಆಂತರಿಕ ವಿಚಾರವನ್ನು ಮಾತನಾಡುವ ಹಕ್ಕು ಪ್ರಧಾನಿಗಳಿಗಿಲ್ಲ ಎಂದಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Rahul Gandhi is a darling of the Congress and he will carry forward the great traditions of the party, said Dr.Manmohan Singh. Karnataka CM Siddaramaiah hit back at PM Narendra Modi comment about Rahul Gandhi elevation as AICC president.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ