ರಫೇಲ್ ವಿಮಾನ ಖರೀದಿ ಪರವಾಗಿ ವಾಯುಸೇನೆ ಮುಖ್ಯಸ್ಥರು ಹೇಳಿದ್ದೇನು?
ಭಾರತೀಯ ವಾಯುಸೇನೆ ಮುಖ್ಯಸ್ಥ ಬಿ.ಎಸ್.ಧನೋವಾ ಬುಧವಾರದಂದು ಫ್ರಾನ್ಸ್ ನಿಂದ ರಫೇಲ್ ಯುದ್ಧ ವಿಮಾನ ಖರೀದಿ ಮಾಡುತ್ತಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಈ ವಿಮಾನವು 'ಗೇಮ್ ಚೇಂಜರ್' ಎಂದು ಅವರು ಕರೆದಿದ್ದಾರೆ.
"ನಮಗೆ ಒಳ್ಳೆ ಪ್ಯಾಕೇಜ್ ಸಿಕ್ಕಿದೆ. ರಫೇಲ್ ವ್ಯವಹಾರದಿಂದ ಬಹಳ ಅನುಕೂಲಗಳಿವೆ" ಎಂದು ದೆಹಲಿಯಲ್ಲಿ ಧನೋವಾ ಹೇಳಿದ್ದು, ಯುದ್ಧ ವಿಮಾನಕ್ಕೆ ಪಾವತಿಸುತ್ತಿರುವ ಮೊತ್ತ ಹೆಚ್ಚಾಯಿತು ಎಂಬ ಆಕ್ಷೇಪವನ್ನು ನಿರಾಕರಿಸಿದ್ದಾರೆ.
ರಫೇಲ್ ಯುದ್ಧ ವಿಮಾನ ಖರೀದಿ ವಿಚಾರವಾಗಿ ಕಾಂಗ್ರೆಸ್ ನೇತೃತದಲ್ಲಿ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ವಾಯುಸೇನೆ ಮುಖ್ಯಸ್ಥರ ಈ ಹೇಳಿಕೆ ಪ್ರಾಮುಖ್ಯ ಪಡೆದುಕೊಂಡಿದೆ.

126 ಯುದ್ಧ ವಿಮಾನ ಚೌಕಾಸಿ ಮಾಡಬೇಕು ಎಂದಿದ್ದ ಮೂಲ ಒಪ್ಪಂದದಲ್ಲಿ ಬಿಕ್ಕಟ್ಟಿತ್ತು. ಅದನ್ನು ಒಪ್ಪಂದವಾಗಿ ಮಾರ್ಪಡಿಸುವುದರಲ್ಲಿ ಸಮಸ್ಯೆಯಿತ್ತು. ನಾವು ಮಾತುಕತೆ ಮುಂದುವರಿಸಿದೆವು. ಏನಾದರೂ ಆಗಲು ಅಥವಾ ಪ್ರಸ್ತಾವವನ್ನೇ ರದ್ದು ಮಾಡೋಣ ಅಥವಾ ಮೂವತ್ತಾರು ವಿಮಾನ ಖರೀದಿಗೆ ನಿರ್ಧರಿಸಿದೆವು ಎಂದಿದ್ದಾರೆ.
ಸರಕಾರವು ದಿಟ್ಟ ನಿರ್ಧಾರ ಕೈಗೊಂಡು ಮೂವತ್ತಾರು ವಿಮಾನ ಖರೀದಿಗೆ ಮುಂದಾಯಿತು ಎಂದು ಅವರು ಹೇಳಿದ್ದಾರೆ. ಇನ್ನು ರಫೇಲ್ ತಯಾರಿಸುವ ಡಸಾಲ್ಟ್ ಏವಿಯೇಷನ್ ನಿಂದಲೇ ಭಾರತದ ಸಹಭಾಗಿ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಇದರಲ್ಲಿ ಭಾರತೀಯ ವಾಯುಸೇನೆಯ ಯಾವುದೇ ಪಾತ್ರವಿಲ್ಲ. ಇನ್ನು ರಷ್ಯಾದಿಂದ ಖರೀದಿ ಮಾಡುತ್ತಿರುವ S-400 ಕ್ಷಿಪಣಿ ಕೂಡ ಗೇಮ್ ಚೇಂಜರ್ ಎಂದು ಅವರು ಕರೆದಿದ್ದಾರೆ.
ಫ್ರಾನ್ಸ್ ನ ಡಸಾಲ್ಟ್ ಕಂಪನಿಯಿಂದ $ 8.7 ಬಿಲಿಯನ್ ಮೌಲ್ಯದ 36 ರಫೇಲ್ ವಿಮಾನ ಖರೀದಿಸಬೇಕು ಎಂದು ಎರಡು ಸರಕಾರಗಳು ಏಪ್ರಿಲ್, 2015ಕ್ಕೆ ಒಪ್ಪಂದಕ್ಕೆ ಬಂದವು. ಅಧಿಕೃತವಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದು ಅದಾಗಿ ಒಂದು ವರ್ಷದ ನಂತರ. ವಿರೋಧ ಪಕ್ಷಗಳು ಯುದ್ಧ ವಿಮಾನವನ್ನು ಹೆಚ್ಚಿನ ಬೆಲೆಗೆ ಖರೀದಿಸಲಾಗುತ್ತಿದೆ ಎಂದು ಆರೋಪಿಸಿದ್ದರೆ, ಶೇಕಡಾ ಒಂಬತ್ತರಷ್ಟು ಕಡಿಮೆ ಬೆಲೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಸಮರ್ಥನೆ ನೀಡಿದ್ದಾರೆ.












Click it and Unblock the Notifications