• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಧಿಕಾರಿಯ ಆಕ್ಷೇಪದ ನಡುವೆಯೇ 36 ರಫೇಲ್ ಖರೀದಿ ಒಪ್ಪಂದಕ್ಕೆ ಸಹಿ

|

ನವದೆಹಲಿ, ಸೆಪ್ಟೆಂಬರ್ 27: ರಫೇಲ್ ಒಪ್ಪಂದದ ಸಂಬಂಧ ರಚಿಸಲಾಗಿದ್ದ ಒಪ್ಪಂದ ವ್ಯವಹಾರ ಸಮಿತಿಯ (ಸಿಎನ್‌ಸಿ) ಭಾಗವಾಗಿದ್ದ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ರಫೇಲ್ ಯುದ್ಧ ವಿಮಾನಕ್ಕೆ ನಿಗದಿಪಡಿಸಲಾಗಿದ್ದ ದರದ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕುವ ಒಂದು ತಿಂಗಳ ಮೊದಲೇ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಮಾಧ್ಯಮ ವರದಿ ತಿಳಿಸಿದೆ.

ರಫೇಲ್ ಡೀಲ್: ಮೋದಿ ಬೆಂಬಲಕ್ಕೆ ನಿಂತ ಫ್ರೆಂಚ್ ಅಧ್ಯಕ್ಷ

'ಇಂಡಿಯನ್ ಎಕ್ಸ್‌ಪ್ರೆಸ್' ಮಾಡಿರುವ ವರದಿ ಪ್ರಕಾರ, 36 ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಆಗಿನ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಮತ್ತು ಫ್ರಾನ್ಸ್‌ನ ರಕ್ಷಣಾ ಸಚಿವರ ನಡುವೆ ನವದೆಹಲಿಯಲ್ಲಿ ಸಹಿ ಹಾಕುವ ಮೊದಲೇ ತಮ್ಮ ಆಕ್ಷೇಪಗಳ ದಾಖಲಾತಿ ಸಹಿತ ಅವರು ಪ್ರಶ್ನೆಗಳನ್ನು ಮುಂದಿರಿಸಿದ್ದರು.

ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

ಆಗಿನ ಜಂಟಿ ಕಾರ್ಯದರ್ಶಿ ಮತ್ತು ಸ್ವಾಧೀನ ವ್ಯವಸ್ಥಾಪಕ ಅಧಿಕಾರಿಯ ಆಕ್ಷೇಪಣೆ ಸಲ್ಲಿಕೆ ಕಾರಣದಿಂದಾಗಿ ಒಪ್ಪಂದಕ್ಕೆ ಸಂಪುಟ ಅನುಮೋದನೆ ದೊರಕುವುದು ವಿಳಂಬವಾಗಿತ್ತು. ಆದರೆ, ರಕ್ಷಣಾ ಸಚಿವಾಲಯದ ಮತ್ತೊಬ್ಬ ಹಿರಿಯ ಅಧಿಕಾರಿಯಾಗಿದ್ದ ಸಚಿವಾಲಯದ ಪ್ರಧಾನ ನಿರ್ದೇಶಕರು ಈ ಆಕ್ಷೇಪಣೆಯನ್ನು ತಳ್ಳಿಹಾಕಿದ ಬಳಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಒಪ್ಪಂದವು ರಾಜಕೀಯ ವಿವಾದ ಸೃಷ್ಟಿಯಾಗಿರುವುದರಿಂದ ಆ ಅಧಿಕಾರಿಯು ಸಲ್ಲಿಸಿದ್ದ ಆಕ್ಷೇಪಣೆಯ ಪತ್ರವನ್ನು ನಿಯಂತ್ರಕರು ಮತ್ತು ಮಹಾಲೇಖಪಾಲರು (ಸಿಎಜಿ) ಅಧ್ಯಯನಕ್ಕೆ ಒಳಪಡಿಸಿದ್ದಾರೆ.

ಈ ಪತ್ರದ ಕುರಿತಂತೆ ಸಿಎಜಿ ಡಿಸೆಂಬರ್‌ನಲ್ಲಿ ನಡೆಯಲಿರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ವರದಿ ಮಂಡಿಸುವ ಸಾಧ್ಯತೆ ಇದೆ.

ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಆಕ್ಷೇಪಣೆಗಳಿರುವ ಪತ್ರ ಮತ್ತು ಈ ಆಕ್ಷೇಪಣೆಗಳನ್ನು ಯಾವ ರೀತಿ ತಿರಸ್ಕರಿಸಲಾಯಿತು ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖಿಸುವ ಸಂಭವವಿದೆ.

ರಫೇಲ್ ಅಲ್ಲದೆ ಎರಡನೆಯದಾಗಿ ಪರಿಗಣನೆಯಲ್ಲಿದ್ದ ಯುರೋ ಫೈಟರ್ ಯುದ್ಧ ವಿಮಾನ ಕಂಪೆನಿಯು 2014ರ ಜುಲೈನಲ್ಲಿ ಭಾರತ ಸರ್ಕಾರ ನೀಡಿದ್ದ ಬಿಡ್ ದರಕ್ಕೆ ಶೇ 20ರಷ್ಟು ರಿಯಾಯಿತಿಯಲ್ಲಿ ವಿಮಾನ ತಯಾರಿಸಿ ಕೊಡುವುದಾಗಿ ಆಫರ್ ನೀಡಿತ್ತು.

ರಫೇಲ್‌ನ ಸ್ಪರ್ಧಿಯು ಶೇ 20ರಷ್ಟು ರಿಯಾಯಿತಿ ನೀಡಲು ಮುಂದಾಗಿರುವಾಗ ಅದನ್ನು 36 ರಫೇಲ್ ಯುದ್ಧ ವಿಮಾನಗಳ ಖರೀದಿಗೂ ಅನ್ವಯಿಸಬೇಕಿತ್ತು ಎಂದು ಅಧಿಕಾರಿ ಹೇಳಿದ್ದರು.

ಇದೇ ಮೊತ್ತಕ್ಕೆ ಭಾರತೀಯ ವಾಯಿಪಡೆಯು ಇನ್ನೂ ಹೆಚ್ಚಿನ ಸುಖೋಯ್ ಯುದ್ಧ ವಿಮಾನಗಳನ್ನು ಎಚ್‌ಎಎಲ್‌ನಿಂದ ಪಡೆದುಕೊಳ್ಳಬಹುದಾಗಿತ್ತಯ ಎಂದು ತಿಳಿಸಿದ್ದರು.

ಇನ್ನಷ್ಟು india ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior officer in Ministry of Defence then Joint Secretary And Acquisition Manager had put objections about the price of 36 Rafale Aircrafts before one month the deal was signed.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more