ರಫೇಲ್ ಡೀಲ್: ಏನೇನಾಯ್ತು ಎಂದು ಕಾಂಗ್ರೆಸ್ ನೀಡಿದ ಘಟನಾವಳಿ

ನವದೆಹಲಿ, ಅಕ್ಟೋಬರ್ 4: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಜನಮತಾಭಿಪ್ರಾಯ ಮೂಡಿಸಿಲು ರಫೇಲ್ ಒಪ್ಪಂದದ ವಿವಾದವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್, ಈ ಒಪ್ಪಂದಲ್ಲಿನ ಸಮಸ್ಯೆಯಲ್ಲಿ ತನ್ನ ಪಾಲು ಇಲ್ಲ ಎಂಬ ಸಮರ್ಥನೆ ನೀಡಲು ಒಪ್ಪಂದದ ಟೈಮ್‌ ಲೈನ್‌ಅನ್ನು ನೀಡಿದೆ.

ಈ ಒಪ್ಪಂದ ಯಾವಾಗ ನಡೆಯಿತು, ಕಾಂಗ್ರೆಸ್ ಅವಧಿಯಲ್ಲಿ ಏನಾಯಿತು ಮತ್ತು ಎನ್‌ಡಿಎ ಸರ್ಕಾರದ ಆಡಳಿತಾವಧಿಯಲ್ಲಿ ಯಾವ ಪ್ರಕ್ರಿಯೆಗಳನ್ನು ನಡೆಸಲಾಯಿತು ಎಂಬ ತನ್ನ ವಾದವನ್ನು ಕಾಂಗ್ರೆಸ್ ಮಂಡಿಸಿದೆ.

ಪಕ್ಷವು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಫೇಲ್ ವಿವಾದದ ಟೈಮ್‌ಲೈನ್ ಹೀಗಿದೆ.

rafale deal congress tweeted timeline how the deal happened

2007
ಭಾರತೀಯ ವಾಯು ಸೇನೆಯಿಂದ ಯುದ್ಧ ವಿಮಾನಗಳಿಗಾಗಿ ಯುಪಿಎ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ. ಈ ಸಂಬಂಧ ಕರೆಯಲಾದ ಟೆಂಡರ್‌ಗೆ ಡಸಾಲ್ಟ್ ಏವಿಯೇಷನ್ ಸೇರಿದಂತೆ ಉದ್ಯಮಗಳಿಂದ ಸ್ಪಂದನೆ.

2011
ಮೇ ತಿಂಗಳಿನಲ್ಲಿ ವಾಯುಪಡೆಯಿಂದ ರಫೇಲ್ ಮತ್ತು ಯುರೋಫೈಟರ್ ಯುದ್ಧ ವಿಮಾನಗಳ ಶಾರ್ಟ್‌ ಲಿಸ್ಟ್.

2012
ಜನವರಿಯಲ್ಲಿ ರಫೇಲ್ ಆಯ್ಕೆ. 126 ವಿಮಾನಗಳಲ್ಲಿ 18 ಹಾರಾಟ ಯೋಗ್ಯ ಸ್ಥಿತಿಯಲ್ಲಿ ವಿಮಾನಗಳನ್ನು ಆಮದು ಮಾಡಿಕೊಳ್ಳುವುದು. ಉಳಿದ 108 ವಿಮಾನಗಳನ್ನು ಎಚ್‌ಎಎಲ್ ನಿರ್ಮಿಸುವುದು.

2014
ಎಚ್‌ಎಎಲ್ ಮತ್ತು ಡಸಾಲ್ಟ್ ಏವಿಯೇಷನ್ ನಡುವೆ ಮಾರ್ಚ್‌ನಲ್ಲಿ ಒಪ್ಪಂದಕ್ಕೆ ಸಹಿ.

2015
ಮಾರ್ಚ್‌: ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಕಂಪೆನಿ ಸ್ಥಾಪನೆ
ಏಪ್ರಿಲ್: ಫ್ರಾನ್ಸ್ ಪ್ರವಾಸದ ಸಂದರ್ಭದಲ್ಲಿ 36 ರಫೇಲ್ ವಿಮಾನಗಳ ಖರೀದಿಯ ಘೋಷಣೆ ಮಾಡಿದ ಪ್ರಧಾನಿ ಮೋದಿ
ಜೂನ್: 126 ವಿಮಾನ ಖರೀದಿಯ ಟೆಂಡರ್‌ಅನ್ನು ಹಿಂಪಡೆದ ರಕ್ಷಣಾ ಸಚಿವಾಲಯ

ಡಿಸೆಂಬರ್: ಫ್ರಾನ್ಸ್ ಅಧ್ಯಕ್ಷರ ಸಂಗಾತಿ ಜೂಲಿ ಗಯೆಟ್ ನಿರ್ಮಾಣದ ಫ್ರೆಂಚ್ ಸಿನಿಮಾಕ್ಕೆ ಅಂಬಾನಿ ಅವರ ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ನಿಂದ 1.6 ಮಿಲಿಯನ್ ಯುರೋ ಬಂಡವಾಳ ಹೂಡಿಕೆ

2016
ಜನವರಿ: ಫ್ರಾನ್ಸ್ ಅಧ್ಯಕ್ಷರ ಭಾರತ ಭೇಟಿ. ರಫೇಲ್ ವಿಮಾನಗಳ ಖರೀದಿಗೆ ಎಂಒಯುಗೆ ಸಹಿ
ಸೆಪ್ಟೆಂಬರ್: ಭಾರತ ಮತ್ತು ಪ್ರಾನ್ಸ್‌ಗಳ ನಡುವೆ ವಿಮಾನಕ್ಕೆ 59,000 ಕೋಟಿ ರೂ.ನಂತೆ 36 ರಫೇಲ್ ವಿಮಾನಗಳ ಖರೀದಿ ಒಪ್ಪಂದಕ್ಕೆ ಸಹಿ. ಒಪ್ಪಂದದ ಪ್ರಕಾರ 2018ರ ಸೆಪ್ಟೆಂಬರ್‌ನಿಂದ ವಿಮಾನಗಳ ಪೂರೈಕೆ ಆರಂಭ.
ಅಕ್ಟೋಬರ್: ಅನಿಲ್ ಅಂಬಾನಿ ಅವರ ಆರ್‌ಡಿಎಲ್ ಮತ್ತು ಡಸಾಲ್ಟ್ ಏವಿಯೇಷನ್ ಖರೀದಿಯ ಶೇ 50ರಷ್ಟು ಮೌಲ್ಯದ ಆಫ್‌ಸೆಟ್ಸ್‌ಗಳನ್ನು ಕೈಬಿಟ್ಟು ಪಾಲುದಾರಿಕೆಯಲ್ಲಿ ವಿಮಾನ ತಯಾರಿಕೆಯ ಘೋಷಣೆ.

2017
ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ (ಡಿಆಎರ್ಎಎಲ್) ರಚನೆ.

2018
ಭಾರತ ಸರ್ಕಾರ ಮೊದಲೇ ನಿರ್ಧರಿಸಿದ್ದರಿಂದ ರಫೇಲ್‌ಗೆ ಭಾರತೀಯ ಪಾಲುದಾರನಾಗಿ ರಿಲಯನ್ಸ್‌ಅನ್ನು ಆಯ್ದುಕೊಳ್ಳುವುದರ ವಿನಾ ಬೇರೆ ಆಯ್ಕೆ ಇರಲಿಲ್ಲ ಎಂದು ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಹೇಳಿಕೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+