ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಜನರಿಂದ ಹಣ ಕದ್ದು, ಅಂಬಾನಿ ಕಿಸೆಗೆ ತುಂಬಿಸುವ ಚೌಕಿದಾರ: ರಾಹುಲ್ ಆರೋಪ

|
Google Oneindia Kannada News

ಅಮೇಥಿ (ಉತ್ತರ ಪ್ರದೇಶ), ಸೆಪ್ಟೆಂಬರ್ 25: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುವಜನರು ಮತ್ತು ವಾಯು ಸೇನೆಯಿಂದ ಹಣವನ್ನು ಕದ್ದು ಉದ್ಯಮಿ ಅನಿಲ್ ಅಂಬಾನಿ ಜೇಬಿಗೆ ತುಂಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

'ಪ್ರಧಾನಿ ತಾವು ದೇಶದ ಚೌಕಿದಾರ ಎಂದು ಹೇಳಿಕೊಂಡಿದ್ದರು. ಈ ಚೌಕಿದಾರ ಯುವ ಜನರು ಮತ್ತು ವಾಯುದಳದ ಹಣವನ್ನು ತೆಗೆದುಕೊಂಡು ವಿಜಯ್ ಮಲ್ಯನಂತೆಯೇ ತನ್ನ ಮೇಲೆ 45 ಸಾವಿರ ಕೋಟಿ ಸಾಲ ಹೊಂದಿರುವ ಅನಿಲ್ ಅಂಬಾನಿ ಕಿಸೆಗೆ ತುಂಬಿಸುತ್ತಿದ್ದಾರೆ' ಎಂದು ಆರೋಪಿಸಿದರು.

rafale deal chowkidar modi stole money to anil ambani pockets rahul gandhi

ಮತ್ತೆ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ 'ರಫೇಲ್' ಯುದ್ಧಮತ್ತೆ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ 'ರಫೇಲ್' ಯುದ್ಧ

ಅನಿಲ್ ಅಂಬಾನಿ 45 ಸಾವಿರ ಕೋಟಿ ರೂ. ಸಾಲದ ಹೊರೆಯಲ್ಲಿದ್ದರೂ ಪ್ರಧಾನಿ ಮೋದಿ ಅವರಿಗೆ ಏಕೆ ಒಪ್ಪಂದ ನೀಡಿದರು ಎಂದು ರಾಹುಲ್ ಪ್ರಶ್ನಿಸಿದರು.

ಇನ್ನು ಮೂರು ತಿಂಗಳಲ್ಲಿ ಏನಾಗುತ್ತದೆ? ರಾಹುಲ್ ಮಾತಿನ ಅರ್ಥವೇನು?ಇನ್ನು ಮೂರು ತಿಂಗಳಲ್ಲಿ ಏನಾಗುತ್ತದೆ? ರಾಹುಲ್ ಮಾತಿನ ಅರ್ಥವೇನು?

ಎಚ್‌ಎಎಲ್‌ನಿಂದ ರಫೇಲ್ ಒಪ್ಪಂದವನ್ನು ಕಸಿದುಕೊಂಡ ಮೋದಿಜಿ ಅದನ್ನು ಅನಿಲ್ ಅಂಬಾನಿಗೆ ನೀಡಿದರು. ಅಂಬಾನಿ ಕಂಪೆನಿ ತನ್ನ ಅವಧಿಯಲ್ಲಿ ಇದುವರೆಗೂ ಒಂದೂ ಯುದ್ಧ ವಿಮಾನ ನಿರ್ಮಿಸಿಲ್ಲ. ನಮ್ಮ ಸೈನಿಕರು ಗಡಿಯಲ್ಲಿ ತಮ್ಮ ಜೀವವನ್ನು ನೀಡುತ್ತಿದ್ದಾರೆ. ಆದರೆ, ಮೋದಿಜಿ ಅಂಬಾನಿಯ ಜೇಬು ತುಂಬಿಸಲು ಅವರ ಜೇಬಿನಿಂದ ಹಣ ಕದಿಯುತ್ತಿದ್ದಾರೆ ಎಂದು ಹೇಳಿದರು.

English summary
Rafale deal: Rahul Gandhi accused that Prime Minister Narendra Modi stealing money from youth and soldiers and filling the pockets of Anil Ambani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X