ಆರ್‌ ಮಾಧವನ್‌ರ‌ ಬಹುಕೋಟಿ ವೆಚ್ಚದ ಮನೆಯಲ್ಲೂ ಪ್ರಕೃತಿ- ಸಂಸ್ಕೃತಿ ಪ್ರೀತಿ ಹೈಲೈಟ್‌

ನಟ ಆರ್ ಮಾಧವನ್ ಅವರು ಸಿನಿಮಾ ಮೂಲಕ ಜನ ಮನ್ನಣೆ ಗಳಿಸುತ್ತಲೇ ಇದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಹಿಟ್‌ ಆದ 'ದುರಂಧರ್' ಸರಣಿ‌ ಚಿತ್ರಗಳ ನಟನೆಯಿಂದಲೂ ಅವರಿ ಎಲ್ಲರಿಗೂ ಮತ್ತಷ್ಟು ಇಷ್ಟವಾಗಿದ್ದಾರೆ. ಸಿನಿಮಾ ಹೊರತಾಗಿಯೂ ಜನ ಅವರನ್ನು ಇಷ್ಟಪಡುತ್ತಾರೆ. ಏಕೆಂದರೆ ಅವರ ಜೀವನಶೈಲಿ ಮಕ್ಕಳಿಗೆ ಅವರು ನೀಡಿದ ಸಂಸ್ಕಾರ ಪದೇ ಪದೇ ಸೋಶಿಯಲ್‌ ಮಿಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ. ಸಿನಿಮಾ ನಟನಾಗಿದ್ದರೂ ಅವರು ತನ್ನ ಸಂಸ್ಕೃತಿ ಆಚಾರ ವಿಚಾರಗಳಿಗೆ ಬಹಳ ಗೌರವ ನೀಡುತ್ತಾರೆ.

ಇದೀಗ ಮುಂಬೈನಲ್ಲಿರುವ ಅವರ ಮನೆ ಕೂಡಾ ಅವರ ವ್ಯಕ್ತಿತ್ವದ ಶಾಂತ ಮುಖವನ್ನು ಪ್ರತಿಬಿಂಬಿಸುತ್ತದೆ. ದುಬಾರಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ)ನಲ್ಲಿ ಇರುವ ಈ ಮನೆ ಶಾಂತ ವಾತಾವರಣಕ್ಕೆ ಹೆಸರಾಗಿದೆ. ಅವರ ಬಹುಕೋಟಿ ಮನೆ ಹೇಗಿದೆ ಗೊತ್ತಾ? ಈ ಮನೆಯಲ್ಲೂ ಅವರ ಪ್ರಕೃತಿ ಮತ್ತು ಸಂಸ್ಕೃತಿ ಮೇಲಿನ ಪ್ರೀತಿ ಎದ್ದು ಕಾಣುತ್ತದೆ.

R Madhavan

17.5 ಕೋಟಿ ರೂ.ವೆಚ್ಚದ ಮನೆ

ಮಾಧವನ್ ಅವರು ಈ ಮನೆಗಾಗಿ ಸುಮಾರು 17.5 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಂಮೂಲಗಳು ತಿಳಿಸಿವೆ. ಇಷ್ಟು ಹಣ ಖರ್ಚು ಮಾಡಲಾಗಿಎಎ ಎಂದರೆ ಐಶಾರಾಮಿ ಅಪಾರ್ಟ್‌ಮೆಂಟ್ ಎನ್ನುವುದಲ್ಲಿ ಎರಡು ಮಾತಿಲ್ಲ. ಈ ಮನೆ ದುಬಾರಿ ಅಥವಾ ಐಶಾರಾಮಿ ಮಾತ್ರವಲ್ಲ ಇದು ನಮ್ಮ ಪ್ರಕೃತಿ ಮತ್ತು ಸಂಸ್ಕೃತಿಗೆ ಬಹಳ ಹತ್ತಿರವಾಗಿದೆ. ಮನೆಯೊಳಗಿನ ಮಣ್ಣು ಮತ್ತು ವುಡನ್‌ ವರ್ಕ್‌ ಎಲ್ಲರ ಗಮನ ಸೆಳೆಯುತ್ತದೆ.

ಅದ್ಭುತ ಇಂಟಿರಿಯರ್‌

ಈ ನಿವಾಸದ ಅತ್ಯಂತ ಗಮನಾರ್ಹ ಅಂಶವೆಂದರೆ ಇದರ ಇಂಟಿರಿಯರ್.‌ ಅಪಾರ್ಟ್ಮೆಂಟ್ ಮೆಡಿಟೇಶನ್‌ ರೂಮ್‌ ಅನ್ನು ಒಳಗೊಂಡಿದೆ. ಮುಂಬೈಯ ಜಂಜಾಟದ ಬದುಕಿನಿಂದ ದೈಹಿಕ ಮತ್ತು ಮಾನಸಿಕವಾಗಿ ವಿಶ್ರಾಂತಿ ಪಡೆಯಲು ಇದು ಸಹಾಯ ಮಾಡುತ್ತದೆ. ಈ ಮಾಯಾ ನಗರಿಯ ಬ್ಯುಸಿ ಲೈಫ್‌ನಿಂದ ಸ್ವಲ್ಪ ಮಟ್ಟಿನ ಆರಾಮ ಪಡೆಯುವ ರೀತಿಯಲ್ಲಿ ಈ ಕೋಣೆಯನ್ನು ವಿನ್ಯಾಸ ಮಾಡಲಾಗಿದೆ. ಇನ್ನು ಮನೆಯ ತುಂಬೆಲ್ಲಾ ಇರಿಸಿರುವ ಬುದ್ಧನ ವಿಗ್ರಹಗಳು ಶಾಂತ ವಾತಾವರಣವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇದು ಮಾಧವನ್ ಸರಳ ಮತ್ತು ಶಾಂತಿಯುತ ಜೀವನಕ್ಕೆ ನೀಡುವ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ.

ಇನ್ನು ಇವರ ಮನೆಯಲ್ಲಿ ಪುಸ್ತಕಗಳಿಗೆ ವಿಶೇಷ ಸ್ಥಾನವಿದೆ. ಪುಸ್ತಕಗಳಿಂದ ತುಂಬಿದ ಪ್ರೈವೇಟ್‌ ಲೈಬ್ರೆರಿ ಈ ಮನೆಯ ಚಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಲಿವಿಂಗ್‌ ರೂಮ್‌ ಸೌಕರ್ಯ ಮತ್ತು ಸೌಂದರ್ಯ ಎರಡರ ಮಿಶ್ರಣವಾಗಿದೆ. ಇಲ್ಲಿನ ಮೃದುವಾದ ಆಸನಗಳು, ಲೈಟಿಂಗ್‌ ಮತ್ತು ಅಲಂಕಾರಿಕ ಅಂಶಗಳು ಕುಟುಂಬ ಮತ್ತು ಅತಿಥಿಗಳಿಗೆ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತವೆ. ಇನ್ನು ಇಲ್ಲಿರುವ ದೊಡ್ಡ ದೊಡ್ಡ ಒಪನ್‌ ಸ್ಪೇಸ್‌ಗಳು ಅಪಾರ್ಟ್ಮೆಂಟ್ ತುಂಬಾ ಗಾಳಿಯಾಡುವಂತೆ ಮಾಡುತ್ತದೆ.

ಐದು ಬೆಡ್‌ ರೂಮಿನ ಮನೆ!

ಈ ಮನೆ ಸರಿಸುಮಾರು 4,182 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿಕೊಂಡಿದೆ. ಈ ಮನೆಯಲ್ಲಿ ಐದು ಬೆಡ್‌ ರೂಂ ಇದೆ. ಇದರ ಇಂಟಿರಿಯರ್‌ ಬಹಳ ಕ್ರಿಯೇಟಿವ್‌ ಆಗಿದೆ. ಈ ಮನೆಯ ಡಿಸೈನ್‌ ಹೇಗಿದೆಯೆಂದರೆ ಇದು ಮನೆ ಮಂದಿಗೆ ಪರ್ಸನಲ್‌ ಸ್ಪೇಸ್‌ ನೀಡುತ್ತದೆ. ಮೀಸಲಾದ ಪಾರ್ಕಿಂಗ್ ಸ್ಥಳ ಸಹ ನೀಡಲಾಗಿದೆ.

ಆಕರ್ಷಕ ಟೆರೇಸ್ ಉದ್ಯಾನ

ಇಷ್ಟೆಲ್ಲಾ ಇದ್ದರೂ ಮಾಧವನ್ ಅವರ ಮನೆಯ ನಿಜವಾದ ಹೈಲೈಟ್‌ ಇರುವುದು ಹೊರ ಭಾಗದಲ್ಲಿಯೇ. ನಟ ಹೈಡ್ರೋಪೋನಿಕ್ ಟೆರೇಸ್ ಉದ್ಯಾನವನ್ನು ರಚಿಸಿದ್ದಾರೆ. ಅಲ್ಲಿ ಅವರು ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ಹಚ್ಚ ಹಸಿರಿನಿಂದ ಕೂಡಿದ ಈ ಸ್ಥಳ ಉಲ್ಲಾಸಕರವಾದ ವಿಶ್ರಾಂತಿ ತಾಣವಾಗಿ ಕಾರ್ಯನಿರ್ವಹಿಸುತ್ತದೆ. ಗಾರ್ಡನ್‌ ಪಕ್ಕದಲ್ಲಿ ಕುಳಿತುಕೊಳ್ಳುವುದಕ್ಕೂ ವ್ಯವಸ್ಥೆಯಿದೆ. ಟೆರೇಸ್‌ನಲ್ಲಿರುವ ಉಯ್ಯಾಲೆಯಲ್ಲಿ ಕುಳಿತುಕೊಂಡು ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳ ಎಂದರೆ ತಪ್ಪಲ್ಲ.

ಮುಂಬಯಿ ಎಂದರೆ ಸೆಲೆಬ್ರಿಟಿ ಮನೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಆರ್ ಮಾಧವನ್ ನಿವಾಸವು ವಿಭಿನ್ನ ಕಾರಣಕ್ಕಾಗಿ ಎದ್ದು ಕಾಣುತ್ತದೆ. ಮಿತಿಮೀರಿದ ಶೋ ಆಫ್‌ ಬದಲು, ಇದು ಸಮತೋಲನ, ಪ್ರಶಾಂತತೆ ಮತ್ತು ಚಿಂತನಶೀಲ ವಿನ್ಯಾಸದ ಮೇಲೆ ಕೇಂದ್ರೀಕರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+