ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ವಾಣಿಯನ್ನು ಬಂಧಿಸಿದ್ದ ಆರ್ ಕೆ ಸಿಂಗ್ ಈಗ ಕೇಂದ್ರ ಸಚಿವ

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

Modi Cabinet: Rk Singh, The Man Who Arrested LK Advani | Oneindia Kannada

ಖಡಕ್ ಅಧಿಕಾರಿ ಎಂದೇ ಹೆಸರಾಗಿದ್ದ, ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರನ್ನೇ ಬಂಧಿಸಿದ್ದ ನಿವೃತ್ತ ಐಎ ಎಸ್ ಅಧಿಕಾರಿ ಆರ್.ಕೆ.ಸಿಂಗ್ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿಹಾರದ ಅರಾ ಕ್ಷೇತ್ರದಿಂದ ಮೊದಲನೇ ಬಾರಿಗೆ ಸಂಸದರಾಗಿ ಆಯ್ಕೆ ಆಗಿದ್ದಾರೆ ಸಿಂಗ್. 1990ರ ಅಕ್ಟೋಬರ್ ನಲ್ಲಿ ಅಯೋಧ್ಯದಿಂದ ಸೋಮನಾಥಕ್ಕೆ ತೆರಳುತ್ತಿದ್ದ ರಾಮ್ ರಥ್ ವನ್ನು ತಡೆಯಲು ಅಡ್ವಾಣಿ ಅವರನ್ನು ಬಂಧಿಸುವ ಜವಾಬ್ದಾರಿ ವಹಿಸಿದ್ದು ಇದೇ ಆರ್.ಕೆ.ಸಿಂಗ್ ಗೆ.

ಪ್ರಶ್ನಿಸಿದರೆ ಪ್ರಧಾನಿ ಸಿಟ್ಟು, ಬಿಜೆಪಿ ಸಂಸದ ಬಿಟ್ಟುಕೊಟ್ಟ ಗುಟ್ಟುಪ್ರಶ್ನಿಸಿದರೆ ಪ್ರಧಾನಿ ಸಿಟ್ಟು, ಬಿಜೆಪಿ ಸಂಸದ ಬಿಟ್ಟುಕೊಟ್ಟ ಗುಟ್ಟು

ಆಗ ಬಿಜೆಪಿಯು ವಿ.ಪಿ.ಸಿಂಗ್ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು. ಆ ಸರಕಾರ ಬಿದ್ದು ಹೋಗಲು ಕಾರಣವಾಯಿತು. ಸರಣಿ ಹಿಂಸಾಚಾರಗಳು ನಡೆದವು. ಆರ್.ಕೆ.ಸಿಂಗ್ ಅವರು ಸಮಷ್ಟಿಪುರ್ ಬಳಿ ರಥ್ ಯಾತ್ರೆ ತಡೆದಿದ್ದರು ಮತ್ತು ಅಡ್ವಾಣಿ ಅವರನ್ನು ಬಂಧಿಸಿದ್ದರು.

RK Singh

ಆ ನಂತರ ಬಿಜೆಪಿಯು ನೀಡಿದ್ದ ಬೆಂಬಲ ಹಿಂಪಡೆದಿದ್ದರಿಂದ ವಿ.ಪಿ.ಸಿಂಗ್ ನೇತೃತ್ವದ ಕೇಂದ್ರ ಸರಕಾರ ಪತನವಾಯಿತು. ಬಿಜೆಪಿಯು ದೇಶದಲ್ಲಿ ಪ್ರಮುಖ ಶಕ್ತಿಯಾಗಿ ರೂಪುಗೊಂಡಿತು. ವಿಚಿತ್ರ ಏನೆಂದರೆ, ಆರ್.ಕೆ.ಸಿಂಗ್ ಆನಂತರ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆದರು. ಆಗ ರಕ್ಷಣಾ ಖಾತೆಯ ಹೊಣೆ ಹೊತ್ತಿದ್ದವರು ಎಲ್.ಕೆ.ಅಡ್ವಾಣಿ.

ಮೋದಿ ಸಂಪುಟ ವಿಸ್ತರಣೆ : ಯಾರಿಗೆ ಯಾವ ಖಾತೆ?ಮೋದಿ ಸಂಪುಟ ವಿಸ್ತರಣೆ : ಯಾರಿಗೆ ಯಾವ ಖಾತೆ?

ನಾಲ್ಕು ದಶಕಗಳ ಕಾಲ ಐಎಎಸ್ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ ಆರ್.ಕೆ.ಸಿಂಗ್ 2013ರಲ್ಲಿ ಬಿಜೆಪಿ ಸೇರುವ ತೀರ್ಮಾನ ಮಾಡಿದರು. ಅದರ ಮರುವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಅರಾ ಕ್ಷೇತ್ರದಿಂದ ಗೆದ್ದರು. ಸಚಿವ ಸ್ಥಾನ ಪ್ರಮಾಣ ವಚನ ಪಡೆದ ನಂತರ ಅವರು ಮಾತನಾಡಿ, ನನಗೆ ಇದು ಸವಾಲಿನ ಜವಾಬ್ದಾರಿ. ಆದರೆ ಸವಾಲುಗಳನ್ನು ಸ್ವೀಕರಿಸಿ ರೂಢಿ ಇದೆ ಎಂದಿದ್ದಾರೆ.

English summary
R K SIngh, the IAS officer from Bihar was sworn in to the Narendra Modi ministry on Sunday. The first-term MP from Arrah was always known as a tough officer his toughest assignment was to arrest LK Advani when the BJP stalwart's 'Ram Rath' rolled on unhindered from Ayodhya on way to Somnath in October 1990.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X