ದೆಹಲಿ ಮಹಾನಗರ ಪಾಲಿಕೆಯಲ್ಲಿ ಜಗಳ: ಬಿಜೆಪಿ ಕೌನ್ಸಿಲರ್‌ಗೆ ಗಾಯ- ಎಎಪಿ ಮೇಲೆ ಆರೋಪ!
ನವದೆಹಲಿ ಫೆಬ್ರವರಿ 24: ಎಂಸಿಡಿ ಹೌಸ್‌ನ ಚೇಂಬರ್‌ನಲ್ಲಿ ಇಂದು ಬಿಜೆಪಿ ಮತ್ತು ಎಎಪಿಯ ಹಲವಾರು ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಘರ್ಷಣೆಯಲ್ಲಿ ಬಿಜೆಪಿ ಕೌನ್ಸಿಲರ್ ಗಾಯಗೊಂಡಿದ್ದು, ಆಪ್ ಶಾಸಕಿ ಅತಿಶಿ ದಾಳಿಗೆ ಪ್ರಚೋದನೆ ನೀಡಿದ್ದಾರೆ ಎಂದು ಕೇಸರಿ ಪಕ್ಷ ಆರೋಪಿಸಿದೆ.
आतिशी ने AAP की इस गुंडी के कान में कुछ कहा और इसने अपनी आका की बात मान कर भाजपा के पार्षदों को पीटना शुरू कर दिया !
— BJP Delhi (@BJP4Delhi) February 24, 2023
केजरीवाल, तुम्हारे इस गुंडागर्दी का जबाब अब जनता देगी तुम्हें.. pic.twitter.com/t3dZNlfIKH
ಬಿಜೆಪಿಯು ಟ್ವಿಟ್ಟರ್‌ನಲ್ಲಿ ಘರ್ಷಣೆಯ ವಿಡಿಯೊವನ್ನು ಹಂಚಿಕೊಂಡಿದೆ. ಅತಿಶಿ ಎಎಪಿ ಸದಸ್ಯರೊಬ್ಬರಿಗೆ ಏನೋ ಪಿಸುಗುಟ್ಟಿದ್ದಾರೆ. ನಂತರ ಅವರು ತಮ್ಮ ಯಜಮಾನಗೆ ವಿಧೇಯರಾಗಿ ಬಿಜೆಪಿ ಕೌನ್ಸಿಲರ್‌ಗಳನ್ನು ಥಳಿಸಲು ಪ್ರಾರಂಭಿಸಿದರು. ಈ ಘರ್ಷಣೆಯಲ್ಲಿ ಬಿಜೆಪಿ ಕೌನ್ಸಿಲರ್ ಕೈಗೆ ಕೆಲ ಗಾಯಗಳಾಗಿವೆ.

ಆದರೆ ಎಎಪಿ ಶಾಸಕಿ ಅತಿಶಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸುಖ ಸುಮ್ಮನೆ ತಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದರು. ಬಿಜೆಪಿ ಪಕ್ಷವು ಗದ್ದಲವನ್ನು ಸೃಷ್ಟಿಸಿದೆ. ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಅವರ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದರು.
ಇಂದು ಬಿಜೆಪಿಯವರು ನಾಗರಿಕ ಕೇಂದ್ರದಲ್ಲಿ ಗೂಂಡಾಗಿರಿ ತೋರಿಸಿದ್ದಾರೆ. ಸ್ಥಾಯಿ ಸಮಿತಿ ಚುನಾವಣೆ ನಡೆಯುತ್ತಿತ್ತು. ಮತ ಎಣಿಕೆ ಆರಂಭವಾದಾಗ ಬಿಜೆಪಿ ಸೋಲುವುದನ್ನು ಅರಿತು ಗದ್ದಲ ಸೃಷ್ಟಿಸಿತು. ಮೇಯರ್ ಮೇಲೆ ಬಿಜೆಪಿ ಪುರುಷ ಸದಸ್ಯರು ಹಲ್ಲೆ ನಡೆಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅತಿಶಿ ಹೇಳಿರುವುದಾಗಿ ವರದಿಯಾಗಿದೆ.
"ಇದು ಯಾವ ನಡವಳಿಕೆ? ಇದು ನಾಚಿಕೆಗೇಡಿನ ಮತ್ತು ಖಂಡನೀಯ ನಡುವಳಿಕೆ. ದೇಶ ಇದನ್ನು ನೋಡುತ್ತಿದೆ. ಬಿಜೆಪಿ ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕು. ಬಿಜೆಪಿ ಅವರ ಗೂಂಡಾಗಿರಿಯನ್ನು ನಿಲ್ಲಿಸಬೇಕೆಂದು ನಾನು ವಿನಂತಿಸುತ್ತೇನೆ. ಮೇಯರ್ ಮೇಲೆ ಹಲ್ಲೆ ನಡೆಸಿದವರನ್ನು ಕಂಬಿ ಹಿಂದೆ ಕಳುಹಿಸಲಾಗುವುದು'' ಎಂದು ಅತಿಶಿ ಹೇಳಿದರು.












Click it and Unblock the Notifications