Bhagwant Mann: ಪಂಜಾಬ್ ಸಿಎಂ ಭಗವಂತ್ ಮಾನ್‌ಗೆ ಝಡ್ ಪ್ಲಸ್ ಭದ್ರತೆ
ನವದೆಹಲಿ, ಮೇ. 25: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಕೇಂದ್ರ ಸರ್ಕಾರ ಗುರುವಾರ ಝಡ್ ಪ್ಲಸ್ ಭದ್ರತೆಯನ್ನು ನೀಡಿದೆ. ಭದ್ರತೆಯು ದೇಶದಾದ್ಯಂತ ಅನ್ವಯಿಸುತ್ತದೆ. ಭಗವಂತ್ ಮಾನ್ ಅವರಿಗೆ ಭದ್ರತೆ ಒದಗಿಸುವ ಕಾರ್ಯವನ್ನು ಸಿಆರ್‌ಪಿಎಫ್ ಶೀಘ್ರದಲ್ಲೇ ವಹಿಸಿಕೊಳ್ಳಲಿದೆ ಎಂದು ಪಿಟಿಐ ಅಧಿಕೃತ ಮೂಲಗಳು ತಿಳಿಸಿವೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಭದ್ರತೆ ನೀಡಲು ಒಟ್ಟು 55 ಸಶಸ್ತ್ರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಗವಂತ್ ಮಾನ್ ಅವರಿಗೆ ಇಡೀ ದೇಶದಲ್ಲಿ 'Z+' ಭದ್ರತೆಯನ್ನು ಒದಗಿಸಲು ಸಿಆರ್‌ಪಿಎಫ್ ಅನ್ನು ವಿನಂತಿಸಲಾಗಿದೆ. ಈ ಸಚಿವಾಲಯಕ್ಕೆ ಸೂಚನೆಯ ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರವು ತಿಳಿಸಿದೆ.

ಈ ಝಡ್ ಪ್ಲಸ್ ಭದ್ರತೆ ಪಂಜಾಬ್ ಪೊಲೀಸ್ ರಕ್ಷಣೆಯ ಹೊರತಾಗಿ, ಪಂಜಾಬ್ ಮುಖ್ಯಮಂತ್ರಿಯ ನಿವಾಸ ಮತ್ತು ಕುಟುಂಬ ಸದಸ್ಯರಿಗೂ ಭದ್ರತೆ ಒದಗಿಸಲಿದೆ ಎಂದು ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ. ಗಡಿ ರಾಜ್ಯದಲ್ಲಿ ಖಲಿಸ್ತಾನಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಬೆದರಿಕೆ ಇದೆ ಎಂದು ಕೇಂದ್ರ ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ಶಿಫಾರಸು ಮಾಡಿದೆ.
ಮಾರ್ಚ್‌ನಲ್ಲಿ ಭಗವಂತ್ ಮಾನ್ ಅವರ ಮಗಳಿಗೆ ಖಲಿಸ್ತಾನ್ ಪರ ಬೆಂಬಲಿಗರಿಂದ ಬೆದರಿಕೆ ಕರೆಗಳು ಬಂದಿದ್ದವು ಎಂದು ವರದಿಯಾಗಿದೆ. ಅಮೇರಿಕಾದಲ್ಲಿ ನೆಲೆಸಿರುವ ಭಗವಂತ್ ಮಾನ್ ಅವರ ಪುತ್ರಿ ಸೀರತ್ ಕೌರ್ ಮಾನ್ ಅವರನ್ನು ಖಲಿಸ್ತಾನ್ ಪರವಾದವರು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪಟಿಯಾಲ ಮೂಲದ ವಕೀಲರೊಬ್ಬರು ಆರೋಪಿಸಿದ್ದಾರೆ.

ಇತ್ತೀಚೆಗೆ ಪಂಜಾಬ್‌ನಲ್ಲಿ ಸ್ವಯಂ-ಘೋಷಿತ ಸಿಖ್ ಬೋಧಕ ಮತ್ತು ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಮತ್ತು ಅವರ ಸಹಚರರನ್ನು ಮುಚ್ಚುಗೋಲು ಹಾಕಲು ಕರೆ ನೀಡಲಾಗಿದೆ. ನಂತರ ಮೊಗಾದಲ್ಲಿ ಶರಣಾದ ಅಮರಿಪಾಲ್ ಸಿಂಗ್‌ರನ್ನು ಬಂಧಿಸಲು ರಾಜ್ಯ ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ನಡೆಸಿದ್ದರು.
ಮಾರ್ಚ್ 18 ರಂದು ಅಮೃತಪಾಲ್ ಸಿಂಗ್ ಮತ್ತು ಅವರ ಸಂಘಟನೆಯ 'ವಾರಿಸ್ ಪಂಜಾಬ್ ದೇ' ಸದಸ್ಯರ ವಿರುದ್ಧ ಪಂಜಾಬ್ ಪೊಲೀಸರು ಭಾರೀ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಫೆಬ್ರವರಿಯಲ್ಲಿ ಅಮೃತಪಾಲ್ ಸಿಂಗ್ ಬೆಂಬಲಿಗರು ತಮ್ಮ ಸಂಘಟನೆಯ ಸದಸ್ಯರೊಬ್ಬರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಜ್ನಾಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಅಮೃತಪಾಲ್ ಸಿಂಗ್ ಅವರು ಎರಡು ಬಾರಿ ಪೊಲೀಸರ ಕಣ್ಣು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಕೊನೆಗೆ 37 ದಿನಗಳ ಕಾಲ ಪಂಜಾಬ್ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಖಲಿಸ್ಥಾನ ಪ್ರತ್ಯೇಕತಾವಾದಿ ಹೋರಾಟಗಾರ ಅಮೃತಪಾಲ್ ಸಿಂಗ್ ಕೊನೆಗೂ ಪಂಜಾಬ್‌ನ ಮೊಗಾದಲ್ಲಿರುವ ಗುರುದ್ವಾರದಲ್ಲಿ ಶರಣಾಗಿದ್ದರು.












Click it and Unblock the Notifications