ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌: ಹಣ್ಣು ಕೀಳಲು ಹೋಗಿ ರೈಲು ಹಳಿಗೆ ಬಿದ್ದು 3 ಮಕ್ಕಳು ಸಾವು, 1 ಗಾಯ

|
Google Oneindia Kannada News

ಚಂಡಿಗಢ ನವೆಂಬರ್ 28: ಹಣ್ಣು ಕೀಳಲು ಹೋಗಿ ಮೂರು ಮಕ್ಕಳು ರೈಲಿಗೆ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ಪಂಜಾಬ್‌ನ ಕಿರಾತ್‌ಪುರದಲ್ಲಿ ನಡೆದಿದೆ.

ಕಿರಾತ್‌ಪುರ ಸಾಹಿಬ್‌ನಲ್ಲಿ ಭಾನುವಾರ ರೈಲು ಹರಿದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿದ್ದು ಒಬ್ಬರು ಗಾಯಗೊಂಡಿದ್ದಾರೆ. ಮಕ್ಕಳು ಕೆಲವು ಮರಗಳ ಹಣ್ಣುಗಳನ್ನು ಕಿತ್ತಲು ಹಳಿಗಳ ಮೇಲೆ ನಿಂತಿದ್ದರು. ಈ ವೇಳೆ ರೈಲು ತಮ್ಮ ಬಳಿಗೆ ಬರುತ್ತಿದೆ ಎಂದು ಅವರು ಗಮನಿಸಿಲ್ಲ ಎಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಜಗಜಿತ್ ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.

Punjab: 3 children killed after getting hit by train while picking fruit

ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಮಕ್ಕಳು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ನಾಲ್ಕನೆಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಸಟ್ಲೆಜ್ ನದಿಯ ಮೇಲಿನ ಲೋಹಾಂಡ್ ರೈಲ್ವೆ ಸೇತುವೆಯ ಮೇಲೆ ಈ ಅಪಘಾತ ಸಂಭವಿಸಿದೆ. ಸಹರಾನ್‌ಪುರದಿಂದ ಹಿಮಾಚಲ ಪ್ರದೇಶಕ್ಕೆ ತೆರಳುತ್ತಿದ್ದ ರೈಲು ಕಿರಾತ್‌ಪುರ ಸಾಹಿಬ್‌ ಬಳಿ ಆಗಮಿಸುತ್ತಿದ್ದಂತೆ ಮಕ್ಕಳು ಹಳಿಗಳ ಮೇಲೆ ಬಿದ್ದಿದ್ದಾರೆ.

ಅಪಘಾತದ ನಂತರ ರೈಲು ಸ್ಥಗಿತಗೊಂಡಿತು. ಗಾಯಗೊಂಡ ಮಕ್ಕಳನ್ನು ಆನಂದಪುರ ಸಾಹಿಬ್‌ನಲ್ಲಿರುವ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಒಬ್ಬ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಘಟನೆಯ ನಂತರ, ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಟ್ವಿಟರ್‌ನಲ್ಲಿ ತಮ್ಮ ಸಂತಾಪವನ್ನು ಹಂಚಿಕೊಂಡರು. ಮೃತರ ಕುಟುಂಬಗಳಿಗೆ "ಸೂಕ್ತ ಪರಿಹಾರ" ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

English summary
A tragic incident took place in Kiratpur, Punjab where three children were killed by a train while picking fruit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X