ಹುತಾತ್ಮ ಸೈನಿಕರ ಹೆಸರು ಹಚ್ಚೆ ಹಾಕಿಸಿಕೊಂಡ ದೇಶಪ್ರೇಮಿ
ಬಿಕಾನೇರ್, ಫೆಬ್ರವರಿ 20: ದೇಶಭಕ್ತಿಯ ಪ್ರದರ್ಶನಕ್ಕೆ ಹಲವು ಮಾರ್ಗಗಳು. ದೇಶಪ್ರೇಮ ಮೆರೆಯಲು ಅನೇಕರು ಸೇನೆಗೆ ಸೇರಿಕೊಂಡರೆ, ವಿವಿಧ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಂಡ ಜನರು ತಮ್ಮದೇ ರೀತಿಯಲ್ಲಿ ದೇಶಭಕ್ತಿ ಮೆರೆಯುತ್ತಾರೆ.
ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಜನ ಮುಮ್ಮಲ ಮರುಗುವಾಗ ದೇಶಪ್ರೇಮದ ಮಾತುಗಳು ಹೆಚ್ಚು ವ್ಯಕ್ತವಾಗುತ್ತಿವೆ. ಅನೇಕರು ಭಾವುಕತೆಯಿಂದ ದೇಶಕ್ಕಾಗಿ ತಾವೂ ಹೋರಾಟಕ್ಕೆ ಸಿದ್ಧ ಎನ್ನುತ್ತಿದ್ದಾರೆ. ಆದರೆ, ರಾಜಸ್ಥಾನದ ಬಿಕಾನೇರ್‌ನ ಯುವಕನದು ವಿಶಿಷ್ಟ, ವಿಚಿತ್ರ ಎನಿಸುವ ದೇಶಪ್ರೇಮ. ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಹೆಸರುಗಳು ಈತನ ಮನದಲ್ಲಿ ಮಾತ್ರವಲ್ಲ, ಬೆನ್ನಿನಲ್ಲಿಯೂ ಇವೆ.
ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರಿಗೆ ಗೌರವ ಸಲ್ಲಿಸಲು ಗೋಪಾಲ್ ಸಹರನ್ ಎಂಬಾತ ಆಯ್ದುಕೊಂಡಿರುವುದು ವಿಶಿಷ್ಟ ಮಾರ್ಗವನ್ನು. ಸೋಮವಾರ ಅವರು ತಮ್ಮ ಬೆನ್ನ ಮೇಲೆ ಒಟ್ಟು 71 ಹುತಾತ್ಮರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದರಲ್ಲಿ ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ಸೈನಿಕರೂ ಸೇರಿದ್ದಾರೆ.

ಬಿಕಾನೇರ್‌ನ ಭಗತ್ ಸಿಂಗ್ ಯುವ ಬ್ರಿಗೇಡ್‌ನ ಸದಸ್ಯನಾಗಿರುವ ಗೋಪಾಲ್ ಅವರಿಗೆ, ದೇಶಕ್ಕಾಗಿ ಪ್ರಾಣ ಕೊಟ್ಟ ವೀರ ಯೋಧರ ಹೆಸರನ್ನು ಮರೆಯಲಾಗದಂತೆ ಮಾಡಲಾಗುತ್ತಿದ್ದೇನೆ ಎಂಬ ಹೆಮ್ಮೆಯಿದೆ.
In order to pay tributes to martyred soldiers of dastardly #PulwamaTerrorAttack in #JammuAndKashmir, Gopal Saharan from #Bikaner in #Rajasthan got their names tattooed on his back. pic.twitter.com/2YBy0BpeJf
— NooriBadat (@NooriBadat) 20 February 2019
'ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರಿಗೆ ಗೌರವ ಅರ್ಪಿಸಲು ನಾವು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತೇವೆ. ಪುಲ್ವಾಮಾ ದಾಳಿಯ ಬಳಿಕ ನಾನು ಅವರ ಹೆಸರು ಸದಾ ಸ್ಮರಣೀಯವಾಗಿರಲು ಏನನ್ನಾದರೂ ಮಾಡಬೇಕು ಎಂದು ನಿರ್ಧರಿಸಿದ್ದೆ.
ಫೆ. 14ರಂದು ನಡೆದ ದಾಳಿಯಲ್ಲಿ ಬಲಿಯಾದ 40ಕ್ಕೂ ಹೆಚ್ಚು ಸೈನಿಕರಲ್ಲದೆ, ಬೇರೆ ಬೇರೆ ಘಟನೆಗಳಲ್ಲಿ ಹುತಾತ್ಮರಾದ 31 ಸೈನಿಕರ ಹೆಸರನ್ನೂ ಸೇರಿಸಿ ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೇನೆ. ನನ್ನ ಈ ನಡೆ ದೇಶದ ಜನರಲ್ಲಿ ಸೈನಿಕರ ಕುರಿತಾದ ಗೌರವ ಹೆಚ್ಚಿಸುತ್ತದೆ ಎಂಬ ಭರವಸೆ ನನಗಿದೆ' ಎಂದು ಗೋಪಾಲ್ ತಿಳಿಸಿದ್ದಾರೆ.












Click it and Unblock the Notifications