ಪುದುಚೇರಿಯ ಮಾಜಿ ಸಚಿವ ಶಿವಕುಮಾರ್ ಹತ್ಯೆಗೆ ಹಳೆ ದ್ವೇಷವೇ ಕಾರಣ!

Posted By:
Subscribe to Oneindia Kannada

ಕಾರೈಕಲ್, ಜನವರಿ 04: ಪುದುಚೇರಿಯ ಮಾಜಿ ಕೃಷಿ ಸಚಿವ, ಮಾಜಿ ಸ್ಪೀಕರ್ ವಿಎಂಸಿ ಶಿವಕುಮಾರ್ ಅವರನ್ನು ದುಷ್ಕರ್ಮಿಗಳ ಗುಂಪೊಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ. ಶಿವಕುಮಾರ್ ಹತ್ಯೆಗೆ ಹಳೆ ದ್ವೇಷವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯ ನೆರವಿ-ಟಿ.ಆರ್.ಪಟ್ಟಿಣಂ ಬಳಿ ಈ ಕೊಲೆ ನಡೆದಿದ್ದು, ಕಟ್ಟಡ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಲು ತೆರಳುತ್ತಿದ್ದ ಶಿವಕುಮಾರ್ ಅವರನ್ನು ಕಾರಿನಿಂದ ಹೊರಕ್ಕೆಳೆದು ಮಚ್ಚಿನಿಂದ ಕೊಚ್ಚಲಾಗಿದೆ.

Puducherry Former minister ex-speaker VMC Sivakumar murdered

ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯವಾಗ ಮೃತಪಟ್ಟಿದ್ದಾರೆ. ಆರೋಪಿಗಳು ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ. ಹಳೆ ದ್ವೇಷವೇ ಕಾರಣ ಎಂದು ಟಿಆರ್ ಪಟ್ಟಿಣಂ ಪೊಲೀಸರು ತಿಳಿಸಿದ್ದಾರೆ.

67 ವರ್ಷದ ಶಿವಕುಮಾರ್ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 1996ರಿಂದ 2000ದವರೆಗೆ ಪುದುಚೇರಿ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು. ನೆರವಿ-ಟಿ.ಆರ್.ಪಟ್ಟಿಣಂ ಕ್ಷೇತ್ರದಿಂದ ನಾಲ್ಕು ಬಾರಿ ಡಿಎಂಕೆ ಪಕ್ಷದಿಂದ ಮತ್ತು ಒಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಂದಿದ್ದರು. ಸದ್ಯ ಎಐಎಡಿಎಂಕೆ ಜೊತೆ ಗುರುತಿಸಿಕೊಂಡಿದ್ದರು.(ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former minister and ex-speaker of Union Territory of Puducherry VMC Sivakumar murdered by unknown assailants. 67-year-old Sivakumar is survived by wife, two sons and two daughters. He was the speaker of Puducherry Assembly from 1996 to 2000
Please Wait while comments are loading...