Get Updates
Get notified of breaking news, exclusive insights, and must-see stories!

ಭಾರತದಲ್ಲಿ ಪಾಕಿಸ್ತಾನದ ಲಕ್ಷ ಲಕ್ಷ ಸೊಸೆಯಂದಿರು! ಇಲ್ಲಿಯೇ ಹೆರಿಗೆ, ಸರ್ಕಾರಿ ಸೌಲಭ್ಯ-ಪೌರತ್ವ: ಮೊದ್ಲು ಇದಕ್ಕೆ ಬ್ರೇಕ್ ಹಾಕಿ..

India-Pakistan War: ಭಾರತೀಯ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಅನ್ನು ವಿವಾಹವಾಗಿದ್ದಕ್ಕೆ ಸಾಕಷ್ಟು ಆಕ್ರೋಶ ಕೇಳಿ ಬಂದಿತ್ತು. ಇದೇ ರೀತಿ ಭಾರತದ ಲಕ್ಷಾಂತರ ಮುಸ್ಲಿಂ ಮಹಿಳೆಯರು ಪಾಕಿಸ್ತಾನ ಪುರುಷನನ್ನು ವಿವಾಹವಾಗಿದ್ದಾರೆ. ಮರಳಿ ಭಾರತಕ್ಕೆ ಹೆರಿಗೆ ಬರುವ ಆ ಮುಸ್ಲಿಂ ಮಹಿಳೆಯರು ಇಲ್ಲಿನ ಪೌರತ್ವ, ಸಕಲ ಸರ್ಕಾರಿ ಸೌಲಭ್ಯಗಳು ಪಡೆಯುತ್ತಾರೆ. ಇಲ್ಲಿಯೇ ಜೀವಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಭಾರತದ ಭವಿಷ್ಯಕ್ಕೆ ಸಾಕಷ್ಟು ತೊಂದರೆ ಉಂಟು ಮಾಡಬಹುದೆಂಬ ಕಾರಣಕ್ಕೆ ಜನಾಕ್ರೋಶ ವ್ಯಕ್ತವಾಗುತ್ತಿದೆ.

ಸಾನಿಯಾ ಮಿರ್ಜಾ ಅವರು ಸಾರ್ವಜನಿಕ ಜೀವನದಲ್ಲಿದ್ದವರು. ಹೀಗಾಗಿ ಅವರು ಪಾಕ್ ವ್ಯಕ್ತಿ ಮದುವೆ ಆದಾಗ ಆ ಬಗ್ಗೆ ಆಕ್ರೋಶ, ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಅನೇಕ ಸಾಮಾನ್ಯ ಮುಸ್ಲಿಂ ಮಹಿಳೆಯರು ಇದೇ ರೀತಿ ಮಾಡಿದ್ದು ಜಗತ್ತಿಗೆ ಬಹಿರಂಗವಾಗಿದ್ದು ತೀರಾ ಕಡಿಮೆ. ಸದ್ಯ ಪಹಲ್ಗಾಮ್ ಉಗ್ರರ ದಾಳಿಯಲ್ಲಿ 26 ಮಂದಿ ಭಾರತೀಯರು ಮೃತಪಟ್ಟ ನಂತರ ಪಾಕ್ ಉಗ್ರರಂತೆ ಅಡಗಿ ಕೂತಿದ್ದ ಭಾರತದ ಅದೆಷ್ಟೋ ವಿಷಯಗಳು ಬಹಿರಂಗವಾಗಿವೆ.

Public Anger Over Indian Muslim Womens Married to Pakistanis Getting More Fecilities in India

ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಮಾಣದಲ್ಲಿ ಪಾಕ್ ಪುರುಷರು ಭಾರತೀಯ ಮುಸ್ಲಿ ಮಹಿಳೆಯರ ಮದುವೆ ವಿಚಾರದ ಕುರಿತು ವಿಡಿಯೋಗಳನ್ನು ಶೇರ್ ಮಾಡಲಾಗುತ್ತಿದೆ. ಪಾಕ್ ಸೊಸೆಯಂದಿರುವ ಭಾರತದಲ್ಲಿ ಜೀವಿಸುವುದು, ಇಲ್ಲಿನ ಸೌಲಭ್ಯ ಪಡೆದುಕೊಳ್ಳುವ ವಿಚಾರ ದೇಶಾದ್ಯಂತ ಸುದ್ದಿ ಆಗಿದೆ. ಕನ್ನಡಿಗರು ಸೇರಿದಂತೆ ದೇಶಪ್ರೇಮಿಗಳು ಇದರ ವಿರುದ್ಧ ಮೊದಲು ಕ್ರಮ ಕೈಗೊಳ್ಳಿ ಎಂದು ಕೇಂದ್ರಕ್ಕೆ ಒತ್ತಡ ಹೇರುತ್ತಿದ್ದಾರೆ.

ಅಚ್ಚರಿ ಎನ್ನಿಸಿದರೂ ಈ ವಿಚಾರ ಸತ್ಯ. ಪಹಲ್ಗಾಮ್ ದಾಳಿ ಬಳಿಕ ಅಟ್ಟಾರಿ-ವಾಘಾ ಗಡಿ ಮುಚ್ಚಿದ ನಂತರ, ಪಾಕ್ ವಿರುದ್ಧ ಕೇಂದ್ರ ಕಠಿಣ ನಿರ್ಧಾರಗಳನ್ನು ಪ್ರಕಟಿಸಿದ ನಂತರ ಪಾಕ್ ಪ್ರಜೆಗಳನ್ನು ಭಾರತದ ಅಪಾರ ಸಂಖ್ಯೆ ಮುಸ್ಲಿಂ ಮಹಿಳೆಯರು ವಿವಾಹವಾಗಿರುವುದು ಸೇರಿದಂತೆ ಅನೇಕ ವಿಷಯಗಳು ಬೆಳಕಿಗೆ ಬಂದಿವೆ.

ಪಂಜಾಬ್ ನಲ್ಲಿದ್ದಾರೆ 83,000 ಪಾಕ್ ಸೊಸೆಯಂದಿರು..!

ಪಂಜಾಬ್‌ ರಾಜ್ಯ ಒಂದರಲ್ಲೇ 83,000 ಮುಸ್ಲಿಂ ಮಹಿಳೆಯರು ಪಾಕಿಸ್ತಾನದಲ್ಲಿ ವಿವಾಹವಾಗಿದ್ದಾರೆ ಎಂಬ ಕಟು ಸತ್ಯ ಭಾರತೀಯರಿಗೆ ಸಹಿಸದಾಗಿದೆ. ಕೇವಲ ಪಂಜಾಬ್ ಒಂದರಲ್ಲಿ ಮಾತ್ರವಲ್ಲ ಕರ್ನಾಟಕ ಮೈಸೂರು, ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಪಾಕ್ ಸೊಸೆಯಂದಿರು ಇದ್ದಾರೆ. ಇದೊಂದು ಗಂಭೀರ ವಿಷಯವಾಗಿದ್ದು, ಇದರಿಂದ ಭವ್ಯ ಭಾರತದ ಭವಿಷ್ಯದ ಸ್ಥಿತಿ ಏನಾಗಲಿದೆ? ಎಂಬುದನ್ನು ಸಹ ಎಳೆ ಎಳೆಯಾಗಿ ನೆಟ್ಟಿಗರು ಬಿಚ್ಚಿಸಿದ್ದಾರೆ.

ಪಾಕ್ ಮಕ್ಕಳಿಗೆ ಭಾರತದ ಪೌರತ್ವ..

ಮೂಲಗಳ ಪ್ರಕಾರ, ಭಾರತದಲ್ಲಿ 30 ಕೋಟಿ ಮುಸ್ಲಿಮರು ಇದ್ದಾರೆಂದು ಭಾವಿಸಿದರೂ ಅದರಲ್ಲಿ ಪಾಕ್‌ ಪುರುಷನನ್ನು ವಿವಾಹವಾದವರು ಅನೇಕರಿದ್ದಾರೆ. ಅವರು ವಿವಾಹವಾದ ಬಳಿಕ ಪಾಕ್ ಪೌರತ್ವವನ್ನು ಪಡೆಯಬೇಕು. ಆದರೆ ಅವರು ಅಲ್ಲಿಗೆ ಹೋಗದೆ ತಮ್ಮ ಮಕ್ಕಳಿಗೂ ಭಾರತದ ಪೌರತ್ವ ಕೊಡಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೇಂದ್ರದ ಸೂಚನೆ ಮೇರೆಗೆ ಪಾಕಿಸ್ತಾನಿಗಳ ಬಗ್ಗೆ ಕಾರ್ಯಾಚರಣೆ ಆರಂಭವಾಗಿದೆ..

ಭಾರತದಲ್ಲಿ ಹೆರಿಗೆ: ಮುಸ್ಲಿಂ ಮಕ್ಕಳಿಗೆ ಭಾರತದ ಸೌಲಭ್ಯ

ಪಾಕ್ ಪುರುಷರನ್ನು ಮದುವೆ ಆಗುವ ಮುಸ್ಲಿಂ ಮಹಿಳೆಯರಲ್ಲಿ ಬಹುತೇಕರು ಮರಳಿ ಭಾರತಕ್ಕೆ ಬಂದು ಹೆರಿಗೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಾರೆ. ಇಲ್ಲಿ ಜನಿಸುವ ಮಕ್ಕಳಿಗೆ ಇಲ್ಲಿನ ನಿಯಮಗಳಂತೆ ಪೌರತ್ವ, ಆಧಾರ್ ಕಾರ್ಡ್ ನೋಂದಣಿ ಸೇರಿದಂತೆ ಸರ್ಕಾರಿ ಸವಲತ್ತುಗಳು ಸಿಗುತ್ತವೆ. ಮಕ್ಕಳು ಭಾರತದ ನಾಗರಿಕರಾಗುತ್ತಾರೆ. ಪಡಿತರ ಚೀಟಿ ಹೊಂದುತ್ತಾರೆ. ಉಚಿತ ಪಡಿತರ, ಗ್ಯಾಸ್ ಸಿಲಿಂಡರ್, ವಿದ್ಯುತ್ ಪಡೆಯುತ್ತಾಳೆ, ಲಾಡ್ಲಿ ಬೆಹ್ನಾ ಯೋಜನೆಯಡಿ ಹಣ ಪಡೆಯುತ್ತಾಳೆ. ಇದಕ್ಕೆಲ್ಲ ಇಲ್ಲಿನ ವ್ಯವಸ್ಥೆಯಲ್ಲಿ ದೊಡ್ಡ ಲೋಪದೋಷವು ಸಹಕಾರಿಯಾಗಿದೆ ಎನ್ನಬಹುದು. ಭಾರತ ತನ್ನ ಖರ್ಚಿನಲ್ಲಿ ಅದೆಷ್ಟು ಐಎಸ್‌ಐ ಏಜೆಂಟ್‌ಗಳನ್ನು ಪೋಷಿಸಿದೆ ಎಂದು ಒಮ್ಮೆ ಯೋಚಿಸಿ. ಈ ಮೇಲಿನ ಕಾರಣಗಳಿಂದಲೇ ದೇಶದಲ್ಲಿನ ಮುಸ್ಲಿಂ ಮುಖಂಡರು ದಾಳಿಯಂತಹ ಸಂದರ್ಭದಲ್ಲಿ ಪಾಕಿಸ್ತಾನ ವಿರುದ್ಧ ಒಂದೇ ಒಂದು ಮಾತನ್ನೂ ಹೇಳುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

ಇಲ್ಲಿನ ಮುಸ್ಲಿಮರ ದೇಶಪ್ರೇಮ ಎಂಥದ್ದು?

ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿ ಮುಸ್ಲಿಮರಿಗೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುತ್ತಿರುವ ಇಲ್ಲಿನ ಮುಸ್ಲಿಮರ ದೇಶಪ್ರೇಮ ಎಂಥದ್ದು ಎಂದು ಯೋಚಿಸಬೇಕಿದೆ. ಮುಸ್ಲಿಮರ ಈ ನಡೆ ದೇಶಕ್ಕೆ ಅಪಾಯಕಾರಿ ಪರಿಸ್ಥಿತಿ ತಂದಿಡಬಹುದು. ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಂಡ ನಂತರ, ದೇಶದಲ್ಲಿ ವಾಸಿಸುವ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಬಹಳ ಮುಖ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಶುರುವಾಗಿದೆ.

ಮೈಸೂರಿನ ಪತ್ನಿ ಕರೆಗೆ ಉತ್ತರಿಸದ ಪಾಕಿಸ್ತಾನಿ ಪತಿ..

ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಪಾಕಿಸ್ತಾನ ಪುರುಷನನ್ನು ವಿವಾದವಾದ ಭಾರತೀಯ ಮುಸ್ಲಿಂ ಮಹಿಳೆಗೆ ಮೂವರು ಮಕ್ಕಳಿದ್ದಾರೆ. ದಾದಾ, ದಾದಿ, ತಂದೆ ಯಾರೂ ಮಕ್ಕಳನ್ನು ಕರೆದುಕೊಂಡು ಹೋಗಲು ಬರುತ್ತಿಲ್ಲ. ಮದುವೆಯಾಗಿ 10 ವರ್ಷಗಳಾದರೂ ಈ ಮಹಿಳೆ ಕರ್ನಾಟಕದ ಮೈಸೂರಿನವರು ಎನ್ನಲಾಗಿದೆ. ಈಕೆ ಪಾಸ್‌ಪೋರ್ಟ್ ಹೊಂದಿದ್ದಾರೆ. ಉಚಿತ ಆರೋಗ್ಯ ರಕ್ಷಣೆ, ಪಡಿತರ ಮತ್ತು ಸರ್ಕಾರಿ ಯೋಜನೆಗಳನ್ನು ಪಡೆದು ಇಲ್ಲಿಯೇ ವಾಸಿಸುತ್ತಿದ್ದಾರೆ. ಇದೀಗ ಪಾಕಿಸ್ತಾನ ಪ್ರಜೆಗಳನ್ನು ಅವರ ದೇಶಕ್ಕೆ ಕಳುಹಿಸುವ ಆದೇಶ ಬರುತ್ತಿದ್ದಂತೆ ಇವರಿಗೆ ನಡುಕ ಶುರುವಾಗಿದೆ. ತಾವು ಪಾಕ್ ಪ್ರಜೆಗಳು, ಪಾಕ್ ಸೊಸೆಯಂದಿರು ಎಂದು ಹೇಳಿಕೊಳ್ಳುತ್ತಿದ್ದಾರೆ.

ಇದರಿಂದ ಭಾರತಕ್ಕೆ ಆಗುವ ಸಮಸ್ಯೆ ಏನು?

ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಪ್ರವಾಸಿಗರು ಬಂದು ಸ್ಥಳೀಯ ನಿವಾಸಿಗಳಿಗೆ ಹೆಚ್ಚಿನ ಹಣ ಸಿಗುತ್ತಾ ಹೋದರೆ ಅವರು ತಮ್ಮ ಮಾತನ್ನು ಕೇಳುವುದಿಲ್ಲ. ಹೀಗಾಗಿ ಕೆಲ ಸ್ಥಳೀಯರಿಗೆ ಹಣ ನೀಡಿ ಭಾರತದ ಕುರಿತು ಮಾಹಿತಿ ಕಲೆ ಹಾಕುವ ಪಾಪಿ ಪಾಕಿಸ್ತಾನ, ಕಾಶ್ಮೀರಿಗಳಿಗೆ ಹಣ ಸಿಗದಂತೆ ಮಾಡಲು ಆಗಾಗ ದಾಳಿ ಮಾಡುತ್ತಲೇ ಇರುತ್ತಾರೆ. ಇದರಿಂದ ಹಣ ಸಿಗದೇ ಕಂಗಾಲಾದ ಕಾಶ್ಮೀರಿಗಳು ತಮ್ಮ ಬಳಿ ಬರುತ್ತಾರೆ. ತಾವು ಹಣ ಕೊಟ್ಟರೆ ಏನು ಬೇಕಾದರೂ ಸಹಾಯ ಮಾಡುತ್ತಾರೆ ಎಂಬ ಭಾವನೆ ಅವರಲ್ಲಿದೆ.

ಇನ್ನೂ ಪಾಕಿಸ್ತಾನ ಪುರಷರನ್ನು ವಿವಾಹವಾಗುವ ಮಹಿಳೆಯರನ್ನು ನೋಡಲು, ಕರೆದೊಯ್ಯಲು ಬರುವ ಪಾಕಿಸ್ತಾನಿಗರಿಗೆ ಭಾರತದ ವಿರುದ್ಧ ಸಂಚು ರೂಪಿಸಲು ಇದು ದಾರಿ ಮಾಡಿಕೊಡಬಹುದು. ಭಾರತದ ಆಂತರಿಕ ವಿಚಾರಗಳನ್ನು ಮಾಹಿತಿ ಸಲೀಸಾಗಿ ಸಿಗುತ್ತವೆ. ಇದರಿಂದ ಅವರ ಸಂಚಿಗೆ ಸಹಾಯವಾಗುತ್ತದೆ. ಪಾಕ್ ಏಜೆಂಟರು ಭಾರತದಲ್ಲಿ ಸೃಷ್ಟಿಯಾಗಿಬಿಡಬಹುದು. ಶತ್ರು ದೇಶದ ಜನರು ಭಾರತದಲ್ಲಿದ್ದರೆ ಅದರಿಂದ ಸಮಸ್ಯೆ ಈ ದೇಶಕ್ಕೆ ಹೆಚ್ಚು ಎಂಬುದು ಸಾಮಾನ್ಯ ಸಂಗತಿ. ಇದೆಲ್ಲ ಕಾರಣಗಳಿಂದ ಭಾರತಕ್ಕೆ ಪಾಕ್‌ ಮೇಲೆ ಯುದ್ಧ ಮಾಡುವುದು, ಉಗ್ರರ ದಾಳಿ ತಡೆಯುವುದು ಹೇಗೆ ಮುಖ್ಯವೋ, ಕಾಶ್ಮೀರ ಸೇರಿದಂತೆ ಭಾರತದಲ್ಲಿರುವ ಪಾಕಿಸ್ತಾನ ಸೊಸೆಯಂದಿರನ್ನು ಅವರ ದೇಶಕ್ಕೆ ಕಳುಹಿಸುವುದು, ಇಲ್ಲಿನ ಸೌಲಭ್ಯ ಸಿಗದಂತೆ ಮಾಡಿ, ಅನುಮಾನ ಬಂದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅಷ್ಟೇ ಮುಖ್ಯವಾಗಿದೆ ಎಂಬುದರ ಮೇಲೆ ನೆಟ್ಟಿಗರು ವಿಡಿಯೋ ಶೇರ್ ಮಾಡಿಕೊಂಡು ಬೆಳಕು ಚೆಲ್ಲಿದ್ದಾರೆ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+