ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಟ್ಟಿಗೆ ಊಟ ಮಾಡಿ, ಮುಂದಿನ ಪಟ್ಟಿಗೆ ಸಿದ್ಧವಾದರೆ ಕಾಂಗ್ರೆಸ್ ಚತುರರು

ದೇಶ-ವಿದೇಶದ ವಿವಿಧ ಘಟನೆಗಳನ್ನು ಫೋಟೋಗಳ ಮೂಲಕ ಪ್ರತಿನಿಧಿಸುವ ಪ್ರಯತ್ನವಿದು. ಕಾಂಗ್ರೆಸ್ ನಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಸಣ್ಣದಾಗಿ ಸೂಚನೆ ದೊರೆಯುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಲೇಖನದಲ್ಲಿ ಫೋಟೋ ಕೂಡ ಇದೆ

|
Google Oneindia Kannada News

ಪಾಕಿಸ್ತಾನವು ಅದೇನು ನಿರ್ಧರಿಸಿದೆಯೋ ಗೊತ್ತಿಲ್ಲ. ಅದರೆ ಭಾರತವನ್ನು ರೊಚ್ಚಿಗೆಬ್ಬಿಸುವ ಕೆಲಸವನ್ನಂತೂ ಮಾಡುತ್ತಿದೆ. ಇಲ್ಲಿನ ವಾಯುದಳದ ಮಾಜಿ ಅಧಿಕಾರಿ ಕುಲಭೂಷಣ್ ಯಾದವ್ ನನ್ನು ಕಳೆದ ವರ್ಷ ಪಾಕ್ ಬಂಧಿಸಿತ್ತು. ಗೂಢಚಾರಿಕೆ ಹಾಗೂ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆಸಿದ ಆರೋಪದಲ್ಲಿ ಅಲ್ಲಿನ ಮಿಲಿಟರಿ ಕೋರ್ಟ್ ವಿಚಾರಣೆ ನಡೆಸಿ, ಇದೀಗ ಮರಣದಂಡನೆ ವಿಧಿಸಿದೆ.

ಹಾಗೆ ನೇಣಿಗೇರಿಸುವುದಾದರೆ ಭಾರತವು ಎಷ್ಟು ಪಾಕಿಸ್ತಾನಿಗಳನ್ನು ಮರಣದಂಡನೆಗೆ ಈಡು ಮಾಡಬೇಕಿತ್ತು? ಆದರೆ ಈ ಪ್ರಕರಣದಲ್ಲಿ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸಿದೆ. ಅದರಲ್ಲೂ ಕೇಂದ್ರ ಸರಕಾರ, ಒಂದು ವೇಳೆ ಮರಣದಂಡನೆ ಶಿಕ್ಷೆ ಜಾರಿಯಾದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ನೇರಾ-ನೇರ ಎಚ್ಚರಿಕೆ ನೀಡಿದೆ. ಮತ್ತು ದೇಶದ ವಿವಿಧೆಡೆ ಪಾಕ್ ವಿರುದ್ಧ ಪ್ರತಿಭಟನೆಗಳು ನಡೆದಿವೆ.[ಕಾಂಗ್ರೆಸ್ ಬಲಪಡಿಸಲು ಮತ್ತೆ ಅಖಾಡಕ್ಕೆ ಇಳಿದರು ಸೋನಿಯಾ ಗಾಂಧಿ]

ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಕೆ ಆಂಟನಿ ಸೇರಿ ಮಂಗಳವಾರ ರಾತ್ರಿ ಊಟದ ವೇಳೆ ಸಭೆಯೊಂದನ್ನು ನಡೆಸಿದ ಹಾಗಿದೆ. ಇನ್ನು ರಾಧೇ ಮಾ ಅವರು ಪಂಜಾಬ್ ನ ಅಮೃತ್ ಸರದ ಗೋಶಾಲೆಯಲ್ಲಿ ಹಸುಗಳಿಗೆ ಮೇವುಣಿಸಿದ್ದಾರೆ. ಎಟ್ನಾ ಪರ್ವತದ ಜ್ವಾಲಾಮುಖಿ ಬಗ್ಗೆ ನಿಮಗೆಷ್ಟು ಗೊತ್ತು? ಎಲ್ಲವನ್ನೂ ತಿಳಿಯಲು ಈ ಫೋಟೋಗಳನ್ನು ನೋಡಿ, ಮಾಹಿತಿ ಓದಿರಿ.

ಪಾಕ್ ವಿರುದ್ಧ ಆಕ್ರೋಶ

ಪಾಕ್ ವಿರುದ್ಧ ಆಕ್ರೋಶ

ಭಾರತ ವಾಯುಸೇನೆಯ ಮಾಜಿ ಅಧಿಕಾರಿ ಕುಲ್ ಭೂಷಣ್ ಜಾಧವ್ ಗೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಮರಣದಂಡನೆ ವಿಧಿಸಿರುವುದನ್ನು ಖಂಡಿಸಿ ಮಹಾರಾಷ್ಟ್ರದ ಮುಲುಂದ್ ನಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಯಿತು.

ಎಟ್ನಾ ಜ್ವಾಲಾಮುಖಿ

ಎಟ್ನಾ ಜ್ವಾಲಾಮುಖಿ

ಯುರೋಪ್ ನ ಪರ್ವತ ಎಟ್ನಾ ಮಂಜು ಹೊದ್ದಿರುತ್ತದೆ. ಆದರೆ ಅದು ಅಗ್ನಿಯನ್ನು ಒಡಲಲ್ಲಿಟ್ಟು ಕೊಂಡ ಪರ್ವತವಾಗಿದ್ದು, ಆಗಾಗ ಹೊರ ಉಗುಳುತ್ತದೆ. ಮಂಗಳವಾರ ಎಟ್ನಾ ಪರ್ವತ ಜ್ವಾಲಾಮುಖಿ ಕಂಡುಬಂದಿದ್ದು ಹೀಗೆ.

ಕಾಂಗ್ರೆಸ್ ಭವಿಷ್ಯದ ಬಗ್ಗೆ ಏನಂತೀರಿ ಮನಮೋಹನ್?

ಕಾಂಗ್ರೆಸ್ ಭವಿಷ್ಯದ ಬಗ್ಗೆ ಏನಂತೀರಿ ಮನಮೋಹನ್?

ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಹಿರಿಯ ನಾಯಕ ಎಕೆ ಆಂಟನಿ ನವದೆಹಲಿಯಲ್ಲಿ ಮಂಗಳವಾರ ರಾತ್ರಿ ಊಟದ ವೇಳೆ ಒಟ್ಟಿಗೆ ಕಂಡುಬಂದರು.

ಅಮೃತ್ ಸರದ ಗೋ ಶಾಲೆ

ಅಮೃತ್ ಸರದ ಗೋ ಶಾಲೆ

ಪಂಜಾಬ್ ರಾಜ್ಯದ ಅಮೃತ್ ಸರದ ಗೋ ಶಾಲೆಯಲ್ಲಿ ಮಂಗಳವಾರ ಆಧ್ಯಾತ್ಮಿಕ ಗುರು ರಾಧೇ ಮಾ ಹಸುಗಳಿಗೆ ಮೇವುಣಿಸಿದರು.

ರಾಧಿಕಾ ಕಚೇರಿ ಮೆಲೆ ದಾಳಿ

ರಾಧಿಕಾ ಕಚೇರಿ ಮೆಲೆ ದಾಳಿ

ಚೆನ್ನೈನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶರತ್ ಕುಮಾರ್ ಅವರ ಪತ್ನಿಗೆ ಸೇರಿದ ರಾಧಾನ್ ಮೀಡಿಯಾ ವರ್ಕ್ಸ್ ಮೇಲೆ ದಾಳಿ ನಡೆಸಿದ ವೇಳೆ ಮಾಧ್ಯಮಗಳಿಗೆ ಎದುರಾದ ನಟ-ರಾಜಕಾರಣಿ ಶರತ್ ಕುಮಾರ್ ಕಂಡಿದ್ದು ಹೀಗೆ.

ಬೈಸಾಕಿ ಸೆಲ್ಫಿ

ಬೈಸಾಕಿ ಸೆಲ್ಫಿ

ಪಟಿಯಾಲದಲ್ಲಿ ಬೈಸಾಕಿ ಹಬ್ಬದ ಸಂಭ್ರಮದಲ್ಲಿ ಸೆಲ್ಫಿ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದ ಮಹಿಳೆಯರು.

English summary
National and International events represent through PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X