ದಕ್ಷಿಣ - ಉತ್ತರ ಭಾರತದ ಚರ್ಚೆ ಸೃಷ್ಟಿಸಿದ ಪ್ರಿಯಾಂಕಾ ಗಾಂಧಿ ಟ್ವೀಟ್, ಏನ್ ಹೇಳಿದ್ರು !
Delhi Pollution: ಕೇರಳದ ವಯನಾಡು ಲೋಕಸಭೆ ಉಪ ಚುನಾವಣೆ ಮುಕ್ತಾಯವಾಗಿದೆ. ಇದೇ ಮೊದಲ ಬಾರಿ ಕೇರಳದ ವಾಯನಾಡುವಿನಿಂದ ಕಾಂಗ್ರೆಸ್‌ನ ನಾಯಕಿ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರು ವಾಯನಾಡುವಿನಲ್ಲಿ ಮೊದಲ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದಾರೆ. ಇದೀಗ ಅವರು ದೆಹಲಿ ಹಾಗೂ ವಾಯನಾಡು ಎರಡರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಪ್ರಿಯಾಂಕಾ ಅವರು ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆಗೆ ನಾಂದಿ ಹಾಡಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು, ಕೇರಳದಲ್ಲಿ ಭರ್ಜರಿ ಚುನಾವಣೆ ಪ್ರಚಾರ ಹಾಗೂ ಮತದಾನ ಪ್ರಕ್ರಿಯೆ ಮುಗಿದ ಮೇಲೆ ದೆಹಲಿಗೆ ಹಿಂದಿರುಗಿದ್ದು, ಇಲ್ಲಿನ ವಾತಾವರಣ ನೋಡಿ ದಂಗಾಗಿರುವುದಾಗಿ ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಭಾರೀ ಹೆಚ್ಚಳವಾಗಿದೆ. ದೆಹಲಿಯ ಗಾಳಿಯ ಮಟ್ಟವು ವಿಪರೀತವಾಗಿ ಕುಸಿತ ಕಂಡಿದೆ. ಈ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಇದೀಗ ಈ ವಿಷಯದ ಬಗ್ಗೆ ಪರ - ವಿರೋಧ ಚರ್ಚೆಗಳು ಜೋರಾಗಿವೆ.

ನಾನು ವಾಯನಾಡ್‌ನಿಂದ ದೆಹಲಿಗೆ ಹಿಂದಿರುಗಿದ ಮೇಲೆ ನನಗೆ ಗ್ಯಾಸ್ ಚೇಂಬರ್‌ಗೆ ಪ್ರವೇಶ ಮಾಡಿದ ಅನುಭವವಾಗಿದೆ. ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ವಾಯನಾಡಿಗೂ ಇಲ್ಲಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲಿ ಪರಿಶುದ್ಧವಾದ ಗಾಳಿಯಿಂದ ಏಕಾಏಕಿ ದೆಹಲಿಗೆ ಬರುತ್ತಿದ್ದಂತೆಯೇ ಯಾವುದೋ ಗ್ಯಾಸ್ ಚೇಂಬರ್‌ಗೆ ಒಳಗೆ ಬಂದಿರುವ ಅನುಭವಾ ಆಯಿತು ಎಂದಿದ್ದಾರೆ.
ಕೇರಳದ ವಾಯನಾಡ್‌ನಲ್ಲಿ ವಾಯು ಮಾಲಿನ್ಯದ ಪ್ರಮಾಣವು 35 aqi ಇದೆ. ದೆಹಲಿಯಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಮೇಲಿಂದ (ಆಕಾಶದಿಂದ ವಿಮಾನದಲ್ಲಿ) ನೋಡಿದರೆ ಇದು ಇನ್ನಷ್ಟು ಆಘಾತವನ್ನು ಉಂಟು ಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯವಾಗುತ್ತಿದೆ.
ಶುದ್ಧಗಾಳಿಗಾಗಿ ನಾವೆಲ್ಲ ಪಕ್ಷಾತೀತವಾಗಿ ಶ್ರಮಿಸಬೇಕಾಗಿದೆ. ಈ ಸಮಸ್ಯೆಯನ್ನು ತಪ್ಪಿಸಲು ನಾವೆಲ್ಲ (ಎಲ್ಲಾ ಪಕ್ಷಗಳೂ) ಒಂದಾಗಬೇಕಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಇಲ್ಲಿನ ಜನರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ದೆಹಲಿಯಲ್ಲಿ ಮಕ್ಕಳಿಗೆ, ಹಿರಿಯರಿಗೆ ಹಾಗೂ ಶ್ವಾಸಕೋಶದ ಸಮಸ್ಯೆ ಇರುವವರಿಗೆ ಭಾರೀ ಸಮಸ್ಯೆ ಆಗುತ್ತಿದೆ. ದೆಹಲಿಯಲ್ಲಿನ ಈ ಸಮಸ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಏನಾದರೂ ಪರಿಹಾರ ಕಂಡುಕೊಳ್ಳಲೇಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Coming back to Delhi from Wayanad where the air is beautiful and the AQI is 35, was like entering a gas chamber. The blanket of smog is even more shocking when seen from the air.
— Priyanka Gandhi Vadra (@priyankagandhi) November 14, 2024
Delhi’s pollution gets worse every year. We really should put our heads together and find a solution… pic.twitter.com/dYMtjaVIGB
ಮುಂದಿನ ವರ್ಷ ಚುನಾವಣೆ: ಇದೀಗ ದೇಶದ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಜಾರ್ಖಂಡ್‌ನಲ್ಲಿ ಈಗಾಗಲೇ ಒಂದು ಹಂತದ ಚುನಾವಣೆಯಾಗಿದ್ದು, ಎರಡೇ ಹಂತದ ಚುನಾವಣೆ ಇದೇ 20ಕ್ಕೆ ನಡೆಯಲಿದೆ. ಇನ್ನು ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ನವೆಂಬರ್ 20ಕ್ಕೆ ಮತದಾನ ನಡೆಯಲಿದೆ.
ಇನ್ನು ಮುಂದಿನ ವರ್ಷ ಅಂದರೆ 2025ನೇ ಸಾಲಿನ ಫೆಬ್ರವರಿಯಲ್ಲಿ ದೆಹಲಿಯಲ್ಲೂ ಚುನಾವಣೆ ನಡೆಯಲಿದೆ. ದೆಹಲಿಯಲ್ಲಿ ಇದೀಗ ಆಮ್ ಆದ್ಮಿ ಪಾರ್ಟಿ ಅಧಿಕಾರದಲ್ಲಿ ಇದೆ. ವಾಯುಮಾಲಿನ್ಯ ಸಮಸ್ಯೆ ಪ್ರತಿ ಚಳಿಗಾಲದಲ್ಲೂ ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಹೆಚ್ಚಾಗುತ್ತದೆ. ಪ್ರಿಯಾಂಕಾ ಗಾಂಧಿ ಅವರ ಅಭಿಪ್ರಾಯಕ್ಕೆ ಇದೀಗ ಆಮ್ ಆದ್ಮಿ ಪಾರ್ಟಿ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications