ಕತಿಯಾರ್ ಸೆಕ್ಸಿಸ್ಟ್ ಮಾತು ಕೇಳಿ ಗಹಗಹಿಸಿ ನಕ್ಕ ಪ್ರಿಯಾಂಕಾ!

Posted By:
Subscribe to Oneindia Kannada

ನವದೆಹಲಿ, ಜನವರಿ 25: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಆ ರಾಜ್ಯದಲ್ಲಿ ಕಾಂಗ್ರೆಸ್-ಸಮಾಜವಾದಿ ಪಕ್ಷಗಳ ಪರವಾಗಿ ಪ್ರಚಾರಕ್ಕಾಗಿ ಆಗಮಿಸಲಿರುವ ತಮ್ಮ ವಿರುದ್ಧ ಆಕ್ಷೇಪಾರ್ಹವಾಗಿ ಅಪಹಾಸ್ಯ ಮಾಡಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕ ವಿನಯ್ ಕತಿಯಾರ್ ಅವರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರಾಜಕೀಯವಾಗಿಯೇ ಉತ್ತರಿಸಿದ್ದಾರೆ.

Priyanka Gandhi laughs at Vinay Katiyar's sexist comment: 'Exposes BJP mindset'

ವಿನಯ್ ಅವರು, "ಉತ್ತರ ಪ್ರದೇಶದಲ್ಲಿ ಪ್ರಚಾರ ಮಾಡಲಿರುವ ಪ್ರಿಯಾಂಕಾ ಗಾಂಧಿಯವರಿಗಿಂತ ಸುಂದರಿಯರು ನಮ್ಮ ಪಕ್ಷದಲ್ಲಿ (ಬಿಜೆಪಿ) ಇದ್ದಾರೆ. ಹಾಗಾಗಿ, ಪ್ರಿಯಾಂಕಾ ಅವರಿಂದ ಮತದಾರ ಮರುಳಾಗುತ್ತಾನೆ ಎಂದು ನನಗನ್ನಿಸುವುದಿಲ್ಲ'' ಎಂದಿದ್ದರು. ಅರ್ಥಾತ್, ಪರೋಕ್ಷವಾಗಿ ಅವರು, ಪ್ರಿಯಾಂಕಾ ಅವರಿಗೆ ಅವರ ಸೌಂದರ್ಯವೇ ಬಂಡವಾಳ ಎಂದಿದ್ದರು.

ಇದಕ್ಕೆ ಪ್ರಿಯಾಂಕಾ ಅವರು ನಗುತ್ತಾ ಉತ್ತರಿಸಿದ್ದಾರೆಂದು ಹೇಳಿರುವ ಅವರ ಆಪ್ತರಾದ ಪ್ರೀತಿ ಸಹಾಯ್, ''ವಿನಯ್ ಅವರ ಟೀಕೆ ಸ್ತ್ರೀಯರ ಬಗ್ಗೆ ಅವರ ಪಕ್ಷವು ಹೊಂದಿರುವ ಮನೋಭಾವವನ್ನು ಅಭಿವ್ಯಕ್ತಗೊಳಿಸಿದ್ದಾರೆ'' ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Congress party's Priyanka Gandhi replied to the comments of BJP politician Vinay Katiyar's offensive sexist statements about her and she said "he expose the BJP's mindset towards women".
Please Wait while comments are loading...