ರಾಜಸ್ಥಾನ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ಪ್ರಿಯಾಂಕಾ ಗಾಂಧಿ ಭಾಗಿ

ಜೈಪುರ, ಡಿ. 12: ಕಾಂಗ್ರೆಸ್ ಸಮಿತಿಯ ನಾಯಕಿ ಪ್ರಿಯಾಂಕಾ ಗಾಂಧಿ, ಅವರ ಪುತ್ರಿ ಮಿರಾಯಾ ವಾದ್ರಾ, ಪತಿ ರಾಬರ್ಟ್ ವಾದ್ರಾ ಸೋಮವಾರ ಮೊದಲ ಬಾರಿಗೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಪ್ರಿಯಾಂಕಾ ಗಾಂಧಿ ಮತ್ತು ಮಿರಾಯಾ ವಾದ್ರಾ ಜೊತೆಗೆ ನೂರಾರು ಮಹಿಳೆಯರು ಸೋಮವಾರ ರಾಜಸ್ಥಾನದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.

ಸೋಮವಾರ ಬುಂದಿ ಜಿಲ್ಲೆಯ ಬಾಬಾಯಿಯಲ್ಲಿರುವ ತೇಜಾಜಿ ಮಹಾರಾಜ್ ಮಂಡಿಯಿಂದ ಪುನರಾರಂಭಗೊಂಡ ಭಾರತ್ ಜೋಡೋ ಯಾತ್ರೆಯನ್ನು ನಾರಿ ಶಕ್ತಿ ಪಾದ ಯಾತ್ರೆ ಎಂದು ಕರೆಯಲಾಗುತ್ತಿದೆ. ಮಹಿಳಾ ಸಬಲೀಕರಣದ ಸಂದೇಶವನ್ನು ಸಾರುವ ದಿನವಾಗಿ ಈ ಪಾದಯಾತ್ರೆಯನ್ನು ಆಚರಿಸಲಾಗುತ್ತಿದೆ.

Priyanka Gandhi, Her Daughter, Husband Robert Vadra Joins Bharat Jodo Yatra

ಸುತ್ತಲಿನ ಪ್ರದೇಶಗಳ ಪಕ್ಷದ ಕಾರ್ಯಕರ್ತರು ಮತ್ತು ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜೊತೆಗೆ ಕೋಟಾ-ಲಾಲ್ಸೋಟ್ ಹೆದ್ದಾರಿಯಲ್ಲಿ ಬಾಬಾಯಿಯಿಂದ ಸವಾಯಿ ಮಾಧೋಪುರ್ ಜಿಲ್ಲೆಯ ಪಿಪಾಲ್ವಾಡಕ್ಕೆ ಮೆರವಣಿಗೆ ನಡೆಸಿದ್ದಾರೆ.

ಸೋಮವಾರ ಬೆಳಿಗ್ಗೆ ಯಾತ್ರೆ ಪುನರಾರಂಭಗೊಂಡಾಗ 5,000 ಕ್ಕೂ ಹೆಚ್ಚು ಮಹಿಳೆಯರು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯೊಂದಿಗೆ ಪಾದಯಾತ್ರೆ ಪ್ರಾರಂಭಿಸಿದರು. ಹೆಚ್ಚಿನ ಸಂಖ್ಯೆಯ ಮಹಿಳೆಯರು ದಾರಿ ಮಧ್ಯೆಯಲ್ಲಿ ಸೇರಿಕೊಂಡರು ಎಂದು ಕಾಂಗ್ರೆಸ್‌ನ ಇಂದರ್‌ಗಢ (ಬಂಡಿ) ಬ್ಲಾಕ್ ಅಧ್ಯಕ್ಷ ಅಜಯ್ ಶರ್ಮಾ ಮಾಹಿತಿ ನೀಡಿದ್ದಾರೆ.

ಭಾರತ್ ಜೋಡೋ ಯಾತ್ರೆಯ 96 ನೇ ದಿನವನ್ನು ಮಹಿಳಾ ಸಬಲೀಕರಣಕ್ಕೆ ಮೀಸಲಿಡಲಾಗಿದೆ. ಅದಕ್ಕಾಗಿಯೇ ಇದನ್ನು ನಾರಿ ಶಕ್ತಿ ಪಾದ ಯಾತ್ರೆ ಎಂದು ಕರೆಯಲಾಗುತ್ತಿದೆ ಎಂದು ಬಿಜೆವೈ ರಾಜ್ಯ ಸಹ-ಸಂಯೋಜಕ ಕಪಿಲ್ ಯಾದವ್ ಹೇಳಿದ್ದಾರೆ.

Priyanka Gandhi, Her Daughter, Husband Robert Vadra Joins Bharat Jodo Yatra

ಇಷ್ಟು ದಿನಗಳ ಪಾದಯಾತ್ರೆಯಲ್ಲಿ ಯಾತ್ರೆ ಪ್ರವೇಶಿಸಿರುವ ಏಕೈಕ ಕಾಂಗ್ರೆಸ್ ಆಡಳಿತದ ರಾಜ್ಯ ರಾಜಸ್ಥಾನವಾಗಿದೆ. ಭಾರತ್ ಜೋಡೋ ಯಾತ್ರೆ ಡಿಸೆಂಬರ್ 21 ಕ್ಕೆ ಹರಿಯಾಣವನ್ನು ಪ್ರವೇಶಿಸಲಿದೆ.

ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿಗಿದೆ. ಇದುವರೆಗೆ ಐದು ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣವನ್ನು ಕ್ರಮಿಸಿದೆ. ನಂತರ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮೂಲಕ ಸಂಚರಿಸಿ ರಾಜಸ್ಥಾನ ತಲುಪಿದೆ. ಇದು ಫೆಬ್ರವರಿ 2023 ರ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+