ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವರೇ.. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿನ ರೂವಾರಿ

|
Google Oneindia Kannada News

ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಗುಜರಾತ್ ನಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಲಭಿಸಿದೆ, ಹಿಮಾಚಲದಲ್ಲಿ ಕಾಂಗ್ರೆಸ್ ಸರಕಾರ ರಚಿಸುವಷ್ಟು ಸ್ಥಾನವನ್ನು ಗಳಿಸಿದೆ.

ಒಂದು ಬಾರಿ ಅಧಿಕಾರದಲ್ಲಿರುವ ಪಕ್ಷವನ್ನು ಮುಂದಿನ ಬಾರಿಯೂ ಅಧಿಕಾರಕ್ಕೆ ಬರುವಷ್ಟು ಸ್ಥಾನವನ್ನು ಹಿಮಾಚಲದ ಜನತೆ ನೀಡಿದ ಉದಾಹರಣೆ ವಿರಳ. ಆ ಪದ್ದತಿ ಈ ಬಾರಿಯೂ ಮುಂದುವರಿದಿದೆ.

HP Election Result 2022 ; ಕಾಂಗ್ರೆಸ್ 'ಕೈ' ಹಿಡಿದ 5 ಪ್ರಮುಖ ಅಂಶಗಳು
ಕಳೆದ ಚುನಾವಣೆಯಲ್ಲಿ 44ಸ್ಥಾನವನ್ನು ಗೆದ್ದಿದ್ದ ಬಿಜೆಪಿ ಈ ಬಾರಿ (ಸದ್ಯದ ಟ್ರೆಂಡಿಂಗ್) ಪ್ರಕಾರ 26 ಸ್ಥಾನವನ್ನು, ಕಳೆದ ಬಾರಿ 21ಸ್ಥಾನವನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 39 ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ.

Priyanka Gandhi Effective Political Game Plan Worked Out In Himachal Pradesh

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣಕರ್ತರಲ್ಲಿ ಪ್ರಮುಖರೆಂದರೆ, ಚುನಾವಣಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಪ್ರಿಯಾಂಕ ಗಾಂಧಿ ವಾಧ್ರಾ. ಪಕ್ಷದ ಪರವಾಗಿ ವ್ಯವಸ್ಥಿತ ಪ್ರಚಾರವನ್ನು ನಡೆಸಿದ್ದ ಪ್ರಿಯಾಂಕ, ಪಕ್ಷವನ್ನು ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಧಾನಿ ಶಿಮ್ಲಾದ ಫಾರಂ ಹೌಸಿನಲ್ಲೇ ಮೊಕ್ಕಾಂ ಹೂಡಿ, ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಎಲ್ಲದರ ಉಸ್ತುವಾರಿಯನ್ನು ಇವರು ವಹಿಸಿಕೊಂಡಿದ್ದರು. ಸಹೋದರ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯೂಸಿಯಾಗಿದ್ದರೆ, ಪ್ರಿಯಾಂಕ ಅವರು ಹಿಮಾಚಲದ ಜವಾಬ್ದಾರಿಯನ್ನು ನೋಡಿಕೊಂಡಿದ್ದರು.

Priyanka Gandhi Effective Political Game Plan Worked Out In Himachal Pradesh

ಕಳೆದ ಉತ್ತರ ಪ್ರದೇಶದ ಅಸೆಂಬ್ಲಿಯ ವೇಳೆ ರಾಜ್ಯದ ಪೂರ್ವ ಭಾಗದ ಚುನಾವಣಾ ಉಸ್ತುವಾರಿಯನ್ನು ಪ್ರಿಯಾಂಕಗೆ ವಹಿಸಲಾಗಿತ್ತು. ಆದರೆ, ಅಲ್ಲಿ ಪ್ರಿಯಾಂಕ ಅವರ ಚರಿಸ್ಮಾ ವರ್ಕೌಟ್ ಆಗಿರಲಿಲ್ಲ, ಈಗ, ಹಿಮಾಚಲದಲ್ಲಿ ಪ್ರಿಯಾಂಕ ಅವರ ರಣತಂತ್ರ ಪಕ್ಷಕ್ಕೆ ವರದಾನವಾಗಿದೆ.

ರಾಜ್ಯದಲ್ಲಿ ಹಲವು ಚುನಾವಣಾ ಪ್ರಚಾರವನ್ನು ನಡೆಸಿದ್ದ ಪ್ರಿಯಾಂಕ, ರಾಜೀವ್ ಶುಕ್ಲಾ ಅವರನ್ನು ಚುನಾವಣಾ ಪ್ರಮುಖರನ್ನಾಗಿ ಮಾಡಿದರು. ಪಕ್ಷದಲ್ಲಿ ಬಂಡಾಯ ಏಳದಂತೆ ಎಲ್ಲರನ್ನು ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ಮಾಡಿದ್ದು ಪಕ್ಷಕ್ಕೆ ಅನುಕೂಲವಾಯಿತು ಎನ್ನುವುದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಾರೆ.

English summary
Priyanka Gandhi Effective Political Game Plan Worked Out In Himachal Pradesh. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X