Priyanka Chopra Deepfake: ರಶ್ಮಿಕಾ, ಅಲಿಯಾ ಭಟ್ ಬಳಿಕ ಪ್ರಿಯಾಂಕಾ ಚೋಪ್ರಾಗೆ ಡಿಪ್‌ಫೇಕ್ ಸಂಕಷ್ಟ: Viral
ನವದೆಹಲಿ, ಡಿಸೆಂಬರ್ 06: ಭಾರತದಲ್ಲಿ ಸದ್ಯದ ಮಟ್ಟಿಗೆ ಡೀಪ್‌ಫೇಕ್ (Deepfake Video) ಪಿಡುಗು ಅಂತ್ಯವಾಗುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಇದರ ಬೆದರಿಕೆ ಹೆಚ್ಚಾಗುತ್ತಲೆ ಇದ್ದು, ಮಹಿಳೆಯರು ಅದರಲ್ಲೂ ನಟಿಮಣಿಯುರ ಈ ಜಾಲದ ಸಂತ್ರಸ್ತರಾಗುತ್ತಿದ್ದಾರೆ. ಇದೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾಗೆ ಡೀಪ್‌ಫೇಕ್ ಸಂಕಷ್ಟ ಎದುರಾಗಿದೆ.
ಇಂಟರ್‌ನೆಟ್‌ನಲ್ಲಿ AI (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನ ಬಳಸಿ ನಕಲಿ ಡೀಫ್‌ಫೇಕ್ ವಿಡಿಯೋ/ಫೋಟೊ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇತ್ತೀಚೆಗಷ್ಟೇ ಬಹುಬಾಷಾ ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಮತ್ತು ಇತರ ಅನೇಕ ನಟಿಯರ ಈ ಡೀಪ್‌ಫೇಕ್ ಎದುರಿಸಿದ್ದರು.

ಇದೀಗ ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಅವರ ಧ್ವನಿಯನ್ನು ಡೀಫ್‌ಪೇಕ್ ಮಾಡಿ ಹರಿಬಿಡಲಾಗಿದೆ. ಪ್ರಿಯಾಂಕಾ ಚೋಪ್ರಾ ಅವರ ಈ ಪ್ರಮೋಷನ್ ವಿಡಿಯೋದ ಡಿಪ್‌ಫೇಕ್ ವೈಸ್ ವಿಡಿಯೋ ಹರಿದಾಡುತ್ತಿದೆ.
ಸಂದರ್ಶನದ 'ಪಿಗ್ಗಿ' ಧ್ವನಿ ಬದಲಾವಣೆ
ಸಂದರ್ಶನವೊಂದರಲ್ಲಿ ಪಿಗ್ಗಿ ಮಾತನಾಡಿದ ವಿಡಿಯೋದಲ್ಲಿನ ಧ್ವನಿಯನ್ನು ಕಿಡಿಗೇಡಿಗಳು ಬದಲಿಸಿದ್ದಾರೆ. ಮುಖ ಬದಲಿಸುತ್ತಿದ್ದವರು ಇದೀಗ ಧ್ವನಿ ಬದಲಿಸಿ ಡೀಪ್ ಫೇಕ್ ಮಾಡಿ ಪ್ರಿಯಾಂಕ್ ಚೋಪ್ರಾ ವಿಡಿಯೋ ಹರಿ ಬಿಟ್ಟಿದ್ದಾರೆ.
ಪ್ರಿಯಾಂಕ್ ಚೋಪ್ರಾ ಅವರ ಧ್ವನಿಯನ್ನು ನಕಲಿ ಬ್ರಾಂಡ್ ಪ್ರಚಾರ ಮಾಡುವಂತೆ ಬಿಂಬಿಸಲಾಗಿದೆ. ಬ್ರ್ಯಾಂಡ್‌ನಿಂದ ನನ್ನ 2023ರ ವಾರ್ಷಿಕ ಆದಾಯ ದುಪ್ಪಟ್ಟಾಗಿದೆ. ಎಲ್ಲರು ಅದನ್ನು ಬಳಸುವಂತೆ ಅವರು ಕರೆ ನೀಡಿದ ಹಾಗೇ ಧ್ವನಿ ಬದಲಿಸಿ ರಿಕ್ರಿಯೇಟ್ ಮಾಡಲಾಗಿದೆ.

ಸರ್ಕಾರದ ಎಚ್ಚರಿಕೆ ಮಧ್ಯೆ ಹೆಚ್ಚಾದ ಡೀಪ್‌ಫೇಕ್
ಸಾಮಾಜಿಕ ಮಾಧ್ಯಮ ವೇದಿಕೆಗಳು ಐಟಿ ನಿಯಮಗಳನ್ನು ಪಾಲಿಸುವಂತೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ತಿಳಿಸಿದ್ದಾರೆ. ಇಂತಹ ವಿಡಿಯೋ ಅಪ್ಲೋಡಾದ 36 ಗಂಟೆಯೊಳಗೆ ರಿಮೂವ್ ಮಾಡಬೇಕೆಂಬ ನಿಯಮವಿದೆ. ಇಲ್ಲವೇ ಸಾಮಾಜಿಕ ವೇದಿಕೆ ವಿರುದ್ಧ ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಅವರು ತಿಳಿಸಿದ್ದರು.
ನಟಿ ರಶ್ಮಿಕಾ ಮಂದಣ್ಣಾ ಬಳಿಕ ನಟಿ ಕಾಜೋಲ್ ಅವರು ಬಟ್ಟೆ ಬದಲಿಸುವ ರೀತಿಯಲ್ಲಿ ಡೀಪ್‌ಫೇಕ್ ವಿಡಿಯೋ ಮಾಡಲಾಗಿತ್ತು. ಈ ನಕಲಿ ವಿಡಿಯೋ ಭಾರಿ ಸದ್ದು ಮಾಡಿತ್ತು. ಅದಾದ ನಂತರ ಅಲಿಯಾ ಭಟ್ ಅರ್ಧಂಬರ್ದ ಬಟ್ಟೆ ತೊಟ್ಟು ಬೆಡ್ ಮೇಲೆ ಪೋಸ್ಟ್ ಕೊಟ್ಟ್ ರೀತಿಯಲ್ಲಿ ವಿಡಿಯೋ ಹರಿಬಿಡಲಾಗಿತ್ತು.
ಇದು ಬೇರೋಬ್ಬರ ವಿಡಿಯೋ ಆಗಿದ್ದು, ಅದಕ್ಕೆ ಅಲಿಯಾ ಭಟ್ ಅವರ ಮುಖವನ್ನು ಎಐ ತಂತ್ರಜ್ಞಾನ ಸಹಾಯದಿಂದ ಎಡಿಟ್ ಮಾಡಲಾಗಿತ್ತು. ಇದೀಗ ಪ್ರಿಯಾಂಕಾ ಚೋಪ್ರಾ ಅವರ ಧ್ವನಿಯನ್ನು ಬದಲಿಸಲಾಗಿದೆ. ಇಂತಹ ತಂತ್ರಜ್ಞಾನದ ದುರ್ಬಳಕೆ ಕುರಿತು ರಾಜಕಾರಣಗಳು, ಕಲಾವಿದರೂ ಸಹ ಕಳವಳ ವ್ಯಕ್ತಪಡಿಸಿದ್ದಾರೆ. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಗಳು ಹೆಚ್ಚಾಗುತ್ತಿವೆ.












Click it and Unblock the Notifications