ಪಠಾಣ್ ಕೋಟ್ ನಲ್ಲಿ ಪ್ರಧಾನಿ ಮೋದಿ: ಟ್ವಿಟ್ಟರ್ ನಲ್ಲಿ ಲೇವಡಿ

Posted By:
Subscribe to Oneindia Kannada

ಪಠಾಣ್ ಕೋಟ್, ಜ 9: ಕ್ರಿಸ್ಮಸ್ ದಿನದಂದು ಅಚ್ಚರಿಯ ಲಾಹೋರ್ ಭೇಟಿಯ ನಂತರ ಪ್ರಧಾನಿ ನರೇಂದ್ರ ಮೋದಿ, ಉಗ್ರರ ದಾಳಿಗೆ ಒಳಗಾಗಿದ್ದ ಪಠಾಣ್ ಕೋಟ್ ವಾಯು ಸೇನಾನೆಲೆಗೆ ಶನಿವಾರ (ಜ 9) ಭೇಟಿ ನೀಡಿದ್ದಾರೆ.

ಉಗ್ರರ ದಾಳಿಗೆ ಒಳಗಾದ ಒಂದು ವಾರದ ನಂತರ ಪಠಾಣ್ ಕೋಟಿಗೆ ಶನಿವಾರ 11.30ಕ್ಕೆ ಆಗಮಿಸಿದ ಮೋದಿ, ವಾಯುಪಡೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. (ಮೈಗೆ ಹೊಕ್ಕಿದ್ದು ಆರು ಬುಲೆಟ್, ನಿಮಗಿದೋ ಸೆಲ್ಯೂಟ್)

ಪ್ರಧಾನಿ ಮೋದಿ ದಾಳಿಗೊಳಗಾದ ಪ್ರದೇಶ ಮತ್ತು ಸೈನಿಕರನ್ನು ಭೇಟಿಯಾದ ನಂತರ ಗಡಿಭಾಗದ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಶುಕ್ರವಾರ (ಜ8) ಪಠಾಣ್ ಕೋಟ್ ವಾಯುನೆಲೆ ಸುರಕ್ಷಿತವಾಗಿದೆಯೆಂದು ವಾಯುಪಡೆಯ ಅಧಿಕಾರಿಗಳು ಘೋಷಿಸಿದ್ದರು.

ಮೋದಿ ಲಾಹೋರ್ ನಲ್ಲಿ ಪಾಕ್ ಪ್ರಧಾನಿ ನವಾಬ್ ಶರೀಫ್ ಅವರನ್ನು ಭೇಟಿಯ ಒಂದೇ ವಾರದಲ್ಲಿ ಭಾರತೀಯ ವಾಯುನೆಲೆಯ ಮೇಲೆ ಉಗ್ರರ ದಾಳಿದಿತ್ತು.

72 ಗಂಟೆಯೊಳಗೆ ಕ್ರಮ ತೆಗೆದುಕೊಳ್ಳುವಂತೆ ಭಾರತ ತಾಕೀತು ಮಾಡಿದ್ದರಿಂದ, ಶನಿವಾರ ಪಾಕಿಸ್ತಾನ ಸರಕಾರ ಘಟನೆಯ ಬಗ್ಗೆ ಆಂತರಿಕ ವಿಚಾರಣೆಗೆ ಆದೇಶಿಸಿದೆ.

ಪ್ರಧಾನಿ ಮೋದಿ ಪಠಾಣ್ ಕೋಟ್ ಭೇಟಿಯ ಬಗ್ಗೆ ಕಾಂಗ್ರೆಸ್ ಮತ್ತು ಟ್ವಿಟ್ಟರ್ ನಲ್ಲಿ ಲೇವಡಿ ಮಾಡಲಾಗಿದೆ. #ModiCrocodileTears ಹ್ಯಾಷ್ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ. (ಪಾಕ್ ನಲ್ಲಿರುವ ಉಗ್ರ ನೆಲೆಗಳನ್ನು ಧ್ವಂಸ ಮಾಡಿ)

ಕೆಲವೊಂದು ಟ್ವೀಟ್ ಸಂದೇಶಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಕಾಂಗ್ರೆಸ್ ಅಣಕವಾಡಿದ್ದು

ಭಾರತಕ್ಕೆ ವಾಪಸ್ ಬರುವ ದಾರಿಯಲ್ಲಿ ವಿಮಾನವನ್ನು ಲಾಹೋರ್ ನತ್ತ ತಿರುಗಿಸುವ ಪ್ರಧಾನಿಗೆ, ಪಠಾಣ್ ಕೋಟ್ ತೆರಳಲು ಎಂಟು ದಿನಬೇಕಾಯಿತು.

ಮನಮೋಹನ್ ಸಿಂಗ್

ಹತ್ತು ವರ್ಷ ಮನಮೋಹನ್ ಸಿಂಗ್ ಅವರನ್ನು ಲೇವಡಿ ಮಾಡುತ್ತಿದ್ದರು. ಈಗ ಅವಮಾನ ಮಾಡಬಾರದೆಂದರೆ ಹೇಗೆ?

ಸ್ವಯಂಘೋಷಿತ ಹುಲಿ

ಸ್ವಯಂಘೋಷಿತ ಹುಲಿ

ಸ್ವಯಂಘೋಷಿತ ಹುಲಿ ಈಗ ಬೆಕ್ಕಿನಂತಾಗಿದ್ದಾರೆ. ದೇಶಕ್ಕೆ ಇದೊಂದು ಭಾರೀ ಹಿನ್ನಡೆ ಮತ್ತು ಅವಮಾನವೆಂದು ಮೌಲಿನ್ ಶಾ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಖಂಡಿಸಲಿಲ್ಲ ಯಾಕೆ

ಘಟನೆ ನಡೆದ 48 ಗಂಟೆಯವರೆಗೂ ಖಂಡನೆ ನಡೆಸದ ಪ್ರಧಾನಿ, ಪಾಕ್ ಕೈವಾಡವೆಂದು ಹೇಳಲು ಹಿಂಜರಿದ ಮೋದಿ, ಈಗ ಕಣ್ಣೀರು ಸುರಿಸುತ್ತಿರುವುದೇಕೆ?

ಮೊಸಳೆ ಕಣ್ಣೀರು

ಪ್ರಧಾನಿ ಮೋದಿ ಕಣ್ಣೀರು ಹಾಕಿದ ನಂತರ ಮೊಸಳೆಗೇ ಕಣ್ಣೀರು ಬಂತು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi today (Jan 9) visited Pathankot Air Base to take stock of the situation. Modi visits to Pathankot - twitter reaction.
Please Wait while comments are loading...