Get Updates
Get notified of breaking news, exclusive insights, and must-see stories!

ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಚರ್ಚೆ: ಪಾಕ್‌ ಇನ್ನೂ "ಐಸಿಯು"ನಲ್ಲಿದೆ ಮೋದಿ!

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ವಿಷಯಗಳನ್ನು ಮಾತನಾಡಿದ್ದಾರೆ. ಶ್ರೀನಗರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಅವರು ಮಾತನಾಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ಯುದ್ಧಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳು ಮೂಡಿದ್ದವು. ಅದರಲ್ಲಿ ಯುದ್ಧವನ್ನು ಯಾಕೆ ನಿಲ್ಲಿಸಲಾಗಿತ್ತು ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ನಿಜವಾಗಿಯೂ ಕದನ ವಿರಾಮದ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿದ್ದಾರೆಯೇ ಎನ್ನುವುದು ಪ್ರಮುಖವಾಗಿತ್ತು. ಇದೀಗ ವಿಚಾರವಾಗಿ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ವಿಶೇಷ ಚರ್ಚೆ ಸಹ ನಡೆದಿದೆ. ವಿರೋಧ ಪಕ್ಷದ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಿದ್ದಾರೆ. ಅಲ್ಲದೇ ಹಲವು ಗಂಭೀರ ವಿಚಾರಗಳನ್ನೂ ಮೋದಿ ಅವರು ಹಂಚಿಕೊಂಡಿದ್ದಾರೆ.

ಪಹಲ್ಗಾಮ್ ಸಂಘರ್ಷದ ನಂತರ ಭಾರತವು ಪಾಕಿಸ್ತಾನದ ಮೇಲೆ ಏನಾದರೂ ದಾಳಿ ಮಾಡಲಿದೆ ಎನ್ನುವ ಅಥವಾ ಸೇಡು ತೀರಿಸಿಕೊಳ್ಳಲಿದೆ ಎನ್ನುವ ಆತಂಕ ಪಾಕಿಸ್ತಾನಕ್ಕೆ ಎದುರಾಗಿತ್ತು. ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟಿತ್ತು. ನ್ಯೂಕ್ಲಿಯರ್ ಬಾಂಬ್ ಬಳಕೆ ಮಾಡುವ ಬೆದರಿಕೆಯೂ ಪಾಕಿಸ್ತಾನದಿಂದ ಎದುರಾಗಿತ್ತು. ಭಾರತವೂ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದ ಮೇಲೆ ದಾಳಿ ಮಾಡಿತು. ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯು ದಾಳಿ ಮಾಡಿತು. ಅಲ್ಲದೇ ಈ ಕಾರ್ಯಾಚರಣೆಯನ್ನು ಮಾಡಿದಾಗ ಪಾಕಿಸ್ತಾನಕ್ಕೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

Prime Minister Narendra Modi shared strategy of Operation Sindhur in Lok Sabha India vs Pakistan

ಮುಂದುವರಿದು ಪಹಲ್ಗಾಮ್ ದಾಳಿಗೆ ಪ್ರತೀಕಾರವನ್ನು ನಾವು (ಭಾರತೀಯ ಸೇನೆ) ಅತ್ಯಂತ ನಿರ್ದಿಷ್ಟವಾಗಿ ಹಾಗೂ ನಿಖರವಾಗಿ ಮಾಡಿದೆ. ನಮ್ಮ ಭಾರತೀಯ ಸೇನೆಯು ಪ್ರತೀಕಾರ ತೆಗೆದುಕೊಂಡಿದೆ. ಪಾಕಿಸ್ತಾನದ ಮೇಲೆ ಭಾರತ ಹಲವು ಬಾರಿ ದಾಳಿ ಮಾಡಿದೆ. ಆದರೆ ಇದೇ ಮೊದಲ ಬಾರಿಗೆ ಭಾರತ ತನ್ನ ರಣನೀತಿ ರೂಪಿಸಿತ್ತು. ಈ ಮೂಲಕ ಭಾರತೀಯ ಸೇನೆಯು ಈ ಹಿಂದೆ ಎಂದೂ ಹೋಗದ ಪ್ರದೇಶಕ್ಕೆ ತಲುಪಿದೆ. ಉಗ್ರರನ್ನು ಹುಡುಕಿ ಹುಡುಕಿ ಹತ್ಯೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು. ಇದನ್ನು ಸಂಸದರು ಮೇಜು ಕುಟ್ಟಿ ಸ್ವಾಗತಿಸಿದ್ದಾರೆ.

ಪಾಕಿಸ್ತಾನದಲ್ಲಿ ಈ ಹಿಂದೆ ಎಂದೂ ಮಾಡದ ಪ್ರದೇಶಗಳಲ್ಲಿ ದಾಳಿ ಮಾಡಲಾಗಿದೆ. ನಮ್ಮ ಸೇನೆಯು ಸಮರ್ಪಕವಾಗಿ ಪ್ರತೀಕಾರವನ್ನು ತೆಗೆದುಕೊಂಡಿದೆ. ಪಾಕಿಸ್ತಾನದ ನ್ಲ್ಯೂಕ್ಲಿಯರ್ ದಾಳಿಯ ಬೆದರಿಕೆಯನ್ನು ನಾವು ಸುಳ್ಳಾಗಿಸಿದ್ದೇವೆ. ಭಾರತವು ನ್ಯೂಕ್ಲಿಯರ್ ಬಾಂಬ್ ದಾಳಿಯ ಬೆದರಿಕೆ & ಬ್ಲ್ಯಾಕ್ ಮೇಲ್ ಸಹಿಸುವುದಿಲ್ಲ ಎನ್ನುವುದನ್ನು ತೋರಿಸಿದೆ. ನ್ಯೂಕ್ಲಿಯರ್ ಬೆದರಿಕೆ ಭಾರತದ ಮುಂದೆ ನಡೆಯುವುದಿಲ್ಲ ಎಂದು ನಾವು ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ಉತ್ತರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಅಲ್ಲದೇ ಭಾರತವು ತನ್ನ ಸೇನಾ ಸಾಮರ್ಥ್ಯವನ್ನು ಈ ಬಾರಿ ಪ್ರದರ್ಶಿಸಿದೆ. ಪಾಕಿಸ್ತಾನದ ಏರ್‌ಸ್ಪೇಸ್‌ ಹಾಗೂ ಸೇನಾ ಭಾಗದಲ್ಲಿ ದಾಳಿ ಮಾಡಲಾಗಿದೆ. ಇಂದಿಗೂ ಪಾಕಿಸ್ತಾನದ ವಾಯುನೆಲೆಯು ಐಸಿಯುನಲ್ಲಿದೆ. ಟೆಕ್ನಾಲಜಿ ಆಧಾರಿತ ಯುದ್ಧದ ಯುಗವಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಯಶಸ್ವಿಯಾಗಿದೆ. ಕಳೆದ 10 ವರ್ಷಗಳಲ್ಲಿ ನಾವು ಮಾಡಿಕೊಂಡಿದ್ದ ಸಿದ್ಧತೆಯಿಂದ ಈ ಯುದ್ಧವನ್ನು ನಾವು ಸಮರ್ಥವಾಗಿ ಎದುರಿಸಿದ್ದೇವೆ. ಒಂದೊಮ್ಮೆ ಸೇನೆಯ ಉನ್ನತೀಕರಣ ಆಗದೆ ಇದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಗತ್ತಿಗೆ ನಾವು ಭಾರತೀಯ ಸೇನೆಯ ಶಕ್ತಿ ಪ್ರದರ್ಶನ ಮಾಡಿದ್ದೇವೆ. ಭಾರತೀಯ ಡ್ರೋನ್‌ಗಳು ಹಾಗೂ ಕ್ಷಿಪಣಿಗಳು ಪಾಕಿಸ್ತಾನದ ಯುದ್ಧ ಶಸ್ತ್ರಾಸ್ತ್ರಗಳನ್ನು ಪುಡಿಪುಡಿ ಮಾಡಿವೆ. ಭಾರತದ ಮೂರು ಸೇನಾ ಪಡೆಗಳು ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಒಂದಾಗಿದ್ದವು. ಪಾಕಿಸ್ತಾನದ ಬೆನ್ನುಮೂಳೆಯನ್ನು ಮುರಿದಿವೆ. ವಾಯು, ಜಲ ಹಾಗೂ ಭೂಸೇನೆ ಜಂಟಿ ಕಾರ್ಯಾಚರಣೆ ಇದಾಗಿತ್ತು. ಈ ಹಿಂದೆಯೂ ಭಾರತದಲ್ಲಿ ಉಗ್ರರ ದಾಳಿಗಳು ನಡೆದಿದ್ದವು. ಈ ದಾಳಿಗಳನ್ನು ಮಾಡುತ್ತಿದ್ದ ಮಾಸ್ಟರ್‌ ಮೈಂಡ್ಗ ಉಗ್ರರು ನಿಶ್ಚಿಂತರಾಗುತ್ತಿದ್ದರು. ಅಲ್ಲದೇ ಮುಂದಿನ ದಾಳಿಗಳ ಬಗ್ಗೆಯೂ ಯೋಜನೆ ರೂಪಿಸುತ್ತಿದ್ದರು. ಏನೂ ಆಗುವುದಿಲ್ಲ ಎಂದು ಅವರಿಗೆ ಗೊತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ಮಾಸ್ಟರ್‌ ಮೈಂಡ್‌ಗಳಿಗೆ ನಿದ್ದೆ ಬರಲ್ಲ. ಈಗ ಅವರಿಗೆ ಗೊತ್ತಿದೆ. ಭಾರತ ಬರುತ್ತದೆ. ದಾಳಿ ಮಾಡುತ್ತದೆ ಎನ್ನುವುದು ಗೊತ್ತಾಗಿದೆ. ನ್ಯೂ ನಾರ್ಮಲ್‌ ಭಾರತ ಸೃಷ್ಟಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+