ಇಟಲಿ ಪ್ರಧಾನಿ ಜೊತೆ ಸೆಲ್ಫಿಗೆ ಪೋಸು ಕೊಟ್ಟ ಪ್ರಧಾನಿ ನರೇಂದ್ರ ಮೋದಿ

ದುಬೈ, ಡಿಸೆಂಬರ್‌ 2: ಸಿಒಪಿ 28 ಹವಾಮಾನ ಶೃಂಗಸಭೆಯ ಸಮಾರಂಭದಲ್ಲಿ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದಾರೆ. "COP28 ನಲ್ಲಿ ಉತ್ತಮ ಸ್ನೇಹಿತರು" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

#ಮೆಲೋಡಿ ಎಂಬ ಹ್ಯಾಸ್‌ಟ್ಯಾಗ್‌ನಲ್ಲಿ ಈ ಪೋಸ್ಟ್ ಮತ್ತೊಮ್ಮೆ ಉಭಯ ನಾಯಕರ ನಡುವಿನ ನಿಕಟತೆಯನ್ನು ಎತ್ತಿ ತೋರಿಸಿದೆ. ಸುಸ್ಥಿರ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಎರಡು ದೇಶಗಳ ಸಹಯೋಗವಿದೆ ಎಂದು ಸಾರಿದ್ದಾರೆ. ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಇದೇ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ಮೋದಿ ಅವರ ಜೊತೆ ಹಳೆಯ ಸ್ನೇಹಿತರಂತೆ ವರ್ತಿಸುತ್ತಿದ್ದಂತೆ ತೋರುತ್ತಿದ್ದ ವಿಡಿಯೋ ವೈರಲ್‌ ಸಾಮಾಜಿಕ ಜಾಲತಾಣದಲ್ಲಿ ಆಗಿತ್ತು.

Prime Minister Narendra Modi posed for a selfie with the Prime Minister of Italy

ಹವಾಮಾನ ಶೃಂಗಸಭೆಯಲ್ಲಿ ಮತ್ತೆ ಭೇಟಿ:

ಹವಾಮಾನ ಶೃಂಗಸಭೆಯಯಲ್ಲಿ ಪ್ರಧಾನಿ ಮೋದಿ ಅವರು ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮರೂನ್, ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ಟರ್ಕಿ ಅಧ್ಯಕ್ಷ ಆರ್‌ಟಿ ಎರ್ಡೋಗನ್, ಸ್ವೀಡಿಷ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಕೂಡ ಹವಾಮಾನದ ಕುರಿತಾದ ನಿರ್ಣಾಯಕ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

"#COP28 ಶೃಂಗಸಭೆಯ ಸಮಾರಂಭದಲ್ಲಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾದೆನು. ಸುಸ್ಥಿರ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಭಾರತ ಮತ್ತು ಇಟಲಿ ನಡುವಿನ ಸಹಯೋಗದ ಪ್ರಯತ್ನಗಳನ್ನು ಎದುರು ನೋಡುತ್ತಿದ್ದೇನೆ ಎಂದು ಪಿಎಂ ಮೋದಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಪ್ರಧಾನಿ ಮೋದಿ ಆಶಾವಾದ:

ಯುಎನ್ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ನಾಲ್ಕು ಸೆಷನ್‌ಗಳನ್ನು ಉದ್ದೇಶಿಸಿ ಮತ್ತು ಪರಿಸರ ಸುಸ್ಥಿರತೆಯ ಪ್ರಯತ್ನಗಳನ್ನು ಚರ್ಚಿಸಲಾಯಿತು. ಹವಾಮಾನ ಗುರಿಗಳನ್ನು ಸಾಧಿಸುವಲ್ಲಿ ಭಾರತದ ಪ್ರಗತಿಯ ಬಗ್ಗೆ ಪ್ರಧಾನಿ ಮೋದಿ ಆಶಾವಾದ ವ್ಯಕ್ತಪಡಿಸಿದರು. ಜಾಗತಿಕ ಇಂಗಾಲ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಲು ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. ಹೆಚ್ಚುವರಿಯಾಗಿ, ಕಾರ್ಬನ್ ಸಿಂಕ್‌ಗಳನ್ನು ರಚಿಸುವಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಪಿಎಂ ಮೋದಿ "ಗ್ರೀನ್ ಕ್ರೆಡಿಟ್" ಉಪಕ್ರಮವನ್ನು ಪರಿಚಯಿಸಿದರು.

ಯುಎಇಯ ಅಧ್ಯಕ್ಷತೆಯಲ್ಲಿ ನಡೆದ COP28 ಶೃಂಗಸಭೆಯು ಜಾಗತಿಕ ಹವಾಮಾನ ಕ್ರಿಯೆಯ ಮೇಲೆ ಕೇಂದ್ರೀಕರಿಸಿತು. ವಿವಿಧ ನಾಯಕರೊಂದಿಗೆ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಹಿತಾಸಕ್ತಿಗಳನ್ನು ಚರ್ಚಿಸುವಾಗ ಸ್ವಚ್ಛ ಮತ್ತು ಹಸಿರು ಬೆಳವಣಿಗೆಯನ್ನು ಉತ್ತೇಜಿಸಲಾಯಿತು. ಹವಾಮಾನ ಗುರಿಗಳನ್ನು ಸಾಧಿಸಲು ಭಾರತದ ಬದ್ಧತೆಯನ್ನು ಮತ್ತು ಸುಸ್ಥಿರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಐತಿಹಾಸಿಕ ತಪ್ಪುಗಳನ್ನು ಪರಿಹರಿಸುವ ತುರ್ತು ಪ್ರಧಾನಿ ಮೋದಿಯವರು ಒತ್ತಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+