ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಹಿಳಾ ವಿಕಾಸ'ದಿಂದ 'ಮಹಿಳಾ ನೇತೃತ್ವದ ವಿಕಾಸ'ದೆಡೆಗೆ: ಮೋದಿ ಆಶಯ

|
Google Oneindia Kannada News

ಬೆಂಗಳೂರು, ಮೇ 4: 'ಮಹಿಳಾ ವಿಕಾಸ' ಪರಿಕಲ್ಪನೆಯನ್ನು ಮೀರಿ ಇಂದು ನಾವು 'ಮಹಿಳಾ ನೇತೃತ್ವದ ವಿಕಾಸ'ದೆಡೆಗೆ ಸಾಗುತ್ತಿದ್ದೇವೆ. ನಮ್ಮ ಸಂಘಟನೆ, ಸರ್ಕಾರದ ಪ್ರತಿಯೊಂದು ನಿರ್ಧಾರಗಳಲ್ಲಿಯೂ ಮಹಿಳಾ ಪಾಲ್ಗೊಳ್ಳುವಿಕೆ ಬೇರೆಲ್ಲರಿಗಿಂತ ಅಧಿಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

'ನಮೋ' ಆಪ್‌ ಮೂಲಕ ಮಹಿಳಾ ಮೋರ್ಚಾದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಅವರು ಮಹಿಳೆಯರ ಅಭಿವೃದ್ಧಿಗೆ ನೀಡಲಾಗಿರುವ ಅನುದಾನ ಮತ್ತು ಯೋಜನೆಗಳ ಕುರಿತು ವಿವರಿಸಿದರು. ಅವರ ಮಾತಿನ ಕೆಲವು ಆಯ್ದ ಅಂಶಗಳು ಇಲ್ಲಿವೆ.

prime minister narendra modi interacts with karnataka bjp women workers

* ಇತ್ತೀಚೆಗೆ ಚೀನಾದಲ್ಲಿ ನಡೆದ ಶಾಂಘಾಯ್ ಒಕ್ಕೂಟದ ಸಭೆಯಲ್ಲಿ ಎಲ್ಲರಿಗಿಂತ ಹೆಚ್ಚು ಗಮನ ಸೆಳೆದದ್ದು ಭಾರತದ ಇಬ್ಬರು ಮಹಿಳೆಯರು. ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಬ್ಬರೂ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಜೆಡಿಎಸ್‌ಗೆ ಮತ ಹಾಕಿ ತಪ್ಪು ಮಾಡಬೇಡಿ: ಮೋದಿಜೆಡಿಎಸ್‌ಗೆ ಮತ ಹಾಕಿ ತಪ್ಪು ಮಾಡಬೇಡಿ: ಮೋದಿ

* ನಾವು ಬೂತ್‌ಗಳನ್ನು ಗೆಲ್ಲಬೇಕು. ಬೂತ್‌ಗಳನ್ನು ಗೆದ್ದರೆ, ವಿಧಾನಸಭಾ ಕ್ಷೇತ್ರವನ್ನು ಗೆಲ್ಲುತ್ತೇವೆ. ಮಹಿಳೆಯರು ಜನ ಸಂಪರ್ಕವನ್ನು ಸಾಧಿಸಬೇಕು.

* ನಾವು ಮುದ್ರಾ ಯೋಜನೆಯಡಿಯಲ್ಲಿ ಇಲ್ಲಿಯತನಕ 9 ಕೋಟಿ ಮಹಿಳೆಯರಿಗೆ ಸಹಾಯ ಒದಗಿಸಿದ್ದೇವೆ. ಇದರಿಂದ 9 ಕೋಟಿ ಕುಟುಂಬಗಳ ಕನಸುಗಳನ್ನು ನನಸಾಗಿಸಿದ ತೃಪ್ತಿ ನಮಗಿದೆ. ಜನಧನ ಯೋಜನೆಯಡಿಯಲ್ಲಿ 16.42 ಕೋಟಿ ಮಹಿಳೆಯರು ಫಲಾನುಭವಿಗಳಾಗಿದ್ದಾರೆ.

* ಸ್ಟ್ಯಾಂಡ್-ಅಪ್-ಇಂಡಿಯಾ ಯೋಜನೆಯಲ್ಲಿ 8,000 ಕೋಟಿ ರೂ ನೆರವು ನೀಡಲಾಗಿದೆ. ಜನಧನ ಯೋಜನೆ ಅಡಿಯಲ್ಲಿ ತೆರೆದ ಖಾತೆಗಳಿಂದ 16.42 ಕೋಟಿ ಮಹಿಳೆಯರು ಫಲಾನುಭವಿಗಳಾಗಿದ್ದಾರೆ. ಮಹಿಳೆಯರ ಸಶಕ್ತಿಕರಣಕ್ಕಾಗಿ 'ಸ್ಟ್ಯಾಂಡ್- ಅಪ್- ಇಂಡಿಯಾ' ಮೂಲಕ ರೂ 8000 ಕೋಟಿಗೂ ಅಧಿಕ ಸಾಲ ವಿತರಿಸಿದ್ದೇವೆ.

ಮೋದಿಯವರು ಜೆಡಿಎಸ್ಸನ್ನು ವಾಚಾಮಗೋಚರವಾಗಿ ತೆಗಳಿದ್ದೇಕೆ?ಮೋದಿಯವರು ಜೆಡಿಎಸ್ಸನ್ನು ವಾಚಾಮಗೋಚರವಾಗಿ ತೆಗಳಿದ್ದೇಕೆ?

* ಯಡಿಯೂರಪ್ಪನವರ ಕಾಲದಲ್ಲಿ ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆ ಕರ್ನಾಟಕದಲ್ಲಿ ದೊಡ್ಡ ಪರಿಣಾಮ ಬೀರಿದೆ. ಮಹಿಳಾಪರ ಯೋಜನೆಗಳು ಬಿಜೆಪಿಯ ಪ್ರಮುಖ ಅದ್ಯತೆಗಳಲ್ಲೊಂದಾಗಿವೆ.

* ಸುರಕ್ಷಿತ ಮಾತೃತ್ವ ಅಭಿಯಾನದಡಿ ಕರ್ನಾಟಕದಲ್ಲಿ 4 ಲಕ್ಷ ಉಚಿತ ಆರೋಗ್ಯ ತಪಾಸಣೆ ಮತ್ತು ಇಂದ್ರಧನುಷ್ ಯೋಜನೆಯಡಿ 10 ಲಕ್ಷ ತಾಯಿ ಮತ್ತು ಮಕ್ಕಳಿಗೆ ಉಚಿತ ಲಸಿಕೆ ನೀಡಲಾಗಿದೆ.

* ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಏರಿಸಲಾಗಿದೆ. 50ಕ್ಕೂ ಅಧಿಕ ಕೆಲಸಗಾರರಿರುವ ಸ್ಥಳಗಳಲ್ಲಿ ಕಡ್ಡಾಯ ಶಿಶುಗೃಹ ವ್ಯವಸ್ಥೆ ಮಾಡಲಾಗಿದೆ.

* ಮಹಿಳಾ ದೌರ್ಜನ್ಯವನ್ನು ತಡೆಯಬೇಕೆಂದರೆ ಮೊದಲು ನಮ್ಮ ಮಕ್ಕಳು ಬೆಳೆಯುವ ಪರಿಸರವನ್ನು ಸರಿಪಡಿಸಬೇಕು. ಕುಟುಂಬ, ಶಾಲೆ, ಬೆಳೆಯುವ ಪರಿಸರವನ್ನು ಸಂಸ್ಕಾರಯುತವಾಗಿ, ಸರಿಯಾಗಿ ಗಮನ ನೀಡಿದರೆ ದೌರ್ಜನ್ಯ ತಡೆಗಟ್ಟಬಹುದು.

* ಶೌಚಾಲಯ ಸೌಲಭ್ಯವಿಲ್ಲದೆ ಅರ್ಧದಲ್ಲಿಯೇ ಶಾಲೆಬಿಡುವ ಹೆಣ್ಣುಮಕ್ಕಳ ಪ್ರಮಾಣ ಕಡಿಮೆಯಾಗಿದೆ. ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಡಿ ದೇಶದ ಬಹುತೇಕ ಶಾಲೆಗಳಲ್ಲಿ ಶೌಚಾಲಯ ಸೌಲಭ್ಯ ಒದಗಿಸಲಾಗಿದೆ.

* 'ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ' ಹಾಗೂ 'ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ'ಯ ಮೂಲಕ 90 ಪೈಸೆ ಪ್ರತಿ ದಿನದ ಮತ್ತು ತಿಂಗಳಿಗೆ 1 ರೂ. ಪ್ರೀಮಿಯಂನಂತೆ ಜೀವನದ ಸಂಧ್ಯಾಕಾಲದಲ್ಲಿ ಮಹಿಳೆಯರಿಗೂ ಉಪಯೋಗವಾಗುವಂತಹ ಯೋಜನೆ ಜಾರಿಗೆ ತಂದಿದ್ದೇವೆ.

English summary
Prime minister Narendra Modi said that, india is moving towards Women development to Women-led development in his interaction with party's karnataka women workers through Namo App.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X