Get Updates
Get notified of breaking news, exclusive insights, and must-see stories!

2024ರ ಚುನಾವಣೆಗೆ ಸಿದ್ಧತಾ ಪ್ಲಾನ್‌ ಕೊಟ್ಟ ಪ್ರಧಾನಿ ಮೋದಿ, ಏನದು?

ನವದೆಹಲಿ, ಜನವರಿ 13: ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಚಳಿಗಾಲದ ಅಧಿವೇಶನದ ಬಳಿಕ ಪಕ್ಷದ ಸಂಸದರೊಂದಿಗಿನ ಮಹತ್ವದ ಸಭೆಗಳನ್ನು ನಡೆಸಿರುವ ಪ್ರಧಾನಿ ಮೋದಿ ಅವರು ಮುಂಬರುವ ದಿನಗಳಲ್ಲಿ ಬರಲಿರುವ 2024ರ ಚುನಾವಣೆಗಳಿಗೆ ಹೊಸ ಪ್ಲಾನ್‌ಗಳನ್ನು ನೀಡಿ ಸಿದ್ಧರಾಗುವಂತೆ ಕರೆ ನೀಡಿದ್ದಾರೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಪಿಎಂ ಮೋದಿ ಅವರು ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೂರು ಬಾರಿ ತಮ್ಮ ಸಂಸದರೊಂದಿಗೆ ಉಪಹಾರ ಸಭೆಗಳನ್ನು ನಡೆಸಿದರು. ಈ ಸಭೆಗಳಲ್ಲಿ ಪಕ್ಷದ ಸಂಸದರು ತಮ್ಮ ಸಾಮಾಜಿಕ ಮಾಧ್ಯಮದ ಮೇಲೆ ಗಮನ ಹೆಚ್ಚಿಸಲು ಮತ್ತು ಮತದಾರರನ್ನು ಸೆಳೆಯಲು ಕಟ್ಟುನಿಟ್ಟಾಗಿ ಗ್ರೌಂಡ್‌ ಲೆವಲ್‌ನಲ್ಲಿ ಕೆಲಸ ಮಾಡಲು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ವಿಶೇಷವಾಗಿ ರಾಜ್ಯಸಭೆಯ ಪಕ್ಷದ ಸಂಸದರು ಜನರ ಸಂಪರ್ಕವನ್ನು ಹೆಚ್ಚಿಸಲು ವಿಶೇಷ ಒತ್ತು ನೀಡುವಂತೆ ಕರೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಸದ್ಯಕ್ಕೆ ಒಟ್ಟು 92 ರಾಜ್ಯಸಭಾ ಸಂಸದರನ್ನು ಹೊಂದಿದೆ. ರಾಜ್ಯಸಭಾ ಸಂಸದರಿಗೆ ಯಾವುದೇ ಕ್ಷೇತ್ರಗಳಿಲ್ಲದಿದ್ದರೂ ಸಹ ಅವರು ಮುಂಬರುವ ಮತ್ತು ಪಕ್ಷವು ಅವರಿಗೆ ನಿಯೋಜಿಸುವ ಕೆಲಸ ಅಥವಾ ಜವಾಬ್ದಾರಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಅವರಿಗೆ ನಿಯೋಜಿಸಲಾದ ಸ್ಥಳಗಳಿಗೆ ನಿರಂತರವಾಗಿ ಭೇಟಿ ನೀಡಿ ಸಂಪರ್ಕದಲ್ಲಿದ್ದುಕೊಂಡು ಸ್ಥಳೀಯರ ಮನಸ್ಸಿನಲ್ಲಿ ಗುರುತಿಸಿಕೊಳ್ಳಬೇಕು ಎಂದು ಸಂಸದರಿಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರವು ಮಾಡಿದ ಕೆಲಸಗಳು ಮತ್ತು ಭವಿಷ್ಯದ ಪೀಳಿಗೆಯ ಮೇಲೆ ಅದರ ಯೋಜನೆಗಳನ್ನು ಪ್ರಚಾರ ಮಾಡಬೇಕು. ಸಂಸದರು ಸಂಸತ್ತಿನಲ್ಲಿ ಹಾಜರಿರಬೇಕು ಮತ್ತು ಚರ್ಚೆಗಳಿಗೆ ಸಿದ್ಧರಾಗಿ ಬರಬೇಕು. ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಮಾಹಿತಿ ವಿನಿಮಯವಾಗುತ್ತಿರಬೇಕು. ಎಲ್ಲಾ ಸಂಸದರು ಎಷ್ಟು ಪ್ರಮಾಣದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತೊಡಗಿದ್ದಾರೆ ಎಂಬುದರ ಕುರಿತು ವೈಯಕ್ತಿಕ ಮೌಲ್ಯಮಾಪನವನ್ನು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಂಸದರು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಶೇಷವಾಗಿ ಟ್ವಿಟರ್‌ನಲ್ಲಿ ಸಕ್ರೀಯರಾಗಿರಬೇಕು ಎಂದು ತಿಳಿಸಿದ್ದಾರೆ. ಸಂಸದರು ಸರ್ಕಾರದ ಯೋಜನೆಗಳ ಮೇಲೆ ನಮೋ ಅಪ್ಲಿಕೇಶನ್ ಮೂಲಕ ವಿಷಯವನ್ನು ಹಂಚಿಕೊಂಡಿರಬೇಕು. ವಿಶೇಷವಾಗಿ ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಸಮಸ್ಯೆಗಳು, ದೊಡ್ಡ ಸರ್ಕಾರದ ನಿರ್ಧಾರಗಳು, ಪಕ್ಷದ ಚುನಾವಣಾ ಯಶಸ್ಸು, ಮಾಧ್ಯಮ ಪ್ರಸಾರ ಮತ್ತು ಅಂಕಣಗಳನ್ನು ಹಂಚಿಕೊಂಡಿದ್ದಾರೆಯೇ ಎಂದು ಪರಿಶೀಲನೆ ಮಾಡುತ್ತಿರಬೇಕು ಎಂದು ತಿಳಿಸಲಾಗಿದೆ.

"ಪ್ರಧಾನ ಮಂತ್ರಿಗಳು ಸಂಗ್ರಾಹಲಯ, ಕಾಶಿ ಮತ್ತು ಮಹಾಕಾಲ್ ಕಾರಿಡಾರ್‌ಗಳು ಮತ್ತು ಏಕತೆಯ ಪ್ರತಿಮೆಗೆ ಎಷ್ಟು ಜನರು ಭೇಟಿ ನೀಡಿದ್ದಾರೆ ಎಂದು ತಮ್ಮ ಪಕ್ಷದ ಸಹೋದ್ಯೋಗಿಗಳನ್ನು ಕೇಳಿದರು. ದೊಡ್ಡ ಸಾರ್ವಜನಿಕ ಹಿತಾಸಕ್ತಿ ಮತ್ತು ಯಾವುದೇ ರಾಜಕೀಯ ಉದ್ದೇಶಗಳಿಲ್ಲದೆ ನಿರ್ಮಿಸಲಾಗಿರುವ ಇಲ್ಲಿಗೆ ಸಂಸದರು ಭೇಟಿ ನೀಡುವಂತೆ ಸೂಚಿಸಿದರು.

ಸ್ಥಳೀಯರ ಮನಸ್ಸಿನಲ್ಲಿ ಹೆಸರು ಗಳಿಸಿ

ಸ್ಥಳೀಯರ ಮನಸ್ಸಿನಲ್ಲಿ ಹೆಸರು ಗಳಿಸಿ

ರಾಜ್ಯಸಭಾ ಸಂಸದರು ಯಾವುದೇ ಕ್ಷೇತ್ರಗಳನ್ನು ಹೊಂದಿಲ್ಲದಿದ್ದರೂ ಸಹ ಅವರು ಮುಂದೆ ಬರಬೇಕು. ಪಕ್ಷವು ಅವರಿಗೆ ನಿಯೋಜಿಸುವ ಕೆಲಸ ಅಥವಾ ಜವಾಬ್ದಾರಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಅವರಿಗೆ ನಿಯೋಜಿಸಲಾದ ಸ್ಥಳವನ್ನು ನಿಯಮಿತವಾಗಿ ಅನುಸರಿಸುವುದು ಮತ್ತು ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡುವುದರಿಂದ ಸ್ಥಳೀಯರ ಮನಸ್ಸಿನಲ್ಲಿ ನೆಲೆಗೊಳ್ಳಲು ಅನುಕೂಲವಾಗುತ್ತದೆ ಎಂದು ಸಂಸದರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

600 ಕ್ಕೂ ಹೆಚ್ಚು ಕಾರ್ಯಕ್ರಮ

600 ಕ್ಕೂ ಹೆಚ್ಚು ಕಾರ್ಯಕ್ರಮ

ಭಾರತವು ಡಿಸೆಂಬರ್ 2022ರಲ್ಲಿ ಇಡೀ ವರ್ಷಕ್ಕೆ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಒಂದು ವರ್ಷದ ಅವಧಿಯಲ್ಲಿ 55ಕ್ಕೂ ಹೆಚ್ಚು ನಗರಗಳಲ್ಲಿ 600 ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿವೆ. ಈ ಅವಕಾಶ ರಾಷ್ಟ್ರದ ಹೆಮ್ಮೆ. ಈ ಸಂದೇಶವನ್ನು ದೂರದವರೆಗೆ ಕೊಂಡೊಯ್ಯುವ ಅಗತ್ಯವಿದ್ದು ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಒಂದು ದಿನವೂ ರಜೆ ತೆಗೆದುಕೊಂಡಿಲ್ಲ

ಒಂದು ದಿನವೂ ರಜೆ ತೆಗೆದುಕೊಂಡಿಲ್ಲ

2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಪರಿಪೂರ್ಣ ಆರೋಗ್ಯವನ್ನು ಕಾಪಾಡಿಕೊಂಡಿರುವ ಪ್ರಧಾನಿ ಮೋದಿ, ದಾಖಲೆಗಳ ಪ್ರಕಾರ ಒಂದೇ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದು ತಮ್ಮ ಪಕ್ಷದ ಸಹೋದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ. ರಾಜ್ಯಗಳ ಪರಿಷತ್ತಿನಿಂದ ಆಯ್ಕೆಯಾದ ರಾಜ್ಯಸಭಾ ಸಂಸದರ ಜವಾಬ್ದಾರಿಯು ಚುನಾಯಿತ ಪ್ರತಿನಿಧಿಗಳಿಗಿಂತ ಕಡಿಮೆಯಿಲ್ಲದಿದ್ದರೂ ಅದಕ್ಕೆ ಸಮಾನವಾಗಿರುತ್ತದೆ ಎಂದು ಮೋದಿ ಒತ್ತಿ ಹೇಳಿದರು.

ಗೋಯಲ್‌, ಸೀತಾರಾಮನ್‌ ರಾಜ್ಯಸಭಾ ಸಂಸದರು

ಗೋಯಲ್‌, ಸೀತಾರಾಮನ್‌ ರಾಜ್ಯಸಭಾ ಸಂಸದರು

ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವರು ಲೋಕಸಭೆ ಸಂಸದರಾಗಿದ್ದರೆ, ಕೇಂದ್ರ ಸರ್ಕಾರದ ಹಲವಾರು ಉನ್ನತ ಸಚಿವರು ರಾಜ್ಯಸಭಾ ಸಂಸದರಾಗಿದ್ದಾರೆ. ಎಚ್ ಪಿಯೂಷ್ ಗೋಯಲ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಸುಬ್ರಮಣ್ಯಂ ಜೈಶಂಕರ್, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ತೈಲ ಸಚಿವ ಹರ್ದೀಪ್ ಪುರಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮೇಲ್ಮನೆಯಿಂದ ಬಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+