ಫೆ. 14ರ ಮೈಲಾರ ಲಿಂಗೇಶ್ವರ ಜಾತ್ರೆಗೆ ಭರದ ಸಿದ್ಧತೆ
ಸಾವಿರಾರು ಭಕ್ತರು ಆಗಮಿಸಲಿರುವ ಜಾತ್ರೆಯಲ್ಲಿ ಶೌಚಾಲಯ, ಕುಡಿಯುವ ನೀರು ಮುಂತಾದ ವ್ಯವಸ್ಥೆಗಳು ಸೇರಿದಂತೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ
ಹೂವಿನ ಹಡಗಲಿ, ಫೆಬ್ರವರಿ 9: ಇದೇ ತಿಂಗಳ 13ರಂದು ನಡೆಯಲಿರುವ ಶ್ರೀ ಮೈಲಾರ ಲಿಂಗೇಶ್ವರ ಕಾರ್ಣೀಕೋತ್ಸವಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿವೆ.
ಜಾತ್ರೆಯಲ್ಲಿ ಕಾರ್ಣೀಕ ನಡೆಯಲಿರುವ ಡೆಂಕನ ಮರಡಿಯಲ್ಲಿ ಸೇರುವ ಸಾವಿರಾರು ಭಕ್ತರಿಗಾಗಿ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ದೇವಾಲಯದ ಆಡಳಿತ ಮಂಡಳಿಗೆ ಜಿಲ್ಲಾಧಿಕಾರಿ ಡಾ. ರಾಮ್ ಪ್ರಸಾದ್ ಮನೋಹರ್ ಸೂಚನೆ ನೀಡಿದ್ದಾರೆ. ಇದರ ಜತೆಗೆ ಸ್ವಚ್ಛತೆ ಕಾಪಾಡಲು ಡಿಸಿ ಕಟ್ಟಾಜ್ಞೆ ವಿಧಿಸಿದ್ದಾರೆ.

ಅಕ್ಕಪಕ್ಕದ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳಿಗಾಗಿ ರಾಣೆಬೆನ್ನೂರು, ಹೊನ್ನಾಳಿ ಭಾಗದ ರೈತರು ಆ ಪ್ರಾಂತ್ಯದಲ್ಲಿ ಹರಿಯುವ ನದಿ ನೀರನ್ನು ನಿಯಮಿತವಾಗಿ ಉಪಯೋಗಿಸುವಂತೆ ನೋಡಿಕೊಳ್ಳಬೇಕೆಂದೂ ಸೂಚಿಸಲಾಗಿದೆ.
ಅಲ್ಲದೆ, ಜಾತ್ರೆ ನಡೆಯುವ ದಿನಗಳಲ್ಲಿ (ಫೆಬ್ರವರಿ 11ರಿಂದ 14) ಸುತ್ತಲಿನ ಪ್ರಾಂತ್ಯಗಳಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆಯೂ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.












Click it and Unblock the Notifications