ತೆಲಂಗಾಣ: ಗರ್ಭಿಣಿ ಮೇಲೆ ಅಮಾನವೀಯ ಹಲ್ಲೆ

Subscribe to Oneindia Kannada

ವರ್ಧನ್ ಪೇಟ್, ಫೆಬ್ರವರಿ, 09: ಇತ್ತ ಬೆಂಗಳೂರಿನಲ್ಲಿ ತಾಂಜಾನಿಯಾ ಯುವತಿ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಆತಂಕ ಮತ್ತು ಗೊಂದಲ ಸೃಷ್ಟಿ ಮಾಡಿರುವುದು ಮರೆಯಾಗಿಲ್ಲ. ಆದರೆ ಅತ್ತ ತೆಲಂಗಾಣದಲ್ಲಿ ಗರ್ಭಿಣಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದು ಅಲ್ಲದೇ ಅರೆಬೆತ್ತಲೆ ಮೆರವಣಿಗೆ ಮಾಡಲಾಗಿದೆ.

ಮಾಧ್ಯಮವೊಂದು ವರದಿ ಮಾಡಿರುವಂತೆ, ಸಂತ್ರಸ್ತೆಯ ಗಂಡನ ಮೊದಲ ಹೆಂಡತಿಯ ಸಂಬಂಧಿಕರು ಆಕೆಯ ಹಲ್ಲೆ ಮಾಡಿದ್ದಾಳೆ. ಆಕೆಯ ದೇಹದ ಅಂಗಾಂಗಳ ಮೇಲೆ ಬೆಂಕಿಯ ಕೊಳ್ಳಿಗಳನ್ನು ಬಳಸಿ ಹಲ್ಲೆ ಮಾಡಿದ್ದಾರೆ. ನಂತರ ಆಕೆಯನ್ನು ಬೀದಿ ಬೀದಿಯಲ್ಲಿ ಎಳೆದಾಡಿದ್ದಾರೆ.[ರಾಷ್ಟ್ರೀಯ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದ ಬೆಂಗಳೂರಿಗರು]

telangana

ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಲ್ಲೆಗೊಳಗಾಗಿದ್ದ ಅನಿತಾ ಅವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ಆಧಾರದಲ್ಲಿ ಅನಿತಾ ಪತಿ ಬನೋತ್ ರವಿ ಮೊದಲ ಹೆಂಡತಿ ಸ್ವರೂಪಾ ಸೇರಿದಂತೆ ಪೊಲೀಸರು 9 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅನಿತಾ ಮತ್ತು ರವಿ ಕಳೆದ 2015ರಲ್ಲಿ ತಿರುಪತಿಯಲ್ಲಿ ರಹಸ್ಯವಾಗಿ ಮದುವೆಯಾಗಿದ್ದರು. ಅದಾಗಲೇ ರವಿಗೆ ಸ್ವರೂಪಳೊಂದಿಗೆ ಮದುವೆಯಾಗಿತ್ತು ಅಲ್ಲದೇ ಎರಡು ಮಕ್ಕಳು ಇದ್ದವು.[ಆಫ್ರಿಕಾ ವಿದ್ಯಾರ್ಥಿಗಳ ರಾತ್ರಿ ರಂಪಾಟವೇನು ಕಡಿಮೆ ಇಲ್ಲ!]

ತನ್ನ ಗಂಡನ ಎರಡನೇ ಮದುವೆ ಸುದ್ದಿ ತಿಳಿದ ನಂತರ ಸ್ವರೂಪ ಗಲಾಟೆ ಮಾಡಲು ಆರಂಭಿಸಿದ್ದಾಳೆ. ಬೇಸತ್ತ ರವಿ ಅನಿತಾಳೊಂದಿಗೆ ವಾಸವಾಗಿದ್ದಾನೆ. ಎರಡನೇ ಮದುವೆಯಾದ ನಂತರ ರವಿ ಮೊದಲನೇ ಹೆಂಡತಿಯನ್ನು ಸರಿಯಾಗಿ ನೋಡಿಕೊಂಡಿಲ್ಲ. ಅಲ್ಲದೇ ಮೊದಲನೇ ಹೆಂಡತಿ ಪಾಲಕರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ.

ಸ್ವರೂಪಳಿಗೆ ವಿಚ್ಚೇದನ ನೀಡುತ್ತೇನೆ ಎಂದು ಒಪ್ಪಿಕೊಂಡ ರವಿ 7.5 ಲಕ್ಷ ಪರಿಹಾರ ನೀಡುತ್ತೇನೆ ಎಂದು ಹೇಳಿದ್ದಾನೆ. ಇದರಂತೆ ಪಂಚಾಯಿತಿ ಸಭೆ ನಡೆಯುತ್ತಿದ್ದಾಗ ಗಲಾಟೆ ಆರಂಭವಾಗಿದೆ. ಸ್ವರೂಪಳ ಸಂಬಂಧಿಕರು ಅನಿತಾಳನ್ನು ಹಿಡಿದು ಎಳೆದಾಡಿದ್ದಾರೆ. ಸದ್ಯ ಪೊಲೀಸರು ಸ್ವರೂಪಾ ಮತ್ತು ರವಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In yet another shameful incident, a 20-year-old pregnant woman was stripped, assaulted and paraded naked in Wardhannapet on Monday. According to a report the attack was carried out by the relatives of the victim's husband's first wife. They allegedly injured her private parts with a burning piece of wood, stripped her and then paraded her naked on the streets.
Please Wait while comments are loading...