• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮದುವೆಯಾಗಬೇಕಾದರೆ ಈ ಪರೀಕ್ಷೆ ಕಡ್ಡಾಯ?

|

ಚೆನೈ, ಆ. 29: ಇನ್ನು ಮುಂದೆ ಮದುವೆಯಾಗಬೇಕಾದರೆ ಕಡ್ಡಾಯವಾಗಿ ನಪುಂಸಕತೆ ಮತ್ತು ಲೈಂಗಿಕ ರೋಗದ ಪರೀಕ್ಷೆಗೆ ಒಳಗಾಗಲೇ ಬೇಕಾಗುತ್ತದೆ. ಇದಕ್ಕೆ ನಿಮ್ಮ ಒಪ್ಪಿಗೆ ಇರಲಿ, ಇಲ್ಲದಿರಲಿ ಪರೀಕ್ಷೆ ಕಡ್ಡಾಯ.

ಹೌದು.. ಮದ್ರಾಸ್‌ ಹೈ ಕೋರ್ಟ್ ಇಂಥ ಮಹತ್ವದ ಸಲಹೆಯನ್ನು ಸರ್ಕಾರಕ್ಕೆ ನೀಡಿದ್ದು ಈ ಬಗ್ಗೆ ಕಾನೂನು ರೂಪಿಸಲು ತಿಳಿಸಿದೆ. ವಧು ಮತ್ತು ವರರಿಗೆ ಈ ಪರೀಕ್ಷೆ ಕಡ್ಡಾಯವಾಗಲಿದ್ದು ದೇಶಾದ್ಯಂತ ಜಾರಿ ಮಾಡಬೇಕು ಎಂದು ಆಗಸ್ಟ್‌ 27ರಂದು ನ್ಯಾಯಾಲಯ ಸಲಹೆ ನೀಡಿದೆ.

ನ್ಯಾಯಮೂರ್ತಿ ಎನ್‌. ಕಿರುಬಾಕರನ್‌ ಹೇಳುವಂತೆ ಇಂಥ ಒಂದು ಕಾನೂನು ಜಾರಿಯಾದರೆ ನಪುಂಸಕತೆ ಹೆಸರಿನಲ್ಲಿ ದಾಖಲಾಗುವ ವಿಚ್ಛೇದನ ಪ್ರಕರಣಗಳು ಗಣನೀಯವಾಗಿ ತಗ್ಗುತ್ತವೆ. ಈ ಬಗೆಯ ವೈದ್ಯಕೀಯ ಪರೀಕ್ಷೆ ಕಡ್ಡಾಯವಾದರೆ ನಪುಂಸಕರು ಮದುವೆಯಾಗುವುದನ್ನು ತಡೆಯಬಹುದು. ಅಲ್ಲದೇ ಮಾರಕ ಲೈಂಗಿಕ ರೋಗಗಳಿದ್ದಲ್ಲಿ ಪತ್ತೆಯಾಗುತ್ತದೆ. ಸರ್ಕಾರಗಳು ಮೊದಲು ಇಂಥ ವಿಷಯಗಳ ಮೇಲೆ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಹೆಂಡತಿಯೊಬ್ಬಳಿಂದ ಹಿಂಸೆಯಾಗುತ್ತಿದೆ ಎಂದು ನೊಂದ ಪತಿಯೊಬ್ಬರು ದಾಖಲಿಸಿದ್ದ ದೂರಿನ ವಿಚಾರಣೆ ನಡೆಸುವ ವೇಳೆ ನ್ಯಾಯಾಧೀಶರು ಮೇಲಿನಂತೆ ಸಲಹೆ ನೀಡಿದ್ದಾರೆ.

English summary
Madras High Court might create a history in India as it has suggested the government to make a law under which pre-marital test for impotency and Sexual-transmitted Disease (STD) would be mandatory in the country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X