ಗೋರಖನಾಥನಿಗೆ ಹರಕೆ: ಕಾಂಗ್ರೆಸ್ ಸೋಲಲಿ, ರಾಹುಲ್ ಗೆ ಪತ್ನಿ ಸಿಗಲಿ
ಗೋರಖ್ ಪುರ್(ಉತ್ತರಪ್ರದೇಶ), ಜುಲೈ 31: ಹಿಂದುತ್ವ ನಾಯಕಿ, 'ಫೈರ್ ಬ್ರ್ಯಾಂಡ್ ' ಸಾಧ್ವಿ ಪ್ರಾಚಿ ಅವರು ಗೋರಖನಾಥ ದೇಗುಲದಲ್ಲಿ ರಾಹುಲ್ ಗಾಂಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಆಷಾಢ ನಂತರದ ಸೋಮವಾರದಂದು ನಡೆಯುವ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದ ಸಾಧ್ವಿ ಅವರು ದೇಗುಲ ದರ್ಶನದ ನಂತರ ಮಾತನಾಡಿ, 'ನಾನು ಬಾಬಾ ಗೋರಖನಾಥರ ದರ್ಶನಕ್ಕೆ ಯಾವಾಗಲೂ ಬರುತ್ತಿರುತ್ತೇನೆ, ಈ ಬಾರಿ ವಿಶೇಷ ಕೋರಿಕೆಯನ್ನು ಸಲ್ಲಿಸಿದೇನೆ' ಎಂದಿದ್ದಾರೆ.

'ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ಸ್ಥಾಪಿಸಲು ಬಹಮತ ಸಿಗದಿರಲಿ, ಚುನಾವಣೆಯಲ್ಲಿ ಸೋಲಲಿ, ರಾಹುಲ್ ಅವರಿಗೆ ಜೀವನ ಸಂಗಾತಿ ಸಿಗಲಿ (Agar unhe sarkar ke liye bahumat na mile, to Rahul Gandhi ko bahu mil jaaye) ಎಂದು ಕೋರಿಕೆ ಸಲ್ಲಿಸಿ, ಪ್ರಾರ್ಥಿಸಿದ್ದೇನೆ ಎಂದು ಸಾಧ್ವಿ ಪ್ರಾಚಿ ಹೇಳಿದರು.
ಸಾಧ್ವಿ ಪ್ರಾಚಿ ಅವರ ಹೇಳಿಕೆಯನ್ನು ಖಂಡಿಸಿರುವ ಉತ್ತರಪ್ರದೇಶದ ಕಾಂಗ್ರೆಸ್ ವಕ್ತಾರ ಆಶೋಕ್ ಸಿಂಗ್ ಮಾತನಾಡಿ, ಕಾಂಗ್ರೆಸ್ ನ ಪ್ರಮುಖ ನಾಯಕರನ್ನು ಗುರಿಯನ್ನಾಗಿಸಿಕೊಂಡು ವೈಯಕ್ತಿಕ ವಾಗ್ದಾಳಿ ನಡೆಸುವುದು ಬಿಜೆಪಿಯವರ ಟ್ರೆಂಡ್ ಆಗಿದೆ. ಈ ರೀತಿಯ ತಂತ್ರಗಾರಿಕೆಯೇ ಅವರ ಬಂಡವಾಳ, ಸಾಧ್ವಿ ಅವರ ಹೇಳಿಕೆ ಕೆಟ್ಟ ಅಭಿಪ್ರಾಯದಿಂದ ಕೂಡಿದೆ' ಎಂದಿದ್ದಾರೆ.












Click it and Unblock the Notifications