ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗ್ ಡೇಟಾ ಎಕ್ಸ್ ಪರ್ಟ್ ಪ್ರವೀಣ್ ಪ್ರಾವೀಣ್ಯಕ್ಕೆ ಮಾರುಹೋದ ರಾಹುಲ್!

By Prasad
|
Google Oneindia Kannada News

ಬೆಂಗಳೂರು, ಫೆಬ್ರವರಿ 06 : ಲೋಕಸಭೆ ಚುನಾವಣೆ ಮತ್ತು 8 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, 'ಡೇಟಾ ಅನಾಲಿಟಿಕ್ಸ್' (ದತ್ತಾಂಶ ವಿಶ್ಲೇಷಕ) ವಿಭಾಗವನ್ನು ತೆರೆದಿದ್ದು, ಅದಕ್ಕೆ ರಾಜಕೀಯ ಅರ್ಥಶಾಸ್ತ್ರಜ್ಞ ಪ್ರವೀಣ್ ಚಕ್ರವರ್ತಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿದೆ.

ಈ ಸಂಗತಿಯನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಪ್ರವೀಣ್ ಚಕ್ರವರ್ತಿ ನೇತೃತ್ವದಲ್ಲಿ ಡೇಟಾ ಅನಾಲಿಟಿಕ್ಸ್ ವಿಭಾಗ ತೆರೆಯುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದಿದ್ದಾರೆ. ಇದಕ್ಕೆ ಪಿ ಚಿದಂಬರಂ ಕೂಡ ದನಿಗೂಡಿಸಿದ್ದು, ಪಕ್ಷದ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ವಿಶ್ಲೇಷಿಸಲು ಇದು ಅನುಕೂಲವಾಗುತ್ತದೆ ಎಂದಿದ್ದಾರೆ.

ಮುಂದಿನ ಪ್ರಧಾನಿ ರಾಹುಲ್? ಸಾಗಿದೆ ಭರದಿಂದ ಸಿದ್ಧತೆ!ಮುಂದಿನ ಪ್ರಧಾನಿ ರಾಹುಲ್? ಸಾಗಿದೆ ಭರದಿಂದ ಸಿದ್ಧತೆ!

ರಾಜಕೀಯ ಮತ್ತು ಆರ್ಥಿಕ ಸಂಶೋಧನಾ ಸಂಸ್ಥೆಯಾಗಿರುವ ಐಡಿಎಫ್‌ಸಿ ಇನ್‌ಸ್ಟಿಟ್ಯೂಟ್ ನಲ್ಲಿ ಸೀನಿಯರ್ ಫೆಲೋ ಆಗಿರುವ ಪ್ರವೀಣ್ ಚಕ್ರವರ್ತಿಯವರು, ಅಭಿವೃದ್ಧಿಗೆ ಪೂರಕವಾಗುವಂಥ ಆರ್ಥಿಕ ಸುಧಾರಣೆಯ ಕೊರತೆಯಿಂದಾಗಿ ಕಳೆದ 5 ವರ್ಷಗಳನ್ನು ನರೇಂದ್ರ ಮೋದಿ ಸರಕಾರ ಕಳೆದುಕೊಂಡಿದೆ ಎಂದು ಬಜೆಟ್ಟನ್ನು ವಿಶ್ಲೇಷಿಸಿದ್ದರು.

Praveen Chakravarty to head Data Analytics dept of Congress

ಪ್ರವೀಣ್ ಚಕ್ರವರ್ತಿಯವರು ಪಿಲಾನಿಯಲ್ಲಿರುವ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಜಲಿ ಮತ್ತು ಸೈನ್ಸ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಫಿಲಡೆಲ್ಫಿಯಾದ ವಾರ್ಟನ್ ಸ್ಕೂಲ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಮತ್ತು ಹೂಡಿಕೆದಾರರಾಗಿಯೂ ಸಾಕಷ್ಟು ಅನುಭವ ಪಡೆದಿರುವ ಪ್ರವೀಣ್ ಅವರ ಪ್ರಾವೀಣ್ಯವನ್ನು ಬಳಸಿಕೊಳ್ಳಲು ರಾಹುಲ್ ಮುಂದಾಗಿದ್ದಾರೆ.

ರಾಹುಲ್ ಗಾಂಧಿಯವರು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಂಪ್ಯೂಟರ್ ವಿಭಾಗವನ್ನು ಡೇಟಾ ಅನಾಲಿಟಿಕ್ಸ್ ಡಿಪಾರ್ಟ್ಮೆಂಟ್ ಎಂದು ಮರುನಾಮಕರಣ ಮಾಡಿದ್ದಾರೆ. ಈ ವಿಭಾಗ ದೇಶದಾದ್ಯಂತ ದತ್ತಾಂಶಗಳನ್ನು ಸಂಗ್ರಹಿಸಿ, ಅತ್ಯುತ್ತಮ ಅಭ್ಯರ್ಥಿಗಳನ್ನು ಹೆಕ್ಕಿ ಕೊಡಲಿದೆ. ಇದರಿಂದ ಜನರ ಜೊತೆಗೆ ಅಭ್ಯರ್ಥಿಗಳು ಉತ್ತಮ ಸಂಪರ್ಕ ಸಾಧಿಸಲು ಕೂಡ ಅನುಕೂಲವಾಗಲಿದೆ ಎಂದಿದ್ದಾರೆ ಚಿದಂಬರಂ.

ಕಾಂಗ್ರೆಸ್ ಪಕ್ಷದ ಡೇಟಾ ಅನಾಲಿಟಿಕ್ಸ್ ವಿಭಾಗ ಸೇರಿ ಪಕ್ಷಕ್ಕಾಗಿ ದುಡಿಯುತ್ತಿರುವುದು ಇದು ಮೊದಲೇನಲ್ಲ. ಹಿಂದೆ 2010ರಲ್ಲಿ ಬಿಎನ್‌ಪಿ ಪರಿಬಾಸ್ ಸಂಸ್ಥೆ ತೊರೆದು, ಅಂದಿನ ಯುಪಿಎ ಸರಕಾರ ಆರಂಭಿಸಿದ್ದ ಯುನೀಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಸಂಸ್ಥೆಯಲ್ಲಿ ದುಡಿದಿದ್ದರು. ಅವರು ಇಂಡಿಯಾಸ್ಪೆಂಡ್ ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಕೂಡ ಆಗಿದ್ದಾರೆ.

English summary
Political economist and senior fellow at the IDFC Institute Praveen Chakravarty has been appointed as the head of the Congress party’s Data Analytics Department. AICC president Rahul Gandhi announced this on Twitter. P Chidambaram has welcomed this move and said, Data analysis will identify the organization's strengths and weaknesses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X