ಅಬ್ದುಲ್ ಕಲಾಂ ನಿವಾಸದಲ್ಲೇ ವಾಸ್ತವ್ಯ ಹೂಡಲಿರುವ ಪ್ರಣಬ್ ಮುಖರ್ಜಿ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದಹೆಲಿ, ಜುಲೈ 18: ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿಯು ಇದೇ ತಿಂಗಳ 25ಕ್ಕೆ ಕೊನೆಗೊಳ್ಳಲಿದ್ದು, ನಿವೃತ್ತಿಯ ನಂತರ, ನವದೆಹಲಿಯ ರಾಜಾಜಿ ಮಾರ್ಗದಲ್ಲಿರುವ ನಂಬರ್ 10 ನಿವಾಸಕ್ಕೆ ಅವರು ಸ್ಥಳಾಂತರಗೊಳ್ಳಲಿದ್ದಾರೆ.

ಈ ಬಡಾವಣೆಯು ಅತ್ಯಂತ ಪ್ರತಿಷ್ಠಿತವಾಗಿದ್ದು, ಅಲ್ಲಿ ಮಾಜಿ ರಾಷ್ಟ್ರಪತಿಗಳಿಗೆ ನಿವಾಸಗಳನ್ನು ನೀಡಲಾಗುತ್ತದೆ. ಈ ಹಿಂದೆ ಇದೇ ನಿವಾಸವನ್ನು ಮತ್ತೊಬ್ಬ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ನೀಡಲಾಗಿತ್ತು. ಆನಂತರ ಅವರು ನಿಧನರಾದ ಹಿನ್ನೆಲೆಯಲ್ಲಿ ಅವರ ನಿವಾಸ ನಿವಾಸಕ್ಕೆ ಪ್ರಣಬ್ ಮುಖರ್ಜಿ ಸ್ಥಳಾಂತರಗೊಳ್ಳಲಿದ್ದಾರೆ.

ಹಾಗಾದರೆ, ಈ ನಿವಾಸಕ್ಕೆ ಶಿಫ್ಟ ಆದ ನಂತರ ರಾಷ್ಟ್ರಪತಿಯವರ ಸಂಬಳ ಎಷ್ಟಿರಲಿದೆ. ಅವರ ಸೌಕರ್ಯಗಳು ಹೇಗಿರುತ್ತವೆ. ಒಬ್ಬ ಮಾಜಿ ರಾಷ್ಟ್ರಪತಿಯ ನಿವೃತ್ತಿ ಜೀವನಕ್ಕೆ ಸರ್ಕಾರದಿಂದ ಸಿಗುವ ಸವಲತ್ತುಗಳೇನು ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತಿಂಗಳಿಗೆ 75 ಸಾವಿರ ರು. ಪಡೆಯಲಿರುವ ಪ್ರಣಬ್

ತಿಂಗಳಿಗೆ 75 ಸಾವಿರ ರು. ಪಡೆಯಲಿರುವ ಪ್ರಣಬ್

ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ, ತಿಂಗಳಿಗೆ ಒಂದೂವರೆ ಲಕ್ಷ ರು. ಸಂಬಳ ಪಡೆಯುತ್ತಿದ್ದರು. ನಿವೃತ್ತಿಯಾದ ನಂತರ, ಇದರ ಅರ್ಧದಷ್ಟು ಸಂಬಳ ಅವರಿಗೆ ಸಿಗಲಿದೆ. ಅಂದರೆ, ತಿಂಗಳಿಗೆ 75 ಸಾವಿರ ರು. ಹಣವನ್ನು ಅವರು ಪಿಂಚಣಿ ರೂಪದಲ್ಲಿ ಪಡೆಯಲಿದ್ದಾರೆ. ಇನ್ನು, ಇದೇ ನಿವಾಸದಲ್ಲಿ ಆರಂಭವಾಗಲಿರುವ ಪ್ರಣಬ್ ಅವರ ಸ್ವಂತ ಕಚೇರಿಯ ನಿರ್ವಹಣೆಗಾಗಿ ವರ್ಷಕ್ಕೆ 60 ಸಾವಿರ ರು. ಅನುದಾನ ಸಿಗಲಿದೆ.

ಸರ್ಕಾರದಿಂದ ಉಚಿತ ನಿವಾಸ

ಸರ್ಕಾರದಿಂದ ಉಚಿತ ನಿವಾಸ

1951ರ ರಾಷ್ಟ್ರಪತಿ ಸೌಲಭ್ಯಗಳ ಕಾಯ್ದೆ ಪ್ರಕಾರ, ಪ್ರಣಬ್ ಮುಖರ್ಜಿಯವರಿಗೆ ನೀಡಲಾಗಿರುವ ಈ ಹೊಸ ಮನೆಗೆ ಯಾವುದೇ ಬಾಡಿಗೆ ತೆರಬೇಕಾಗಿಲ್ಲ. ಸರ್ಕಾರದ ವತಿಯಿಂದ ಅದು ಉಚಿತವಾಗಿರುತ್ತದೆ.

ಇಂಟರ್ನೆಂಟ್ ಕನೆಕ್ಷನ್ ಸಹ ಉಂಟು

ಇಂಟರ್ನೆಂಟ್ ಕನೆಕ್ಷನ್ ಸಹ ಉಂಟು

ಇನ್ನು, ನಿಯಮಗಳ ಪ್ರಕಾರ, ಪ್ರಣಬ್ ಅವರಿಗೆ ಎರಡು ದೂರವಾಣಿ ಸಂಪರ್ಕ (ಲ್ಯಾಂಡ್ ಲೈನ್) ನೀಡಲಾಗುತ್ತದೆ. ಅದರಲ್ಲೊಂದು, ಇಂಟರ್ನೆಟ್ ಗೆ ಸೀಮಿತವಾಗಿರಲಿದೆ. ಇನ್ನು, ಪ್ರಣಬ್ ಅವರಿಗೊಂದು ರಾಷ್ಟೀಯ ಮಟ್ಟದ ರೋಮಿಂಗ್ ಸೌಲಭ್ಯವುಳ್ಳ ಸೆಲ್ ಫೋನ್ ಕನೆಕ್ಷನ್ ನೀಡಲಾತ್ತದೆ.

ಸೇವೆಗೆ ಐವರು ಅಧಿಕಾರಿಗಳ ನಿಯೋಜನೆ

ಸೇವೆಗೆ ಐವರು ಅಧಿಕಾರಿಗಳ ನಿಯೋಜನೆ

ಕಾಯ್ದೆಯಲ್ಲಿರುವ ನಿಯಮಗಳ ಪ್ರಕಾರ, ಪ್ರಣಬ್ ಜೀ ಅವರಿಗೆ ಒಂದು ಕಾರು ಉಚಿತವಾಗಿ ಸಿಗಲಿದೆ. ಸಹಾಯಕ ಅಧಿಕಾರಿಗಳ ಪುಟ್ಟ ತಂಡವನ್ನು ನೀಡಲಾಗುತ್ತದೆ. ಇದರಲ್ಲಿ ಒಬ್ಬ ಆಪ್ತ ಕಾರ್ಯದರ್ಶಿ, ಒಬ್ಬ ಹೆಚ್ಚುವರಿ ಆಪ್ತ ಕಾರ್ಯದರ್ಶಿ, ಒಬ್ಬ ಆಪ್ತ ಸಹಾಯಕ ಹಾಗೂ ಇಬ್ಬರು ಹೆಚ್ಚುವರಿ ಸಹಾಯಕರನ್ನು ನೇಮಿಸಲಾಗುತ್ತದೆ.

Modi Bans Lal Batti for VIPs From May 1st | Oneindia Kannada
ಎಲ್ಲಾ ಮಾದರಿ ಪ್ರಯಾಣ ಫ್ರೀ

ಎಲ್ಲಾ ಮಾದರಿ ಪ್ರಯಾಣ ಫ್ರೀ

ಇನ್ನು, ಪ್ರಣಬ್ ಜೀ ಅವರ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಚಿಕಿತ್ಸೆಗಳು, ತಪಾಸಣೆಗಳು ಉಚಿತವಾಗಿರಲಿವೆ. ದೇಶದ ಯಾವುದೇ ಪ್ರಾಂತ್ಯಕ್ಕೆ ಅವರು ಉಚಿತವಾಗಿ ಹೋಗಿಬರಬಹುದು. ಭಾರತದ ವ್ಯಾಪ್ತಿಯೊಳಗಿನ ಪ್ರದೇಶಗಳಿಗೆ ಹೋಗಿಬರಲು ಪ್ರಣಬ್ ಅವರು, ವಿಮಾನ, ರೈಲು, ಬಸ್ಸು ಅಥವಾ ಹಡಗಿನಲ್ಲಿ ಪ್ರಯಾಣಿಸಿದರೆ ಆ ಪ್ರಯಾಣ ಹೈ ಕ್ಲಾಸ್ ಪ್ರಯಾಣವಾಗಿರುತ್ತದಲ್ಲದೆ, ಜೀವನ ಪರ್ಯಂತ ಉಚಿತವಾಗಿರಲಿದೆ. ಇಂಥ ಪ್ರಯಾಣಗಳ ವೇಳೆ, ಅವರೊಂದಿಗೆ ಒಬ್ಬ ವ್ಯಕ್ತಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
10 Rajaji Marg will be Pranab Mukherjee's new address. The 11,776 sq feet house which was occupied by late former President of India, A P J Abdul Kalam is being readied to house its newest occupant. Pranab Mukherjee steps down as President on July 25.
Please Wait while comments are loading...