TTD Laddu Row: ಕಾಂಗ್ರೆಸ್ ಸರ್ಕಾರ ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಲಿ: ಪ್ರಹ್ಲಾದ್ ಜೋಶಿ
ಬೆಂಗಳೂರು, ಸೆಪ್ಟಂಬರ್ 20: ಲಕ್ಷಾಂತರ ಭಕ್ತರನ್ನು ಹೊಂದಿರುವ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ (ಲಡ್ಡು) ಮೀನು ಎಣ್ಣೆ ಮತ್ತು ಜಾನುವಾರು ಕೊಬ್ಬು ಬಳಕೆ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇದೊಂದು ಗಂಭೀರ ಪ್ರಕರಣವಾಗಿದೆ. ಹಿಂದೂ ಸಮಾಜವನ್ನು ಚಿಂತೆಗೀಡು ಮಾಡಿದೆ ಎಂದು ಕೇಂದ್ರ ಬಿಜೆಪಿ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ತಿರುಮಲ ತಿರುಪತಿ ಹಿಂದುಗಳ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿ ಸಿಗುವ ಲಡ್ಡು ಪ್ರಸಾದಗಳಿಗೆ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸುತ್ತಿರುವ ಆರೋಪ ಕೇಳಿ ಬಂದಿದೆ. ಇದನ್ನು ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರ ತುಂಬಾ ಗಂಭಿರವಾಗಿ ಪರಿಗಣಿಸಬೇಕು. ತನಿಖೆಯ ಮೂಲಕ ಸತ್ಯಾಸತ್ಯತೆ ಜನಕ್ಕೆ ತಿಳಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದರು.

ಹಿಂದೂ ಸಮಾಜವನ್ನು ಚಿಂತೆಗೀಡು ಮಾಡಿರುವ ಟಿಟಿಡಿ ಪ್ರಸಾದದ ಮೇಲಿನ ಈ ಆರೋಪಕ್ಕೂ ಮೊದಲು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಈ ರೀತಿಯ ಹಲವಾರು ಹಿಂದೂ ವಿರೋಧಿ ಹೆಜ್ಜೆಗಳಿಗೆ ಜೊತೆ ನಿಂತಿದ್ದರು ಎಂದು ಅವರು ದೂರಿದರು.
ರಾಜ್ಯದ ದೇವಸ್ಥಾನಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ
ಅಷ್ಟೇ ಅಲ್ಲ ತಿರುಮಲ ತಿರುಪತಿಯ ಟ್ರಸ್ಟ್ ನಲ್ಲಿ ಹಿಂದೂಯೇತರರನ್ನು ಟ್ರಸ್ಟ್ ಸದಸ್ಯರನ್ನಾಗಿ ನೇಮಕ ಮಾಡಿದ್ದರು. ಈ ರೀತಿಯ ವಿಚಾರಗಳು ಮತ್ತೆ ಮರುಕಳಿಸದಂತೆ ನೂತನ ಆಂಧ್ರ ಸರ್ಕಾರ ಎಚ್ಚರ ವಹಿಸಬೇಕು.
ಇನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರವು ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದಗಳನ್ನು ತ್ವರಿತವಾಗಿ ಪರೀಕ್ಷೆಗೆ ಒಳಪಡಿಸಬೇಕು. ಅದರ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಹಿಂದೂ ಧಾರ್ಮಿಕ ಟ್ರಸ್ಟ್ ಗಳಲ್ಲಿ ಹಿಂದೂಯೇತರರನ್ನು ನೇಮಕ ಮಾಡಬಾರದೆಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ಟಿಟಿಡಿ ಲಡ್ಡು ಮೇಲಿನ ಆರೋಪ ಸದ್ಯ ಪರೀಕ್ಷೆಯಲ್ಲಿ ಸಾಬೀತಾಗಿದೆ. ತಿರುಮಲ ದೇವಸ್ಥಾನ ಆಡಳಿತ ಮಂಡಳಿಗಳ ಮುಖ್ಯಸ್ಥರು, ಪ್ರಧಾನ ಅರ್ಚಕರು ಆರೋಪ ತಳ್ಳಿ ಹಾಕಿದ್ದಾರೆ. ಸಿಎಂ ಜಗನ್ ಮೋಹನ್ ರೆಡ್ಡಿಯವರು ಇದು ನಮ್ಮ ಮೇಲಿ ರಾಜಕೀಯ ಷಡ್ಯಂತ್ರ, ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಡಿಸಿಎಂ ನಟ ಪವನ್ ಕಲ್ಯಾಣ್ ಅವರು ಆರೋಪ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದುಗಳ ಪವಿತ್ರ ಕ್ಷೇತ್ರವಾದ ತಿರುಮಲ ತಿರುಪತಿಯಲ್ಲಿ ಪ್ರಸಾದಗಳಿಗೆ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸುತ್ತಿದ್ದರು ಎಂಬುದು ಹಿಂದೂ ಸಮಾಜವನ್ನು ಚಿಂತೆಗೀಡು ಮಾಡಿದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಈ ರೀತಿಯ ಹಲವಾರು ಹಿಂದೂ ವಿರೋಧಿ ಹೆಜ್ಜೆಗಳಿಗೆ ಜೊತೆ ನಿಂತಿದ್ದರು.… pic.twitter.com/tptfCw4jFx
— Pralhad Joshi (@JoshiPralhad) September 20, 2024
ಸನಾತನ ಧರ್ಮದ ಮೇಲಿನ ದಾಳಿ
ಕೆಲವು ಹಿರಿಯ ಅರ್ಚಕರು ಈ ಕುರಿತು ಪ್ರತಿಕ್ರಿಯಸಿದ್ದು, ಇದು ಸನಾತನ ಧರ್ಮ, ಹಿಂದೂ ಭಕ್ತಾಧಿಗಳ ಮೇಲೆ ನಡೆದ ದಾಳಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಬೇಕು ಎಂದಿದ್ದಾರೆ.
ಇನ್ನೂ ಕೆಲವರು ದೇವಸ್ಥಾನ, ಪ್ರಸಾದ ವಿಚಾರದಲ್ಲಿ ಈ ರೀತಿ ಆಗಬಾರದಿತ್ತು. ಆರೋಪ ಎಷ್ಟು ಸತ್ಯ ಎಂಬುದು ತಿಳಿದಿಲ್ಲ. ಲಕ್ಷಾಂತರ ಜನರು ತಿಮ್ಮಪ್ಪನ ಸನ್ನಿಧಿಗೆ ಬಂದು ಹೋಗುತ್ತಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಣಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.












Click it and Unblock the Notifications