Prakash Raj: ಚುನಾವಣೆ ಮುಗಿಯಿತಲ್ವಾ ಇನ್ನು ವಾಸ್ತವ ಎದುರಿಸುವುದಕ್ಕೆ ಸಿದ್ಧರಾಗಿ: ಪ್ರಕಾಶ್ ರಾಜ್ ಕಿಡಿ
Prakash Raj: ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯವಾಗುತ್ತಿದ್ದಂತೆಯೇ ವಿವಿಧ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಮೇ 1ರಂದು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯು ಭರ್ಜರಿ 993 ರೂ. ಹೆಚ್ಚಳವಾಗಿದೆ. ಈ ರೀತಿ ಇರುವಾಗಲೇ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕೆ ಮಾಡಿದ್ದಾರೆ. ಎಲೆಕ್ಷನ್ ಮುಕ್ತಾಯವಾಗಿದೆ ಈಗ ಅನುಭವಿಸಿ ಎಂಬರ್ಥದ ಟ್ವೀಟ್‌ವೊಂದನ್ನು ಪ್ರಕಾಶ್ ರಾಜ್ ಅವರು ಮಾಡಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಟ್ವೀಟ್ ವೈರಲ್ ಆಗುತ್ತಿದೆ.
ತಮಿಳುನಾಡು, ಪಶ್ವಿಮ ಬಂಗಾಳ, ಕೇರಳಂ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭೆಯ ಚುನಾವಣೆ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ವಿವಿಧ ವಸ್ತುಗಳ ಬೆಲೆ ಏರಿಕೆ ಪರ್ವ ಶುರುವಾಗಿದೆ. ಮೊದಲನೆಯದಾಗಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಇನ್ನಷ್ಟು ವಸ್ತುಗಳ ಬೆಲೆ ಏರಿಕೆ ಆಗಬಹುದಾಗಿದೆ.

ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿರುವುದು ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷ ಕಳೆದ ಒಂದೂವರೆ ತಿಂಗಳ ಹಿಂದೆಯೇ ಭಾರತದಲ್ಲೂ ಪೆಟ್ರೋಲ್ - ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ, ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಕಾರಣಕ್ಕೆ ಬೆಲೆ ಏರಿಕೆ ಆಗಿರಲಿಲ್ಲ ಎನ್ನುವ ಅಭಿಪ್ರಾಯ ಇದೀಗ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
Prakash Raj: ಪ್ರಕಾಶ್ ರಾಜ್ ಹೇಳಿದ್ದೇನು
ನಟ ಪ್ರಕಾಶ್ ರಾಜ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ Elections over .. now face the reality .. #justasking ಎಂದು ಹೇಳಿದ್ದಾರೆ. ಚುನಾವಣೆಗಳು ಮುಕ್ತಾಯವಾಗಿದೆ. ಈಗ ವಸ್ತಾವ ಪರಿಸ್ಥಿತಿಯನ್ನು ಎದುರಿಸಿ ಎಂದು ಹೇಳಿದ್ದಾರೆ.
ಇದಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚುನಾವಣೆಗಳು ಇದೀಗಷ್ಟೇ ಮುಗಿದಿವೆ, ಫಲಿತಾಂಶಗಳ ನಂತರದ ಹೆಚ್ಚಳವನ್ನು ನೀವು ಊಹಿಸಲು ಸಾಧ್ಯವಿಲ್ಲ ಎಂದು ಅರವಿಂದ್ ಎನ್ನುವವರು ಹೇಳಿದ್ದಾರೆ. ಪ್ರಕಾಶ್ ರಾಜ್ ಸೇರಿದಂತೆ ಯಾರಿಗೂ ಸಾಮಾನ್ಯ ಜ್ಞಾನವಿಲ್ಲ. ಇರಾನ್-ಯುಎಸ್ ಯುದ್ಧದಿಂದಾಗಿ ಇತರ ದೇಶಗಳು ಈಗಾಗಲೇ 5 ತಿಂಗಳ ಹಿಂದೆಯೇ ಇಂಧನ ಮತ್ತು LOG ಬೆಲೆಗಳನ್ನು ಹೆಚ್ಚಿಸಿವೆ. ಈಗ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ನಾವು ಸಹ ಹೆಚ್ಚಿಸಲು ಒತ್ತಾಯಿಸಲ್ಪಟ್ಟಿದ್ದೇವೆ. ವಾಸ್ತವಕ್ಕೆ ಬನ್ನಿ ಎಂದು ಕೆಲವು ಬಿಜೆಪಿ ಬೆಂಬಲಿಗರು ಹೇಳಿದ್ದಾರೆ.













Click it and Unblock the Notifications