ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾನ್ಮಾರ್‌ನಲ್ಲಿ ಭಾರೀ ಭೂಕಂಪ, ನಡುಗಿದ ಪೂರ್ವ ಭಾರತ

By Madhusoodhan
|
Google Oneindia Kannada News

ನವದೆಹಲಿ, ಆಗಸ್ಟ್, 24: ಮ್ಯಾನ್ಮಾರ್ ನಲ್ಲಿ ಬುಧವಾರ ಮಧ್ಯಾಹ್ನ ಭಾರೀ ಭೂಕಂಪ ಸಂಭವಿಸಿದ್ದು ಪರಿಣಾಮ ಬಿಹಾರ ಮತ್ತು ಪಶ್ಚಿಮ ಬಂಗಾಳ ನಡುಗಿದೆ. ಕೋಲ್ಕತಾ, ಗುಹವಾಟಿ ಮತ್ತು ಪಾಟ್ನಾದಲ್ಲಿ ಭೂಕಂಪದ ಅನುಭವವಾಗಿದೆ.

ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ. ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ ಹಾಗೂ ತ್ರಿಪುರಗಳಲ್ಲಿ ಭೂಮಿ ಕಂಪಿಸಿದ್ದು ಪಕ್ಕದ ಮಯನ್ಮಾರ್ ನಲ್ಲಿ ಭೂ ಕಂಪನದ ಕೇಂದ್ರ ಕಂಡುಬಂದಿದೆ.[ಭೀಕರ ಭೂಕಂಪಕ್ಕೆ ತುತ್ತಾಗಲಿದೆಯೇ ಭಾರತ-ಬಾಂಗ್ಲಾ?]

earth

ಭೂಕಂಪನದಿಂದ ಆತಂಕಕ್ಕೆ ಸಿಲುಕಿದ ಜನ ಮನೆಯಿಂದ ಹೊರಕ್ಕೆ ಓಡಿ ಬಂದರು. ಕೋಲ್ಕತಾ ಮತ್ತು ಪಶ್ಚಿಮ ಬಂಗಾಳದ ಹಲವೆಡೆ ರೈಲು ಸಂಚಾರ ಸ್ಥಗಿತ ಮಾಡಲಾಗಿದೆ.[ಭವಿಷ್ಯ: ಭೂಮಂಡಲಕ್ಕೆ ಎದುರಾಗಲಿದೆ 68 ದಿನಗಳ ಗಂಡಾಂತರ!]

ಮಂಗಳವಾರ ರಾತ್ರಿ ಇಟಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. 6.2 ತೀವ್ರತೆಯ ಕಂಪನ ರಿಕ್ಟರ್‌ ಮಾಪಕದಲ್ಲಿ ದಾಖಲಾಗಿತ್ತು. ಹಲವಾರು ಕಟ್ಟಡಗಳು ಧರೆಗುರುಳಿದ್ದು, ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ಮುಂದುವರಿಸಲಾಗಿತ್ತು.

English summary
An earthquake of 6.8 magnitude hit Myanmar on Wednesday (Aug 22) afternoon, the US Geological Survey said.Tremors were also felt in West Bengal, Bihar and Northeast in neighbouring India. In Kolkata, the capital of West Bengal, people were seen coming out onto the streets while the underground city railway service was disrupted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X