ಕಾಳಿ ಅವತಾರದಲ್ಲಿ ಮಾಯಾವತಿ, ಬಿಜೆಪಿ ಕಿಡಿ ಕಿಡಿ

Posted By:
Subscribe to Oneindia Kannada

ಉತ್ತರಪ್ರದೇಶ, ಏಪ್ರಿಲ್ 26: ಬಹುಜನ ಸಮಾಜ ಪಾರ್ಟಿ (ಬಿಎಸ್ ಪಿ) ಮುಖ್ಯಸ್ಥೆ ಮಾಯಾವತಿ ಮತ್ತೊಮ್ಮೆ ಬೇಡದ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ತನ್ನ ಪ್ರತಿಮೆಗಳ ಪಾರ್ಕ್ ನಿರ್ಮಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಮಾಯಾವತಿ ಈಗ ಕಾಳಿ ಅವತಾರದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ಇದ್ದಲ್ಲದೆ ಈ ಪೋಸ್ಟರ್ ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಬಲಿ ತೆಗೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಪ್ರಧಾನಿ ಮೋದಿ ಅವರ ಚಿತ್ರವೂ ಕಾಣಿಸಿಕೊಂಡಿದೆ.

Poster showing Mayawati as Goddess Kali riles BJP

ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಾಯಾವತಿ ಕಾಲು ಕೆಳಗಿರುವಂತೆ ಚಿತ್ರಿಸಲಾಗಿದೆ. ಜತೆಗೆ ಕ್ಷಮಾದಾನ ನೀಡುವಂತೆ ಮತ್ತು ಉದ್ಯೋಗದಲ್ಲಿ ದಲಿತರಿಗೆ ಮೀಸಲಾತಿ ಕಡಿತ ಮಾಡುವುದಿಲ್ಲ ಎಂದು ಬೇಡಿಕೊಳ್ಳುತ್ತಿರುವಂತೆ ಚಿತ್ರಿಸಲಾಗಿದೆ.

ಆದರೆ, ನಮ್ಮ ಪಕ್ಷಕ್ಕೂ ಈ ಪೋಸ್ಟರ್ ಗೂ ಸಂಬಂಧವಿಲ್ಲ ಎಂದು ಬಿಎಸ್ ಪಿ ಸ್ಪಷ್ಟನೆ ನೀಡಿದೆ. ಆದರೆ, ಬಿಎಸ್ ಪಿ ವಿರುದ್ಧ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಬಿಜೆಪಿ ವಕ್ತಾರ ವಿಜಯ್ ಬಾಹದ್ದೂರ್ ಪಾಠಕ್ ಹೇಳಿದ್ದಾರೆ.

ಕೆಲದಿನಗಳ ಹಿಂದೆ ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಶ್ರೀಕೃಷ್ಣನ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ವಿಪಕ್ಷ ನಾಯಕರನ್ನು ಕೌರವರಂತೆ ಬಿಂಬಿಸಲಾಗಿತ್ತು. ಹತ್ರಾಸ್ ಪಟ್ಟಣದ ಪೊಲೀಸರು ಇಬ್ಬರ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A poster of Bahujan Samaj Party (BSP) supremo Mayawati depicting her as Goddess Kali slaying Union Minister Smriti Irani with Prime Minister Narendra Modi shown in a miniature form has surfaced here, triggering a blame game between political rivals in Uttar Pradesh.
Please Wait while comments are loading...