ಅಪನಗದೀಕರಣದ ಸಕಾರಾತ್ಮಕ ಸಂಗತಿಗಳು

Posted By:
Subscribe to Oneindia Kannada

ಅಪನಗದೀಕರಣಕ್ಕೆ ನವೆಂಬರ್ ಎಂಟಕ್ಕೆ ಒಂದು ವರ್ಷ ತುಂಬಲಿದೆ. ಹೌದು, ಐನೂರು- ಸಾವಿರ ರುಪಾಯಿ ನೋಟು ನಿಷೇಧದಿಂದ ಆದ ಘನಂದಾರಿ ಪ್ರಯೋಜನಗಳೇನು ಎಂದು ಪ್ರಶ್ನೆ ಮಾಡುವವರಿಗಾಗಿ ಆರ್ಥಿಕ ಸಚಿವಾಲಯವು ಬಹಳ ಆಸಕ್ತಿಕರ ಅನ್ನಿಸುವಂಥ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ಅಪನಗದೀಕರಣದ ಆಘಾತಕ್ಕೆ ಮೊದಲ ವಾರ್ಷಿಕೋತ್ಸವ: ಗೆಲುವೋ, ಸೋಲೋ?!

ಅಪನಗದೀಕರಣದಿಂದ ಆದ ಪ್ರಯೋಜನಗಳಿವು ಎಂದು ಪಟ್ಟಿ ಮಾಡುವುದು ಸಚಿವಾಲಯದ ಉದ್ದೇಶ ಇದ್ದಂತಿದೆ. ಆ ಪಟ್ಟಿಯಲ್ಲಿರುವ ಅಂಕಿ-ಅಂಶಗಳನ್ನು ನಿಮ್ಮೆದುರು ಇಡುತ್ತಿದ್ದೇವೆ.

Positive effects of demoetisation

* ಹೆಚ್ಚಿನ ಮುಖ ಬೆಲೆಯ ನೋಟುಗಳ ನಿಷೇಧದಿಂದ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಅನುಕೂಲವಾಗುತ್ತದೆ ಮತ್ತು ಭಯೋತ್ಪಾದನಾ ಕೃತ್ಯಗಳಿಗೆ ಹಣ ದೊರೆಯದಂತಾಗಿದೆ

* ಈಗ ಚಲಾವಣೆಯಲ್ಲಿರುವ ಹೆಚ್ಚಿನ ಮುಖ ಬೆಲೆಯ ನೋಟುಗಳಿಗಿಂತ ಈ ಹಿಂದೆ ಶೇ ಐವತ್ತರಷ್ಟು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿನ ಮುಖ ಬೆಲೆ ನೋಟುಗಳು ಚಲಾವಣೆಯಲ್ಲಿದ್ದವು. ಶೇ ಐವತ್ತರಷ್ಟು ಅಂದರೆ ಆರು ಲಕ್ಷ ಕೋಟಿ ರುಪಾಯಿಯಷ್ಟು ನೋಟು ಚಲಾವಣೆ ಕಡಿಮೆ ಆಗಿದೆ.

* 2017ರ ಸೆಪ್ಟೆಂಬರ್ ಅಂತ್ಯಕ್ಕೆ ಚಲಾವಣೆಯಲ್ಲಿದ್ದ ಹೆಚ್ಚಿನ ಮುಖ ಬೆಲೆಯ ನೋಟುಗಳ ಅಂದಾಜು ಮೌಲ್ಯ 12 ಲಕ್ಷ ಕೋಟಿ ರುಪಾಯಿ. ನೋಟು ನಿಷೇಧಕ್ಕೆ ಮುನ್ನ ಚಲಾವಣೆಯಲ್ಲಿದ್ದ ಹೆಚ್ಚಿನ ಮುಖ ಬೆಲೆಯ ನೋಟುಗಳ ಮೌಲ್ಯ 18 ಲಕ್ಷ ಕೋಟಿ ರುಪಾಯಿ.

* ದೇಶದ ಜನಸಂಖ್ಯೆಯ ಶೇ 0.00011 ಜನರು ಒಟ್ಟಾರೆ ಹಣದ ಶೇ 33ರಷ್ಟನ್ನು ಬ್ಯಾಂಕ್ ಗಳಿಗೆ ಜಮೆ ಮಾಡಿದ್ದಾರೆ.

* ರಿಯಲ್ ಎಸ್ಟೇಟ್ ದರಗಳಲ್ಲಿ ಗಮನಾರ್ಹ ಇಳಿಕೆಯಾಗಿದೆ.

* ಸಾಲದ ಮೇಲಿನ ಬಡ್ಡಿ ದರಗಳು ಕಡಿಮೆಯಾಗಿವೆ.

* ಒಂದು ವರ್ಷದಲ್ಲಿ ಹದಿಮೂರು ಲಕ್ಷಕ್ಕೂ ಹೆಚ್ಚು ಪಿಒಎಸ್ (ಪಾಯಿಂಟ್ ಆಫ್ ಸೇಲ್ಸ್) ಮಷೀನ್ ಸೇರ್ಪಡೆಯಾಗಿದೆ. ಸದ್ಯಕ್ಕೆ ಹದಿನೈದು ಲಕ್ಷ ಪಿಒಎಸ್ ಮಷೀನ್ ಬಳಕೆಯಲ್ಲಿವೆ.

* ನಷ್ಟದಲ್ಲಿದ್ದ ಕಂಪನಿಯೊಂದು ಅಪನಗದೀಕರಣ ಘೋಷಣೆ ಆದ ನಂತರ 2,484 ಕೋಟಿ ರುಪಾಯಿಯಷ್ಟು ಮೊತ್ತವನ್ನು ಬ್ಯಾಂಕ್ ಗಳಲ್ಲಿ ಜಮೆ ಹಾಗೂ ವಿಥ್ ಡ್ರಾ ಮಾಡಿದೆ.

* ಅಪನಗದೀಕರಣ ಘೋಷಣೆ ಆದ ನಂತರ 35 ಸಾವಿರ ಶೆಲ್ ಕಂಪನಿಗಳಿಗೆ ಸೇರಿದ 58 ಸಾವಿರ ಬ್ಯಾಂಕ್ ಖಾತೆಗಳಿಗೆ 17 ಸಾವಿರ ಕೋಟಿ ರುಪಾಯಿಯಷ್ಟು ಹಣ ಜಮೆ ಹಾಗೂ ವಿಥ್ ಡ್ರಾ ಮಾಡಲಾಗಿದೆ.

* 1626 ಕೋಟಿ ರುಪಾಯಿಯಷ್ಟು ಬೇನಾಮಿ ಆಸ್ತಿ ಜಪ್ತಿ ಮತ್ತು/ಅಥವಾ ವಶ ಪಡಿಸಿಕೊಳ್ಳಲಾಗಿದೆ.

* ಲೆಕ್ಕಕ್ಕೆ ಕೊಡದ 29,213 ಕೋಟಿ ರುಪಾಯಿ ಪತ್ತೆ ಹಚ್ಚಲಾಗಿದೆ ಮತ್ತು ವಾರಸುದಾರರೇ ಒಪ್ಪಿಕೊಂಡಿದ್ದಾರೆ.

* ಅಪನಗದೀಕರಣ ಘೋಷಣೆ ಆದ ನಂತರ 16 ಸಾವಿರ ಕೋಟಿ ರುಪಾಯಿ ಬ್ಯಾಂಕ್ ಗಳಿಗೆ ಹಿಂತಿರುಗಿಲ್ಲ.

* 4.7 ಲಕ್ಷಕ್ಕೂ ಹೆಚ್ಚು ಅನುಮಾನಾಸ್ಪದ ವ್ಯವಹಾರಗಳು ಬ್ಯಾಂಕ್ ಗಳು ಮತ್ತು ವಿದೇಶಿ ಸಂಸ್ಥೆಗಳಿಂದ ವರದಿಯಾಗಿವೆ.

* 23.22 ಲಕ್ಷ ಬ್ಯಾಂಕ್ ಖಾತೆಗಳ 3.68 ಲಕ್ಷ ಕೋಟಿ ರುಪಾಯಿ ಮೊತ್ತದ ವ್ಯವಹಾರಗಳು ಅನುಮಾನಾಸ್ಪದವಾಗಿದೆ.

* ತೆರಿಗೆ ಪಾವತಿಗೂ ಬ್ಯಾಂಕ್ ನಲ್ಲಿ ಜಮೆ ಮಾಡಿದ ಮೊತ್ತಕ್ಕೂ ತಾಳೆಯಾಗದ 17.73 ಲಕ್ಷ ಅನುಮಾನಾಸ್ಪದ ಖಾತೆಗಳು ಪತ್ತೆಯಾಗಿವೆ.

* ಕಂಪನಿಯ ಬ್ಯಾಲೆನ್ಸ್ 63.60 ಲಕ್ಷ ರುಪಾಯಿ ಮಾತ್ರ ಇದ್ದದ್ದು, ಅಪನಗದೀಕರಣ ಘೋಷಣೆ ಆದ ನಂತರ 18.23 ಕೋಟಿ ಬ್ಯಾಂಕ್ ಗೆ ಜಮೆ ಮಾಡಿ, 18.68 ಕೋಟಿ ರುಪಾಯಿ ವಿಥ್ ಡ್ರಾ ಮಾಡಿದೆ.

* ಹಲವು ಶೆಲ್ ಕಂಪನಿಗಳು ತಲಾ ನೂರು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಕಂಡು ಬಂದಿದೆ. ಅದರಲ್ಲಿ ಒಂದು ಶೆಲ್ ಕಂಪನಿಯಂತೂ 2,134 ಬ್ಯಾಂಕ್ ಖಾತೆಗಳನ್ನು ಹೊಂದಿತ್ತು.

* 2.24 ಲಕ್ಷ ಶೆಲ್ ಕಂಪನಿಗಳು ಸರಕಾರದ ಗಮನಕ್ಕೆ ಬಂದಿವೆ. ಅವುಗಳ ವ್ಯವಹಾರಕ್ಕೆ ತಡೆಯೊಡ್ಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is the list of positive effects of demonetisation. This points tweeted by finance ministry.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ