ರಾಜಕೀಯ ಪಕ್ಷಗಳ ಶೇ. 69ರಷ್ಟು ಹಣಕ್ಕೆ ಮೂಲವೇ ಇಲ್ಲ

Subscribe to Oneindia Kannada

ನವದೆಹಲಿ, ಜನವರಿ 25: ಕಳೆದ 11 ವರ್ಷಗಳಲ್ಲಿ ದೇಶದ ರಾಜಕೀಯ ಪಕ್ಷಗಳು ಪಡೆದ ಶೇಕಡಾ 69 ಹಣಕ್ಕೆ ಮೂಲಗಳೇ ಇಲ್ಲ . ಹೀಗೊಂದು ಆಘಾತಕಾರಿ ಮಾಹಿತಿಯನ್ನು ಸರಕಾರೇತರ ಸಂಸ್ಥೆಯೊಂದು ತನ್ನ ವರದಿಯಲ್ಲಿ ಹೊರಹಾಕಿದೆ.

ಚುನಾವಣಾ ಸುಧಾರಣೆಗೆ ಶ್ರಮಿಸುತ್ತಿರುವ ಎಡಿಆರ್ (Association for Democratic Reforms) ಎಂಬ ಸರಕಾರೇತರ ಸಂಸ್ಥೆಯೊಂದು ರಾಜಕೀಯ ಪಕ್ಷಗಳ ಹಣದ ಮೂಲದ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿದ್ದು ಈ ಅಂಶಗಳು ಬಹಿರಂಗವಾಗಿವೆ.[ಅಜ್ಞಾತ ಮೂಲಗಳಿಂದ ರಾಜಕೀಯ ಪಕ್ಷಗಳಿಗೆ 11 ಸಾವಿರ ಕೋಟಿ ಹಣ!]

48 ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು 2004-05 ರಿಂದ 2014-15ರ ವೇಳೆಗೆ ಬರೋಬ್ಬರಿ 11,367 ಕೋಟಿ ರೂಪಾಯಿ ಹಣ ಸಂಗ್ರಹಿಸಿವೆ. ಆದರೆ ಇದರಲ್ಲಿ 7,833 ಕೋಟಿ ರೂಪಾಯಿಗಳಿಗೆ ಮೂಲ ಯಾವುದೆಂದೇ ಪಕ್ಷಗಳು ಹೇಳಿಲ್ಲ.

 Political parties got 69% income from unknown sources, says report

ಈ ಕುರಿತು ಎಡಿಆರ್ ಸಂಸ್ಥಾಪಕಿ ತ್ರಿಲೋಚನಾ ಶಾಸ್ತ್ರಿ ಹೇಳಿಕೆ ನೀಡಿದ್ದು, "ರಾಜಕೀಯ ಪಕ್ಷಗಳ ರೂ. 1,835 ಕೋಟಿ (ಶೇ. 16) ಅಧಿಕೃತ ದಾನಿಗಳಿಂದ ಬಂದಿದ್ದರೆ, ರೂ. 1,698 (ಶೇ. 15) ಆಸ್ತಿ ಮಾರಾಟ, ಸದಸ್ಯ ಶುಲ್ಕ, ಬ್ಯಾಂಕ್ ಬಡ್ಡಿ, ಪುಸ್ತಕಗಳ ಮಾರಾಟ ಮುಂತಾದ ಮೂಲಗಳಿಂದ ಬಂದಿವೆ," ಎಂದಿದ್ದಾರೆ. ಆದರೆ ಉಳಿದ ಹಣಕ್ಕೆ ಮೂಲಗಳೇ ಇಲ್ಲ ಎಂಬುದನ್ನು ಅವರು ಆರೋಪಿಸುತ್ತಾರೆ.[ರಾಜಕೀಯ ಪಕ್ಷಗಳಿಗೆ ಆದಾಯ ತೆರಿಗೆ ವಿನಾಯಿತಿ ಏಕೆ? ಹೇಗೆ?]

ಕಾಂಗ್ರೆಸ್ ಪಕ್ಷಕ್ಕೆ ಶೇಕಡಾ 83 (ರೂ. 3,323 ಕೋಟಿ) ದೇಣಿಗೆ ಅನಧಿಕೃತ ಮೂಲಗಳಿಂದ ಬಂದಿದ್ದರೆ, ಬಿಜೆಪಿಗೆ ಶೇಕಡಾ 65 (ರೂ. 2,126 ಕೋಟಿ)ರಷ್ಟು ಹಣ ಅನಧಿಕೃತ ಮೂಲಗಳಿಂದ ಬಂದಿದೆ ಎಂದು ವರದಿ ಹೇಳುತ್ತದೆ. ಇನ್ನು ಪ್ರಾದೇಶಿಕ ಪಕ್ಷಗಳ ವಿಚಾರಕ್ಕೆ ಬಂದಾಗ ಸಮಾಜವಾದಿ ಪಕ್ಷ ಶೇಕಡಾ 94 (766 ಕೋಟಿ ರೂ.) ಮತ್ತು ಶಿರೋಮಣಿ ಅಕಾಲಿದಳದ ಶೇಕಡಾ 86 (ರೂ. 88ಕೋಟಿ)ರಷ್ಟು ಅನಧಿಕೃತ ಮೂಲಗಳಿಂದ ಹಣ ಪಡೆದಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

2004-2015ರ ಮಧ್ಯದಲ್ಲಿ ಕಾಂಗ್ರೆಸ್ ಅತೀ ಹೆಚ್ಚಿನ 3,983 ಕೋಟಿ ದೇಣಿಗೆ ಪಡೆದಿದ್ದರೆ, ಎರಡನೇ ಸ್ಥಾನದಲ್ಲಿರುವ ಬಿಜೆಪಿ 3,272 ಕೋಟಿ ದೇಣಿಗೆ ಪಡೆದಿದೆ.

ಸರಕಾರೇತರ ಸಂಸ್ಥೆಗಳ ರೀತಿಯಲ್ಲಿ ರಾಜಕೀಯ ಪಕ್ಷಗಳಿಗೂ ಬರುವ ದೇಣಿಗೆಯ ಮೇಲೆ ಕಣ್ಣಿಡಬೇಕು ಮತ್ತು ಅವುಗಳನ್ನು ಸಿಎಜಿ (ಕಮ್ಟ್ರೋಲರ್ ಆ್ಯಂಡ್ ಅಡಿಟರ್ ಜನರಲ್) ಲೆಕ್ಕ ಪರಿಶೀಲನೆಗೆ ಒಳಪಡಿಸಬೇಕು ಎಂದು 'ಎಡಿಆರ್' ಬೇಡಿಕೆ ಮುಂದಿಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
According to the Association for Democratic Reforms (ADR), the total income of 48 national and regional political parties between 2005 and 2015 were Rs. 11,367 crores. In which 69% were untraceable.
Please Wait while comments are loading...