INDIA ಪದದ ‘ಅಸಮರ್ಪಕ ಬಳಕೆ; 26 ವಿರೋಧ ಪಕ್ಷಗಳ ವಿರುದ್ಧ ದೂರು ದಾಖಲು

ದೆಹಲಿ ಜುಲೈ 19: 2024 ರ ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ವಿಪಕ್ಷಗಳು INDIA ಹೆಸರನ್ನ ಅಸಮರ್ಪಕವಾಗಿ ಬಳಸಿದ ಆರೋಪದ ಮೇಲೆ 26 ವಿರೋಧ ಪಕ್ಷಗಳ ವಿರುದ್ದ ದೂರು ದಾಖಲಾಗಿದೆ.

26 ವಿರೋಧ ಪಕ್ಷಗಳ ವಿರುದ್ಧ ದೆಹಲಿಯ ಬರಾಖಂಬಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದ್ದು, 26 ರಾಜಕೀಯ ಪಕ್ಷಗಳಲ್ಲಿ ಮೊದಲ ಸ್ಥಾನದಲ್ಲಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನುಚಿತ ಪ್ರಭಾವ ನಡೆಸುವ ಉದ್ದೇಶದಿಂದ ದೇಶದ ಹೆಸರನ್ನು ಅಸಮರ್ಪಕವಾಗಿ ಬಳಸಿಕೊಂಡಿದೆ ಎಂದು ಆರೋಪಿಸಲಾಗಿದೆ.

26 opposition parties

ಬೆಂಗಳೂರಿನಲ್ಲಿ ನಡೆದ ಜಂಟಿ ಸಭೆಯ ನಂತರ 26 ವಿರೋಧ ಪಕ್ಷಗಳು ತಮ್ಮ ಮೈತ್ರಿಗೆ 'ಇಂಡಿಯಾ' ಎಂಬ ಹೆಸರು ಘೋಷಿಸಿತ್ತು. ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಮತ್ತು ಗುರುತಿಸುವುದಕ್ಕಾಗಿ ಇಂಡಿಯಾ ಹೆಸರನ್ನು ಬಳಸಲಾಗಿದೆ. ಹಾಗಾಗಿ ಮೈತ್ರಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ದೂರುದಾರ ಡಾ.ಅವಿನೀಶ್ ಮಿಶ್ರಾ ಒತ್ತಾಯಿಸಿದ್ದಾರೆ.

ಮೈತ್ರಿಯ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ ಡಾ.ಅವಿನೀಶ್ ಮಿಶ್ರಾ, ಚುನಾವಣೆಯಲ್ಲಿ ಅನಗತ್ಯವಾಗಿ 'ಇಂಡಿಯಾ' ಎಂಬ ಪದವನ್ನು ಬಳಸಲಾಗುತ್ತಿದ್ದು, ಜನರ ಭಾವನೆಗಳಿಗೆ ಧಕ್ಕೆ ತಂದಿರುವ ಕಾರಣ ಪಕ್ಷಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ತಮ್ಮ ಮೈತ್ರಿಕೂಟವನ್ನು ಇಂಡಿಯಾ ಎಂದು ಹೆಸರಿಡುವ ಮೂಲಕ, ಈ ಪಕ್ಷಗಳು ತಮ್ಮ ಮೈತ್ರಿಯನ್ನು ರಾಷ್ಟ್ರವೆಂದು ನಿರೂಪಿಸುವ ಮೂಲಕ ಭಾರತೀಯ ಮತದಾರರ ಮೇಲೆ ಅನಗತ್ಯ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ.

ಇನ್ನೂ ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಉದ್ದೇಶದಿಂದ 26 ರಾಜಕೀಯ ಪಕ್ಷಗಳು ದೇಶದ ಹೆಸರನ್ನು ದುರ್ಬಳಕೆ ಮಾಡಿಕೊಂಡಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನೂ ಲಾಂಛನಗಳ ಕಾಯಿದೆಯ ಸೆಕ್ಷನ್ 2(ಸಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

1950ರ ಲಾಂಛನಗಳು ಮತ್ತು ಹೆಸರುಗಳ (ಅಸಮರ್ಪಕ ಬಳಕೆ ತಡೆಗಟ್ಟುವಿಕೆ) ಕಾಯಿದೆಯ ವಿಭಾಗ 3, ಅನುಚಿತ ಬಳಕೆಗಾಗಿ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಭಾರತ ಸರ್ಕಾರವು ಸೂಚಿಸದ ಹೊರತು ಲಾಂಛನಗಳು ಮತ್ತು ಹೆಸರುಗಳನ್ನು ವಹಿವಾಟುಗಳು, ವೃತ್ತಿಗಳು ಅಥವಾ ಯಾವುದೇ ರೀತಿಯ ವ್ಯಾಪಾರದಲ್ಲಿ ಒಳಗೊಂಡಿರುವ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಎಂದು ಕಾಯಿದೆಯು ನಿರ್ದಿಷ್ಟವಾಗಿ ಹೇಳುತ್ತದೆ.

ಲಾಂಛನಗಳ ಕಾಯಿದೆಯ ಸೆಕ್ಷನ್ 5, ಲಾಂಛನಗಳ ಕಾಯಿದೆಯ ಸೆಕ್ಷನ್ 3 ರ ನಿಬಂಧನೆಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ₹ 500 ದಂಡವನ್ನು ವಿಧಿಸಲು ಅವಕಾಶ ನೀಡುತ್ತದೆ ಎಂದು ಎಎನ್ಐ ವರದಿ ಉಲ್ಲೇಖಿಸಿದೆ.

ಇನ್ನೂ ರಿಪಬ್ಲಿಕ್ ನೊಂದಿಗೆ ಅವಿನೀಶ್ ಮಿಶ್ರಾ ಮಾತನಾಡಿ, ಪ್ರತಿಪಕ್ಷಗಳ ಕ್ರಮದ ಕಾನೂನು ಪರಿಣಾಮಗಳನ್ನು ಮೌಲ್ಯಮಾಪನ ಮಾಡಿದ ನಂತರ ದೂರು ಸಲ್ಲಿಸಿರುವುದಾಗಿ ಹೇಳಿದ ಅವರು, ಅವರ ರಾಜಕೀಯ ಅಜೆಂಡಾದಿಂದ ನನಗೆ ಯಾವುದೇ ತೊಂದರೆ ಇಲ್ಲ, ಆದರೆ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ದೇಶದ ಹೆಸರನ್ನು ಬಳಸುತ್ತಿದ್ದಾರೆ. ನಾನು ಕಾನೂನು ತಜ್ಞರೊಂದಿಗೆ ಈ ವಿಷಯವನ್ನು ಚರ್ಚಿಸಿದ್ದೇನೆ. ಚರ್ಚಿಸಿದ ಬಳಿಕವೇ 1950ರ ಲಾಂಛನ ಕಾಯ್ದೆಯಡಿ ನಾನು ಬರಾಖಂಬಾ ಪೊಲೀಸ್ ಠಾಣೆಗೆ ಹೋಗಿ ಲಿಖಿತ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+