ಐಡಿ ಕಾರ್ಡ್ ಕೊಡೋದು ತಡವಾಯ್ತು ಎಂದು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ
ಹರಿದ್ವಾರ, ನವೆಂಬರ್ 29: ಐಡಿ ಕಾರ್ಡ್ ಕೊಡುವುದು ತಡವಾಯ್ತು ಎಂದು ವ್ಯಕ್ತಿಯೊಬ್ಬ ರೈಲಿಗೆ ಬೆಂಕಿ ಹಚ್ಚಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ರಿಷಿಕೇಶದಿಂದ ದೆಹಲಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದಾನೆ. ಮೊದಲು ಅದು ಶಾರ್ಟ್ ಸರ್ಕ್ಯೂಟ್‌ನಂತೆ ಕಂಡರೂ ಕೂಡ ಕೊನೆಗೆ ಅದು ಬೇಕು ಎಂದೇ ಕೃತ್ಯವೆಸಗಿರುವುದು ಎಂದು ತಿಳಿದುಬಂದಿದೆ.
ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ, ಐಡಿ ಕಾರ್ಡ್ ನೀಡುವುದು ತಡವಾಯಿತು ಎನ್ನುವ ಕೋಪಕ್ಕೆ ರೈಲಿಗೆ ಬೆಂಕಿ ಹಚ್ಚಿದ್ದಾನೆ.

ಸೆಪ್ಟೆಂಬರ್ 6ರಂದು ಚಂಡೀಗಢ-ಕೋಚುವೇಲಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ರೈಲು ಪ್ಲಾಟ್‌ಫಾರ್ಮ್ ನಂಬರ್ 8ರಲ್ಲಿ ಇದ್ದಾಗ ಕಂಪಾರ್ಟ್‌ಮೆಂಟ್‌ನಲ್ಲಿ ಬೆಂಕಿಯ ಜ್ವಾಲೆ ಹೊತ್ತಿಕೊಂಡಿತ್ತು. ಎಂಟಕ್ಕೂ ಹೆಚ್ಚು ಅಗ್ನಿಶಾಮಕ ತಂಡದವರು ಬಂದು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದರು.











Click it and Unblock the Notifications