ಅತ್ಯಂತ ಜನಪ್ರಿಯ ಮೊಬೈಲ್ ಗೇಮ್ ಗೆ ನಿಷೇಧ

Posted By:
Subscribe to Oneindia Kannada

ಅಹಮದಾಬಾದ್, ಸೆ. 07: ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕ ಮೊಬೈಲ್ ಗೇಮ್ ಪೋಕೆಮಾನ್ ಗೋ ಗೆ ಗುಜರಾತಿನಲ್ಲಿ ನಿಷೇಧ ಹೇರಲಾಗಿದೆ. ಪೋಕೆಮಾನ್ ಗೋ ಆಟವು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಿದೆ ಎಂದು ಗುಜರಾತಿನ ಹೈಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.

ಪೋಕೆಮಾನ್ ಗೋ ಆಟಕ್ಕೆ ನಿಷೇಧ ಹಾಗೂ ಪೋಕೆಮಾನ್ ಗೋ ಅಭಿವೃದ್ಧಿ ಪಡಿಸಿದ ತಂಡದ ಮೇಲೆ ಕ್ರಮ ಜರುಗಿಸುವಂತೆ ಹೈಕೋರ್ಟ್ ಸೂಚಿಸಿದೆ. ಜಸ್ಟೀಸ್ ಸುಭಾಶ್ ರೆಡ್ಡಿ ಹಾಗೂ ವಿಪುಲ್ ಪಂಚಾಲಿ ಅವರಿದ್ದ ನ್ಯಾಯಪೀಠ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಗೇಮ್ ಡೆವಲಪರ್ ನಿಯಾಂಟಿಕ್ ಐಎನ್ ಸಿಗೆ ನೋಟಿಸ್ ಜಾರಿ ಮಾಡಿದೆ.

Pokemon Go hurts Hindu sentiments; Gujarat HC issues notices on plea seeking ban

ಪೋಕೆಮಾನ್ ಗೋ ರಿಯಾಲಿಟಿ ಗೇಮ್ ನಲ್ಲಿ ಬರುವ ಮೊಟ್ಟೆಗಳ ಬಗ್ಗೆ ಅಲಾಯ್ ಅನಿಲ್ ದವೆ ಎಂಬುವವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮೊಟ್ಟೆಗಳು ಮಾಂಸಾಹಾರಿಗಳ ಆಹಾರವಾಗಿದ್ದು, ಇದರಿಂದ ಹಿಂದೂಗಳಿಗೆ ಅದರಲ್ಲೂ ಜೈನರಿಗೆ ಅವಮಾನ ಮಾಡಿದಂತೆ ಆಗುತ್ತದೆ.

ಹಿಂದೂ ಧಾರ್ಮಿಕ ದೇಗುಲಗಳಲ್ಲಿ ಇಂಥ ಆಟವಿರುವ ಮೊಬೈಲ್ ಗಳನ್ನು ನಿಷೇಧಿಸಬೇಕು. ಈ ಆಟದಲ್ಲಿ ಮೊಟ್ಟೆ ರೂಪದಲ್ಲಿ ಅಂಕಗಳು ಸಿಗುತ್ತವೆ ಇದೆಲ್ಲವೂ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತವೆ ಎಂದು ಆರೋಪಿಸಿದ್ದರು. ಇವರ ವಾದವನ್ನು ಪುರಸ್ಕರಿಸಿದ ಕೋರ್ಟ್, ಗೇಮ್ ನಿಷೇಧಕ್ಕೆ ಆದೇಶಿಸಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Gujarat High Court on Wednesday issued notices on a petition seeking action against the developers of the game Pokemon Go as it hurt Hindu sentiments.
Please Wait while comments are loading...