• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿರಿಯ ನಾಗರಿಕರಿಗೆ ಶುಭ ಸುದ್ದಿ ನೀಡಿದ ಮೋದಿ ಸರ್ಕಾರ

|

ನವದೆಹಲಿ, ಮೇ 20: ಹಿರಿಯ ನಾಗರಿಕರು(60 ಮತ್ತು ಅದಕ್ಕಿಂತ ಮೇಲ್ಪಟ್ಟ) ಪಿಂಚಣಿ ಸೌಲಭ್ಯ ಒದಗಿಸುವ ಯೋಜನೆಯಾಗಿರುವ ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ)ಯನ್ನು ವಿಸ್ತರಿಸಲಾಗಿದೆ. ಈ ಮೂಲಕ ಲಾಕ್ದೌನ್ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರವು ನೆಮ್ಮದಿಯ ಸುದ್ದಿ ಕೊಟ್ಟಿದೆ.

   ಸೀಲ್ ಡೌನ್ ಇದ್ದರು ಪಾದರಾಯನಪುರ ಜನ ಡೋಂಟ್ ಕೇರ್ | Seal Down | Padarayapura

   ಈ ಯೋಜನೆಯ ಕೊನೆ ದಿನಾಂಕವನ್ನು 2020 ರ ಮಾರ್ಚ್ 31 ರ ಬದಲಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ಹೀಗಾಗಿ 2023 ಮಾರ್ಚ್ 31 ರವರೆಗೆ ವಿಸ್ತರಣೆಗೊಂಡಿದೆ. ಈ ಕುರಿತ ಬದಲಾವಣೆಗೆ ಕೇಂದ್ರ ಸಚಿವ ಸಂಪುಟವು ಬುಧವಾರಂದು ಅನುಮೋದನೆ ನೀಡಿದೆ.

   ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಲಾಭ ಘೋಷಿಸಿದ ಮೋದಿ ಸರ್ಕಾರಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಲಾಭ ಘೋಷಿಸಿದ ಮೋದಿ ಸರ್ಕಾರ

   ಪಿಎಂವಿವಿವೈ ವಿಸ್ತರಣೆಯು ವೃದ್ಧಾಪ್ಯದ ಆದಾಯ ಸುರಕ್ಷತೆ ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕೆ ಅನುವು ಮಾಡಿಕೊಡುತ್ತದೆ. ಪಿಎಂವಿವಿವೈ ಪಿಂಚಣಿ ದರ ಶೇ. 8ರಷ್ಟಿದ್ದು, 10 ವರ್ಷಗಳ ಪಿಂಚಣಿ ಅವಧಿ/ಪಾಲಿಸಿ ಅವಧಿ ಇರುತ್ತದೆ. ಆದರೆ, ಈಗ ಪ್ರಸಕ್ತ ಸಾಲಿನಲ್ಲಿ ಪಿಂಚಣಿ ದರವನ್ನು ಶೇ 7.4ಕ್ಕೆ ಇಳಿಸಲಾಗಿದೆ. ಪ್ರತಿ ವರ್ಷ ಪಿಂಚಣಿ ದರವನ್ನು ಬದಲಾಯಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

    ಪಿಂಚಣಿ ಪಡೆಯುವ ಆಯ್ಕೆ ನೀಡಲಾಗಿದೆ

   ಪಿಂಚಣಿ ಪಡೆಯುವ ಆಯ್ಕೆ ನೀಡಲಾಗಿದೆ

   ಪಿಎಂವಿವಿವೈನಲ್ಲಿ ಹೂಡಿಕೆ ಮಾಡಲು, ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಯೋಜನೆಯನ್ನು ನೀಡಲು ಸರ್ಕಾರವು ಅನುಮತಿಸುವ ಏಕೈಕ ಸಂಸ್ಥೆಯಾದ ಕಾರಣ ಎಲ್‌ಐಸಿಯನ್ನು ಸಂಪರ್ಕಿಸಬೇಕು. ಈ ಸ್ಕೀಮ್ ಎಲ್ಐಸಿ ಮುಖಾಂತರ ಖರೀದಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

   ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಹೀಗೆ ನೀವು ಆಯ್ಕೆ ಮಾಡಿದ ಅವಧಿಯ ಕೊನೆಯಲ್ಲಿ ಪಿಂಚಣಿ ಪಡೆಯಬಹುದು.
   ಹೂಡಿಕೆ ಮೊತ್ತ, ಅವಧಿ ಮಾಸಿಕ ಅವಧಿ

   ಹೂಡಿಕೆ ಮೊತ್ತ, ಅವಧಿ ಮಾಸಿಕ ಅವಧಿ

   * ಮಾಸಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1.50 ಲಕ್ಷ; ಗರಿಷ್ಠ ಹೂಡಿಕೆ: ರೂ. 7.50 ಲಕ್ಷ ರು
   * ತ್ರೈಮಾಸಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,49,068; ಗರಿಷ್ಠ ಹೂಡಿಕೆ: ರೂ. 7,45,342
   * ಅರ್ಧವಾರ್ಷಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,47,601; ಗರಿಷ್ಠ ಹೂಡಿಕೆ: ರೂ. 7,38,007
   *ವಾರ್ಷಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,44,578; ಗರಿಷ್ಠ ಹೂಡಿಕೆ: ರೂ. 7,22,892

    ಪಿಂಚಣಿ ಮೊತ್ತ

   ಪಿಂಚಣಿ ಮೊತ್ತ

   ಹಿರಿಯ ನಾಗರಿಕರು ಪಿಂಚಣಿ ಮೊತ್ತವನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಪಡೆಯಬಹುದು.
   * ಮಾಸಿಕ ಅವಧಿ: ಕನಿಷ್ಟ ಪಿಂಚಣಿ: ರೂ. 1,000/; ಗರಿಷ್ಠ ಪಿಂಚಣಿ: ರೂ. 5,000/
   * ತ್ರೈಮಾಸಿಕ ಅವಧಿ: ಕನಿಷ್ಟ ಪಿಂಚಣಿ: ರೂ. 3,000/; ಗರಿಷ್ಠ ಪಿಂಚಣಿ: ರೂ. 15,000/
   * ಅರ್ಧವಾರ್ಷಿಕ ಅವಧಿ: ಕನಿಷ್ಟ ಪಿಂಚಣಿ: ರೂ. 6,000/ ಗರಿಷ್ಠ ಪಿಂಚಣಿ: ರೂ. 30,000/
   * ವಾರ್ಷಿಕ ಅವಧಿ: ಕನಿಷ್ಟ ಪಿಂಚಣಿ: ರೂ. 12,000/ ಗರಿಷ್ಠ ಪಿಂಚಣಿ: ರೂ. 60,000/

    ಪಿಂಚಣಿದಾರರು ಮರಣ ಹೊಂದಿದಲ್ಲಿ

   ಪಿಂಚಣಿದಾರರು ಮರಣ ಹೊಂದಿದಲ್ಲಿ

   ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ವಾರ್ಷಿಕ ಮರುಹೊಂದಿಸುವ ದರವನ್ನು ಅನುಮೋದಿಸಲು ಹಣಕಾಸು ಸಚಿವರಿಗೆ ಅಧಿಕಾರವನ್ನು ನೀಡಲಾಗಿದೆ. 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ 7.40% ನಷ್ಟು ಆದಾಯದ ದರವನ್ನು ಆರಂಭದಲ್ಲಿ ಅನುಮತಿಸಲು ಮತ್ತು ನಂತರ ಪ್ರತಿ ವರ್ಷ ಮರುಹೊಂದಿಸಬಹುದಾಗಿದೆ. ಪಿಎಂವಿವಿವೈ ಪಾಲಿಸಿ ಅವಧಿಯಲ್ಲಿ ಪಿಂಚಣಿದಾರರು ಮರಣ ಹೊಂದಿದಲ್ಲಿ, ಖರೀದಿ ಮೊತ್ತವನ್ನು ನಾಮಿನಿಗೆ/ಫಲಾನುಭವಿಗೆ ಹಿಂದಿರುಗಿಸಲಾಗುತ್ತದೆ. ಒಂದು ವೇಳೆ ಯಾವುದೇ ನಾಮಿನಿ ಇಲ್ಲದಿದ್ದರೆ ಕಾನೂನುಬದ್ದ ಉತ್ತರಾಧಿಕಾರಿಗೆ ಮೊತ್ತ ಸಲ್ಲಲಿದೆ.

   English summary
   Pradhan Mantri Vaya Vandana Yojana (PMVVY), a social security scheme for senior citizens has been extended till March 2023 but Union cabient has fixed rate of return to 7.4 pc from 8 pc.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X