• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೈಟ್ ಹೌಸ್ ಯೋಜನೆಗಳಿಗೆ ಜ 1 ರಂದು ಮೋದಿಯಿಂದ ಶಿಲಾನ್ಯಾಸ

|

ನವದೆಹಲಿ, ಡಿ. 31: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ (ಜಿಎಚ್‌ಟಿಸಿ-ಇಂಡಿಯಾ) ಅಡಿಯಲ್ಲಿ ಲೈಟ್ ಹೌಸ್ ಯೋಜನೆಗಳ (ಎಲ್‌ಎಚ್‌ಪಿ) ಶಿಲಾನ್ಯಾಸವನ್ನು 2021ರ ಜನವರಿ 1 ರಂದು ನೆರವೇರಿಸಲಿದ್ದಾರೆ.

ಪ್ರಧಾನಿಯವರು ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆರು ರಾಜ್ಯಗಳ ಆರು ಸ್ಥಳಗಳಲ್ಲಿ ಶಿಲಾನ್ಯಾಸ ಮಾಡಲಿದ್ದಾರೆ. ಪ್ರಧಾನ ಮಂತ್ರಿಯವರು ಇದೇ ಸಂದರ್ಭದಲ್ಲಿ ಕೈಗೆಟುಕುವ ಸುಸ್ಥಿರ ವಸತಿ ವೇಗವರ್ಧಕಗಳು - ಭಾರತ (ಆಶಾ-ಇಂಡಿಯಾ) ದ ವಿಜೇತರನ್ನು ಘೋಷಿಸಲಿದ್ದಾರೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ - ನಗರ (ಪಿಎಂಎವೈ-ಯು) ಮಿಷನ್ ನ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ, ನವಾರಿತಿಹ್ (ಹೊಸ, ಕೈಗೆಟುಕುವ, ಮೌಲ್ಯೀಕರಿಸಿದ, ಭಾರತೀಯ ವಸತಿಗಾಗಿ ಸಂಶೋಧನಾ ನಾವೀನ್ಯತೆ ತಂತ್ರಜ್ಞಾನಗಳು) ಹೆಸರಿನ ನವೀನ ನಿರ್ಮಾಣ ತಂತ್ರಜ್ಞಾನಗಳ ಪ್ರಮಾಣಪತ್ರ ಕೋರ್ಸ್ ಮತ್ತು ಜಿಎಚ್‌ಟಿಸಿ-ಇಂಡಿಯಾ ಮೂಲಕ ಗುರುತಿಸಲಾದ 54 ನವೀನ ವಸತಿ ನಿರ್ಮಾಣ ತಂತ್ರಜ್ಞಾನಗಳ ಸಂಗ್ರಹವನ್ನು ಪ್ರಧಾನಿಯವರು ಬಿಡುಗಡೆ ಮಾಡಲಿದ್ದಾರೆ.

ತ್ರಿಪುರ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ತಮಿಳುನಾಡು ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವರು ಉಪಸ್ಥಿತರಿರುತ್ತಾರೆ.

ಲೈಟ್ ಹೌಸ್ ಯೋಜನೆಗಳು

ಲೈಟ್ ಹೌಸ್ ಯೋಜನೆಗಳು (ಎಲ್‌ಎಚ್‌ಪಿಗಳು) ದೇಶದಲ್ಲಿ ಮೊದಲ ಬಾರಿಗೆ ನಿರ್ಮಾಣ ಕ್ಷೇತ್ರದಲ್ಲಿ ಹೊಸ-ಯುಗದ ಪರ್ಯಾಯ ಜಾಗತಿಕ ತಂತ್ರಜ್ಞಾನಗಳು, ವಸ್ತುಗಳು ಮತ್ತು ಪ್ರಕ್ರಿಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಒಳಗೊಂಡಿವೆ.

ಅವುಗಳನ್ನು ಜಿಎಚ್‌ಟಿಸಿ-ಇಂಡಿಯಾ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ವಸತಿ ನಿರ್ಮಾಣ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನಗಳನ್ನು ಸಮಗ್ರ ರೀತಿಯಲ್ಲಿ ಅಳವಡಿಸಿಕೊಳ್ಳಲು ಪರಿಸರ ವ್ಯವಸ್ಥೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಇಂದೋರ್ (ಮಧ್ಯಪ್ರದೇಶ), ರಾಜ್‌ಕೋಟ್ (ಗುಜರಾತ್), ಚೆನ್ನೈ (ತಮಿಳುನಾಡು), ರಾಂಚಿ (ಜಾರ್ಖಂಡ್), ಅಗರ್ತಲಾ (ತ್ರಿಪುರ) ಮತ್ತು ಲಕ್ನೋ (ಉತ್ತರ ಪ್ರದೇಶ) ಗಳಲ್ಲಿ ಎಲ್‌ಎಚ್‌ಪಿಗಳನ್ನು ನಿರ್ಮಿಸಲಾಗುತ್ತಿದೆ.

ಸಂಬಂಧಿತ ಮೂಲಸೌಕರ್ಯ ಸೌಲಭ್ಯಗಳೊಂದಿಗೆ ಪ್ರತಿ ಸ್ಥಳದಲ್ಲಿ ಸುಮಾರು 1000 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಸಾಂಪ್ರದಾಯಿಕ ಇಟ್ಟಿಗೆ ಮತ್ತು ಗಾರೆ ನಿರ್ಮಾಣಕ್ಕೆ ಹೋಲಿಸಿದರೆ ಈ ಯೋಜನೆಗಳು ಹನ್ನೆರಡು ತಿಂಗಳಲ್ಲಿಯೇ ವಾಸಿಸಲು ಸಿದ್ಧವಾದ ಮನೆಗಳನ್ನು ನಿರ್ಮಿಸುತ್ತವೆ. ಇವು ಉತ್ತಮ ಗುಣಮಟ್ಟದ, ಬಾಳಿಕೆ ಬರುವ, ಕಡಿಮೆ ವೆಚ್ಚದ, ಸುಸ್ಥಿರ ಮನೆಗಳಾಗಿರುತ್ತವೆ.

English summary
PM Narendra Modi will lay the foundation stone of Light House Projects (LHPs) under Global Housing Technology Challenge-India (GHTC-India) at six sites across six States on 1st January 2021 via video conferencing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X