2015ರಿಂದ ಪ್ರಧಾನಿ ನರೇಂದ್ರ ಮೋದಿ 58 ದೇಶಗಳಿಗೆ ಭೇಟಿ: 518 ಕೋಟಿ ರೂ. ಖರ್ಚು
ನವದೆಹಲಿ, ಸೆಪ್ಟೆಂಬರ್ 22: ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಕೋವಿಡ್-19ಗೂ ಮುನ್ನ ಅನೇಕ ರಾಷ್ಟ್ರಗಳಿಗೆ ಭೇಟಿ ನೀಡಿ ದ್ವಿಪಕ್ಷೀಯ ಒಪ್ಪಂದಗಳಿಗೆ ಸಾಕ್ಷಿಯಾಗಿದ್ದಾರೆ.
ಹೀಗೆ ಪ್ರಧಾನಿ ಮೋದಿಯವರು ಎಷ್ಟು ದೇಶಗಳಿಗೆ ಭೇಟಿ ನೀಡಿದ್ದು, ಖರ್ಚು ಎಷ್ಟಾಗಿದೆ ಎಂದು ಕೇಳಲಾದ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರ ಸಿಕ್ಕಿದೆ.
''ಪ್ರಧಾನಿ ನರೇಂದ್ರ ಮೋದಿ 2015 ರಿಂದ 58 ದೇಶಗಳಿಗೆ ಭೇಟಿ ನೀಡಿದ್ದಾರೆ. ಈ ಪ್ರವಾಸಗಳಿಗೆ 517.82 ಕೋಟಿ ರೂ. ಖರ್ಚು ಮಾಡಲಾಗಿದೆ'' ಎಂದು ವಿದೇಶಾಂಗ ಸಚಿವ ವಿ ಮುರಳೀಧರನ್ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಈ ಮೂಲಕ ಕಳೆದ ಐದು ವರ್ಷದಲ್ಲಿ ಮೋದಿ ಬರೋಬ್ಬರಿ 58 ದೇಶಗಳಿಗೆ ಭೇಟಿ ನೀಡಿದ್ದು, ಈ ಪ್ರವಾಸಗಳಿಗೆ ಪ್ರಯಾಣದ ವೆಚ್ಚ, ಭದ್ರತೆ ಸೇರಿದಂತೆ ಸುಮಾರು 518 ಕೋಟಿ ರೂಪಾಯಿ ಖರ್ಚು ಆಗಿದೆ.












Click it and Unblock the Notifications